ಶಿರಾ ಅಂಬಾ ಭವಾನಿ ದೇವಸ್ಥಾನದಲ್ಲಿ ಆರತಿ ಮಹೋತ್ಸವ

ಶಿರಾ

            ನಗರದ ಶ್ರೀರಾಮ ಯುವಕ ಸಂಘದ ವತಿಯಿಂದ ಬನ್ನಿ ನಗರದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆರತಿ ಮಹೋತ್ಸವವನ್ನು ಕೈಗೊಳ್ಳಲಾಗಿತ್ತು.

            ಆರತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಬಿ.ಸತ್ಯನಾರಾಯಣ್ ಮಾತನಾಡಿ, ದೈವತ್ವದ ಸಂಕಲ್ಪಗಳಿಂದ ನಮ್ಮ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಇಂಗಿತ ಇಂದಿಗೂ ನಮ್ಮ ಜನ ಸಾಮಾನ್ಯರಲ್ಲಿದ್ದು ಶ್ರದ್ಧಾಭಕ್ತಿಗಳಿಂದ ಏನನ್ನಾದರೂ ಸರಿ ಗೆಲ್ಲುವ ಅಚಲ ವಿಶ್ವಾಸ ನಮ್ಮ ದೇಶದ ಸಂಸ್ಕತಿಯೂ ಆಗಿದೆ ಎಂದರು.

           ದೇವರಲ್ಲಿ ನಂಬಿಕೆ ಇಟ್ಟು ಪೂಜಿಸುವ ಹಾಗೂ ನಿರಾಶ್ರಿತರಿಗೆ ಆಶ್ರಯ ನೀಡುವ ಕಾಯಕಗಳಿಂದ ನಮ್ಮ ಮನಸ್ಸಿಗೆ ಶಾಂತಿಯೂ ಲಭಿಸಲಿದೆ. ಶ್ರೀ ಅಂಬಾ ಭವಾನಿ ದೇವಿಗೆ ದೇಶದಲ್ಲಿ ತನ್ನದೇ ಆದ ಐತಿಹ್ಯವಿದ್ದು ದೇವಾಲಯದ ಜೀರ್ಣೋದ್ದಾರವೂ ಆಗಬೇಕಿದೆ ಎಂದು ಶಾಸಕ ಬಿ.ಸತ್ಯನಾರಾಯಣ್ ಹೇಳಿದರು.

            ಸಂಘದ ಅಧ್ಯಕ್ಷ ಸುಬ್ಬರಾಯಪ್ಪ, ಕಾರ್ಯದರ್ಶಿ ದಿಬ್ಬಣ್ಣ, ರಾಮಲಿಂಗಪ್ಪ, ಭೋಜರಾಜು, ರಮೇಶ್‍ಬಾಬು, ಭೀಮರಾಜು, ಈರಣ್ಣ, ತಿಪ್ಪಣ್ಣ, ಮೂಡ್ಲಪ್ಪ, ನಟರಾಜು, ಹಾಲಪ್ಪ, ರಂಗನಾಥ್, ಗಿರೀಶ್, ನಗರಸಭಾ ಸದಸ್ಯ ಆಂಜಿನಪ್ಪ, ಆರ್.ರಾಮು, ಜಿ.ಪಂ. ಸದಸ್ಯ ರಾಮಕೃಷ್ಣ, ರವಿಕುಮಾರ್, ಟಿ.ಡಿ.ಮಲ್ಲೇಶ್, ದಿಬ್ಬಣ್ಣ, ಶ್ರೀನಿವಾಸ್, ಹಾಲಪ್ಪ, ಕೆಂಚೆಗೌಡ, ಶಿವು ಮುಂತಾದವರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link