ಸೈನಿಕ ಹುಳು ಭಾಧೆ ನಿವಾರಣಗೆ ಸೂಕ್ತ ಕ್ರಮ: ಕೃಷಿ ಅಧಿಕಾರಿ ವಿ.ಪಿ. ಗೋವರ್ಧನ

ಹರಿಹರ:

         ತಾಲೂಕಿನಲ್ಲಿ 2,500 ಹೆಕ್ಟೇರ್ ಪ್ರದೇಶದ ಮೆಕ್ಕೆ ಜೋಳ ಬೆಳೆಗೆ ಸೈನಿಕ ಹುಳು ಭಾಧೆಗೆ ತುತ್ತಾಗಿದ್ದು, ರೋಗದ ಹತೋಟಿಗಿ ಗ್ರಾಮಗಳಲ್ಲಿ ಸಂಭೆ ನಡೆಸಿ, ಸೂಕ್ತ ಔಷಧೋಪಚಾರಗಳ ನೀಡುವ ಮೂಲಕ ಹುಳು ಭಾದೆ ನಿವಾರಣಗೆ ಕ್ರಮ ಜರುಗಿಸಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ವಿ.ಪಿ. ಗೋವರ್ಧನ ತಿಳಿಸಿದರು.

          ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕಿನಲ್ಲಿ 2,500 ಹೆಕ್ಟೇರ್ ಪ್ರದೇಶದ ಮೆಕ್ಕೆ ಜೋಳ ಸೈನಿಕ ಹುಳು ಭಾಧೆಗೆ ತುತ್ತಾಗಿದೆ. ಈ ರೋಗದ ಹತೋಟಿಗಾಗಿ ಗ್ರಾಮಗಳಲ್ಲಿ ಸಂಭೆ ನಡೆಸಿ, ಸೂಕ್ತ ಔಷಧೋಪಚಾರಗಳ ನೀಡುವ ಮೂಲಕ ಹುಳು ಭಾದೆ ನಿವಾರಣಗೆ ಕ್ರಮ ಜರುಗಿಸಲಾಗಿದೆ. ಬೆಳೆ ವಿಮೆಯ ಪರಿಷ್ಕರಣೆಗಾಗಿ ವರದಿ ಸಲ್ಲಿಸಲಾಗಿದೆ. ಈ ಸಾಲಿನಲ್ಲಿ 6 ಸಾವಿರ ತಾಡಪಾಲುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸೂಕ್ತ ಸಮಯದಲ್ಲಿ ರೈತರಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

          ತಾಲೂಕಿನಲ್ಲಿ ಶೇ. 75ರಷ್ಟು ಹಿಂಗಾರು ಮಳೆಯಾಗಿದ್ದು, ಒಟ್ಟು 125 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಅನಾವೃಷ್ಟಿಯಿಂದ 4135 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿರುವ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.

          ತಾಲೂಕಿನಲ್ಲಿ ಶೇ. 75ರಷ್ಟು ಹಿಂಗಾರು ಮಳೆಯಾಗಿದ್ದು, ಒಟ್ಟು 125 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಅನಾವೃಷ್ಟಿಯಿಂದ 4135 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿರುವ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.

          ತಾ.ಪಂ ಸದಸ್ಯ ಎನ್.ಪಿ. ಬಸವಲಿಂಗಪ್ಪ ಮಾತನಾಡಿ, ರೈತರಿಗೆ ಬೆಳೆ ಕಟಾವಿನ ಸಂಧರ್ಭದಲ್ಲಿ ನೀಡಬೇಕಿದ್ದ ತಾಡಪಾಲುಗಳನ್ನು ತಡವಾಗಿ ನೀಡಿದ ಹಿನ್ನೆಲೆ ರೈತರಿಗ ಅನಾನುಕೂಲವಾಗಿದೆ. ಸೂಕ್ತ ಸಮಯಲದಲಿ ತಾಡಪಾಲು ವಿತರಿಸಿ ಎಂದು ಆಗ್ರಹಿಸಿದರು.

            ಭತ್ತ ಖರೀದಿ ಕೇಂದ್ರದಲ್ಲಿ ರೈತರಿಂದ ಭತ್ತ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ. ಈ ನೀತಿಯಿಂದ ರೈತರು ಖರೀದಿ ಕೇಂದ್ರದ ಬದಲು ಖಾಸಗಿ ವ್ಯಾಪ್ಯಾರಿಗಳಿಗೆ ಭತ್ತ ಮಾರಾಟ ಮಾಡುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

           ಬೇಸಿಗೆ ಹಂಗಾಮಿನಲ್ಲಿ 7 ಗಂಟೆ ನಿರಂತರವಾಗಿ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಿ ಹಾಗೂ ಟ್ರಾನ್ಯ್‍ಫಾರ್ಮರ್‍ಗಳ ನಿರ್ವಹಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ಮನವಿ ಮಾಡಿದರು.

            ಆಹಾರ ನಿರೀಕ್ಷಕ ರಮೇಶ್ ಮಾತನಾಡಿ, ಸರ್ಕಾರ, ಕೇಂದ್ರದಲ್ಲಿ ನೊಂದಾಯಿಸಿದ ಪ್ರತಿ ರೈತರಿಂದ 40 ಕ್ವಿಂಟಾಲ್ ಖರೀದಿಗೆ ಅವಕಾಶ ನೀಡಿದೆ. ಸಾಮಾನ್ಯ ಭತ್ತಕ್ಕೆ ರೂ.1,750 ಹಾಗೂ ಉತ್ತಮ ಭತ್ತಕ್ಕೆ ರೂ 1,770 ಬೆಲೆ ನಿಗದಿಪಡಿಸಿದೆ. ಖರೀದಿ ಕೇಂದ್ರದ ಸ್ಥಾಪನೆಯಿಂದ ಮಾರುಕಟ್ಟೆಯಲ್ಲಿ ಭತ್ತದ ದರ ಏರಿಕೆಯಾಗಿತ್ತಿದೆ ಎಂದರು.

           ಬೆಸ್ಕಾಂ ಉಪವಿಭಾಗದ ಎಂಜಿನಿಯರ್ ರಮೇಶ್ ಮಾತನಾಡಿ, ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

           ಬಿಇಓ ಡಿ. ನರಸಿಂಹಪ್ಪ ಮಾತನಾಡಿ, ಈ ಸಾಲಿನಲ್ಲಿ ಪುಸ್ತಕ ಹಾಗೂ ಸಮವಸ್ತ್ರಒಟ್ಟು 2475 ಸೈಕಲ್‍ಗಳನ್ನು ವಿತರಿಸಲಾಗಿದೆ. ವಿಶ್ವಾಸ ಕಿರಣ ಯೋಜನೆಯಡಿಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ನಗರದ ಡಿಆರ್‍ಎಂ ಶಾಲೆ ಹಾಗೂ ಮಲೆಬೇನ್ನೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 12.30 ರಿಂದ ಸಂಜೆ 4.30ರ ವರಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ತಾಲ್ಲೂಕಿನ 3 ಕೇಂದ್ರಗಳಲ್ಲಿ ಪರೀಕ್ಷಾ ಸಿದ್ಧತಾ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಚಂದ್ರಮೋಹನ್ ಮಾತನಾಡಿ, ಸರ್ಕಾರದಿಂದ ನೀಡಲಾಗುತ್ತಿದ್ದ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ. ಸಾರ್ವಜನಿಕರು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‍ನೊಂದಿಗೆ ನೊಂದಾಯಿಸಿಕೊಂಡು ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡದಿರು

            ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಯಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜಪ್ಪ, ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link