ಕರವೇ ಹೆಸರಿನಲ್ಲಿ ಮೋಸ ಮಾಡಿದ್ದಲ್ಲಿ ಕಾನೂನು ಕ್ರಮ

ಹಾವೇರಿ 

        ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ವ್ಯಕ್ತಿಗಳ ಅನಧಿಕೃತ ಸಂಘಟನೆಗಳು ಕರ್ನಾಟಕ ರಕ್ಷಣಾ ವೇದಿಕೆ ಹೆಸರಿನಡಿಯಲ್ಲಿ ಕಾರ್ಯಕ್ರಮವಾಗಲಿ,ಪ್ರತಿಭಟನೆಯಾಗಲಿ,ಬಂದ್‍ಗಾಗಲಿ ಅನುಮತಿ ಕೇಳಿದ ಪಕ್ಷದಲ್ಲಿ ದಯಮಾಡಿ ಅಂತಹವರ ಅರ್ಜಿಯನ್ನು ತಿರಸ್ಕರಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡಲ್ಲಿ ನ್ಯಾಯಾಂಗದ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿಗಳು ಜಗದೀಶ ಅವರಿಗೆ ಮನವಿ ಸಲ್ಲಿಸಿದರು.

          ಕರ್ನಾಟಕ ರಕ್ಷಣಾವೇದಿಕೆಯು ಕರ್ನಾಟಕ ಸಂಘಗಳ ಅಧಿನಿಯಮ 1960 ಪ್ರಕಾರ ನೋಂದಣಿಯಾಗಿದ್ದು ನೋಂದಣಿಸಂಖ್ಯೆ: 43/200-2001 ಆಗಿದ್ದು, ಸಂಘಕ್ಕೆ ಟಿ.ಎ.ನಾರಾಯಣಗೌಡರು ರಾಜ್ಯಾಧ್ಯಕ್ಷರಾಗಿದ್ದು 2000 ನೇ ವರ್ಷದಿಂದ 2018 ರವರೆಗೆ ಕರ್ನಾಟಕ ಸಂಘಗಳ ಅಧಿನಿಯಮದ ಪ್ರಕಾರ ಪ್ರತಿ ವರ್ಷ ಸರ್ವ ಸದಸ್ಯರ ಸಭೆನಡೆಸಿ ವಾರ್ಷಿಕ ಆಡಳಿತ ಮಂಡಳಿಗಳ ನಿರ್ಣಯಗಳನ್ನು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸಲ್ಲಿಸುತ್ತಾ ಬಂದಿದ್ದು, ಸರ್ಕಾರ ನಿಯಮನುಸಾರ ಕಾರ್ಯನಿರ್ವಹಿಸುತ್ತಿದೆ. ಈ ಸಂಘದಲ್ಲಿ ಒಟ್ಟು 65 ಲಕ್ಷಕ್ಕೂ ಹೆಚ್ಚು ಸಂಖ್ಯಯ ಸದಸ್ಯರು ನೋಂದಣೀಯಾಗಿದ್ದಾರೆ.

           ಈ ಸಂಘದ ಸದಸ್ಯತ್ವರಲ್ಲದವರು, ಸಂಘದ ಸದಸ್ಯತ್ವದಿಂದ ಉಚ್ಚಾಟಿಸಲ್ಪಟ್ಟವರು ಸಂಘಕ್ಕೆ ಕೆಟ್ಟ ಹೆಸರನ್ನು ತರುವ ಉದ್ದೇಶದಿಂದ ದುರುಪಯೋಗ ಪಡಿಸಿಕೊಳ್ಳುತ್ತಿದ್ದವರ ವಿರುಧ್ಧ 2006 ರಲ್ಲಿ ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ಶಾಶ್ವತ ನಿರ್ಭಂಧಕಾಜ್ಞೆಯ ದಾವೆಯನ್ನು ಹೂಡಿದ್ದು ದಾವೇಸಂಖ್ಯೆ:8989/2006 ಆಗಿದ್ದು ದಿನಾಂಕ 25-04-2018 ರಂದು ಪ್ರತಿವಾದಿಗಳು ಹಾಗೂ ಅವರ ಅನುಯಾಯಿಗಳು ಹಾಗೂ ಸಂಘದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುಧ್ಧ ಘನ ನ್ಯಾಯಾಲಯವು ಶಾಶ್ವತ ನಿರ್ಭಂದಾಜ್ಞೆಯನ್ನು ನೀಡಿದೆ.

          ಕರ್ನಾಟಕ ರಕ್ಷಣಾ ವೇದಿಕೆ ಅದರ ಲಾಂಛನವನ್ನು ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದು, ಸಂಘದ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ್ರ ಭಾವಚಿತ್ರವಿರುವ ಹಾಗೂ ಸಹಿ ಇರುವ ಪತ್ರಗಳ ಮೂಲಕ ಬರುವ ಮನವಿಗಳನ್ನು ಮಾತ್ರ ಅಧಿಕೃತವೆಂದು ಪರಿಗಣಿಸುವಂತಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶಗೌಡ ಮುದಿಗೌಡ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ. ಬಿಹೆಚ್ ಬಣಕಾರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಗುಡಮಿ.ಉಪಾಧ್ಯಕ್ಷರಾದ ಬಸಮ್ಮ ಬಾದಾಮಿಗಟ್ಟಿ. ಗಿರೀಶ ಬಾರ್ಕಿ.ಬಸವರಾಜ ಹೊಂಭರಡಿ. ಕೊಟ್ರೇಶ ಜಿ ಎಸ್. ಸಂತೋಷ ಗಾಣಿಗೇರ. ಹನುಮಂತಪ್ಪ ಜಂಬೂರ ಹಾಗೂ ಮುಂತಾದ ಕಾರ್ಯಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link