ರಾಣೇಬೆನ್ನೂರ
ತಾಲೂಕಿನ ಹುಲಿಹಳ್ಳಿ ಸಮೀಪ ವೇಗವಾಗಿ ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಕುರಿಗಳಿಗೆ ಹೊಡೆದ ಪರೀಣಾಮವಾಗಿ 12ಕ್ಕೂ ಹೆಚ್ಚೂ ಕುರಿಗಳು ಸಾವನ್ನಪ್ಪಿದ್ದು ಐದಾರು ಕುರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದ ಘಟನೆ ಶನಿವಾರ ನಡೆದಿದೆ. ಬೆಳಗಾವಿ ಜಿಲ್ಲೆಯ ಕಡಕಲಾಟ ಗ್ರಾಮದ ವಾಸು ಮಲ್ಲಪ್ಪ ಅವಡಕಾನ ಎಂಬುವರ ಕುರಿಗಲಾಗಿದ್ದು ಹನುಮನಮಟ್ಟಿಯ ಹತ್ತಿರ ಹೊಲವೊಂದರಲ್ಲಿ ಕುರಿಗಳು ತರಬಿದ್ದು ರಸ್ತೆ ದಟುತ್ತಿದ್ದ ಸಂದರ್ಭದಲ್ಲಿ ಜೆ.ಸಿ.ಬಿ ಹೇರಿಕೊಂಡು ರಾಣೆಬೆನ್ನೂರ ಕಡೆ ಹೊಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹೊಡೆದುಕೊಂಡು ಹೊದ ಎಂದು ಕುರಿಗಾಹಿ ತಮ್ಮ ನೋವನ್ನು ತೊಡಿಕೊಂಡರು.
ರಾಷ್ಟ್ರೀಯ ಹೆದ್ದಾರಿಯ ಸಿಕ್ಸ್ ಲೈನ್ ಕಾಮಗಾರಿ ಪ್ರಾರಂಭವಾಗಿದ್ದು ಸ್ವಲ್ಪ ಯಾಮಾರಿದರೆ ಅಪಾಯ ಗ್ಯಾರಂಟಿ ಎನ್ನುವಂತಿದೆ. ಅಪಘಾತವಾದ ಸ್ಥಳಕ್ಕೆ ತಕ್ಷಣ ಆಗಮಿಸಿದ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್.ಆಯ್ ಸುನಿಲಕುಮಾರ ಮತ್ತು ಸಿಬ್ಬಂಧಿ ಬಳಗ ಕುರಿಗಾಹಿ ಅವರಿಗೆ ಸಾಂತ್ವನ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
