ವಿಜಯ ದಶಮಿ ಪ್ರಯುಕ್ತ ಆಟೋ ರ್ಯಾಲಿ

ದಾವಣಗೆರೆ:

    ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿಯಿಂದ ವಿಜಯ ದಶಮಿ ಅಂಗವಾಗಿ ನಗರದಲ್ಲಿ ಸೋಮವಾರ ಬೃಹತ್ ಆಟೋ ರ್ಯಾಲಿ ನಡೆಯಿತು.

    ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಿಂದ ಆರಂಭಗೊಂಡ ರ್ಯಾಲಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ಡಿವೈಎಸ್ಪಿ ನಾಗರಾಜ್ ಅವರಿಂದ ಚಾಲನೆ ಪಡೆದ ಆಟೋ ರ್ಯಾಲಿಯು ವಿನೋಬ ನಗರ, ವಾಟರ್ ಟ್ಯಾಂಕ್, ಕೆಟಿಜೆ ನಗರ, ಭಗತ್ ಸಿಂಗ್ ನಗರ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿದ ರ್ಯಾಲಿಯು ಬೀರಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ ಮುಕ್ತಾಯವಾಯಿತು.

     ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಕೆ.ಬಿ.ಶಂಕರನಾರಾಯಣ, ಪಿ.ಸಿ.ಶ್ರೀನಿವಾಸ್, ಹೆಚ್.ಎಸ್.ನಾಗರಾಜ್, ಎನ್.ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಸತೀಶ್ ಪೂಜಾರಿ, ದೇವರಮನಿ ಶಿವಕುಮಾರ್, ಸೋಗಿ ಶಾಂತಕುಮಾರ್, ಟಿಂಕರ್ ಮಂಜಣ್ಣ, ಗುಬ್ಬಿ ಬಸವರಾಜ್, ಶಂಕರಗೌಡ ಬಿರಾದರ್ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link