ಬಳ್ಳಾರಿಯ ಡೇಂಜರ್ ಗ್ಯಾಂಗ್ ….!!!!!!!

ಬಳ್ಳಾರಿ: 

     ಓದ ಬೇಕಾದ ವಯಸ್ಸಿನಲ್ಲಿ ಶಾಲೆಗೆ ಹೋಗುವ ಮಕ್ಕಳು ಕಳ್ಳತನಕ್ಕೆ ಇಳಿದಿರುವ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

      ಮಿಲ್ಲರ್‍ಪೇಟೆಯಲ್ಲಿ ಡೇಂಜರ್ ಗ್ಯಾಂಗ್ ಎಂಬ ಪರೋಡಿಗಳ ಒಂದು ಗುಂಪು ಹುಟ್ಟಿಕೊಂಡಿದೆ. ಈ ಗ್ಯಾಂಗ್ ಶಾಲಾ ಮಕ್ಕಳನ್ನು ಬೆದರಿಸಿ ಕಳ್ಳತನ ಮಾಡುವಂತೆ ಬೆದರಿಸುತ್ತಿರುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. ಮಕ್ಕಳ ಜೊತೆ  ಮೊದಲು ಸ್ನೇಹ ಬೆಳೆಸೋ ಈ ಗ್ಯಾಂಗ್ ನ ಸದಸ್ಯರು ನಂತರ ಆ ಮಕ್ಕಳನ್ನು ಬೆದರಿಸ್ತಾರೆ. ಕೊಲೆ ಮಾಡೋ ಬೆದರಿಕೆ ಹಾಕಿ ಮನೆಯಲ್ಲಿ ಕಳ್ಳತನ ಮಾಡಿಸ್ತಾರೆ.

      ಈ ಪ್ರಕರಣದಲ್ಲಿ  ಖಾಸಗಿ ಶಾಲೆಯ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಈ ಗ್ಯಾಂಗ್ ಸೆಳೆತಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದಿದ್ದಾರೆ. ಮಕ್ಕಳ ಜೊತೆ ಸ್ನೇಹ ಬೆಳೆಸಿ, ಬೆದರಿಸಿ ಹಣ ವಸೂಲಿ ಮಾಡುತ್ತಾರೆ. ಈ ಡೇಂಜರ್ ಗ್ಯಾಂಗ್‍ನ ದುಷ್ಕೃತ್ಯಕ್ಕೆ ಬೆದರಿರುವ ಪೋಷಕರು ಇದೀಗ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link