ಸಚಿವ ವೆಂಕಟರಮಣಪ್ಪನವರ ವಿರುದ್ದ ಹರಿಹಾಯ್ದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ.

0
26

ಪಾವಗಡ:

       ತಾಲ್ಲೂಕಿನಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ, ಪೊಲೀಸರು, ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ, ದೌರ್ಜನ್ಯ ಮತ್ತು ದಬ್ಬಾಳಿಕೆಯ ಆಡಳಿತವನ್ನು ಸಚಿವರು ಮುಂದುವರಿಸಿದರೆ ತಾಲ್ಲೂಕಿನ ಜನರೊಂದಿಗೆ ಸೇರಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್ ಮಾಜಿ ಶಾಸಕ ತಿಮ್ಮರಾಯಪ್ಪ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

      ವಿಧಾನ ಸಭಾ ಚುನಾವಣೆಗೂ ಮುಂಚೆ ನಾನು ಶಾಸಕನಾಗಿದ್ದಾಗ 2017-18ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೆ ಅವುಗಳ ಅನುಷ್ಠಾನಕ್ಕೆ ಕ್ಷೇತ್ರದ ಶಾಸಕರೂ ಹಾಗೂ ಸಚಿವರೂ ಆದ ವೆಂಕಟರಮಣಪ್ಪನವರು ಮತ್ತು ಬೆಂಬಲಿಗರು ಸೇರಿ ಕಾಮಗಾರಿಗಳನ್ನು ತಡೆಹಿಡಿದು ಬರಪೀಡಿತ ತಾಲ್ಲೂಕಿನ ಜನರ ಮೇಲೆ ದೌಜ್ರ್ಯನ್ಯವೆಸಗುತ್ತಿದ್ದಾರೆ, ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಬೇಸರ ವ್ಯಕ್ತಪಡಿಸಿದರು.

       ತಾಲ್ಲೂಕಿನ ವದನಕಲ್ಲು, ಹುಸೇನ್ಪುರ, ನಾಗಲಾಪುರ, ಚಿಕ್ಕಳ್ಳಿ, ಮತ್ತು ಹೊಸಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಚಿವರ ಬೆಂಬಲಿಗರು ದೌರ್ಜನ್ಯ ಮಾಡಿ ಬೋರ್ ವೆಲ್ ಪಂಪ್ ಸೆಟ್‍ಗಳನ್ನು ನಾಶ ಪಡಿಸಿ ಲಕ್ಷಾಂತರ ರೂ. ಹಾನಿಮಾಡಿದ್ದಾರೆ, ವಸತಿ ವಿಚಾರದಲ್ಲಿ ಅತಿದೊಡ್ಡ ಮಟ್ಟದ ದಬ್ಬಾಳಿಕೆ ನಡೆಯುತ್ತಿದೆ, ಪೊಲೀಸರು ಮೊಕದ್ದಮೆಗಳನ್ನು ದಾಖಲಿಸದೆ ಏಜೆಂಟರಂತೆ ವರ್ತಿಸುತ್ತಿರುವುದು ವಿಷಾಧನೀಯ ಎಂದರು.

      ಈ ಸಂದರ್ಬದಲ್ಲಿ ತಾಲೂಕು ಜೆ.ಡಿ.ಎಸ್. ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಜಿಲ್ಲಾ ಕಾರ್ಯಾದ್ಯಕ್ಷ ಆರ್.ಸಿ.ಅಂಜಿನಪ್ಪ, ತಾ. ಜೆಡಿಎಸ್ ಗೌರವಾಧ್ಯಕ್ಷ ರಾಜಶೇಖರಪ್ಪ, ತಾ.ಜೆಡಿಎಸ್ ವಕ್ತಾರ ಅಕ್ಕಲಪ್ಪನಾಯ್ಡು, ಪುರಸಭಾ ಸದಸ್ಯರಾದ ವಸಂತ್ ಕುಮಾರ್, ಮುಖಂಡರಾದ ಮು.ನರಸಿಂಹಪ್ಪ, ಲೋಕೇಶ್ ರಾವ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here