ಚಿತ್ರದುರ್ಗ;
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಮೂಲಕ ಕಳೆದ 70 ವರ್ಷಗಳಿಂದ ದೇಶದ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಶತಮಾನದ ಯುವ ಜನರು ಇಂತಹರಿಗೆ ಸರಿಯಾದ ಉತ್ತರ ಕೊಡಬೇಕಿದೆ ಎಂದು ಕರೆ ನೀಡಿದ್ದಾರ
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಂಗಳವಾರ ಜರುಗಿದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ತಮ್ಮ ಭಾಷಣ ಉದ್ದಕ್ಕೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು
ಕಾಂಗ್ರೆಸ್ ಸರ್ಕಾರದಲ್ಲಿ ದಶಕಗಳ ಕಾಲ ದೇಶಕ್ಕೆ ಅನ್ಯಾಯವಾಗಿದೆ. ದೇಶದ ಸ್ವಾವಲಂಬನೆ, ದೇಶದ ಪ್ರಗತಿ, ದೇಶದ ಪ್ರಾಬಲ್ಯದ ವಿಚಾರದಲ್ಲೂ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷ ಎಸಗಿರುವ ಅನ್ಯಾಯವನ್ನು ಪ್ರತಿಯೊಬ್ಬ ನಾಗರೀಕನೂ ನೆನಪು ಇಟ್ಟುಕೊಳ್ಳಬೇಕು ಎಂದರು
ಜನರ ಮದ್ಯೆ ಗೊಂದಲ ಸೃಷ್ಠಿಸಿ ವಿದೇಶಿ ನೀತಿ ದುರ್ಬಲಗೊಳಿಸಿದೆ. ಭಾರತದ ಸೇನೆಯನ್ನೂ ದುರ್ಬಲ ಮಾಡಿ ಅನ್ಯಾಯ ಎಸೆಗಲಾಗಿದೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾಡಿರುವ ಅನ್ಯಾಯ ಸರಿ ಮಾಡಲು ಕಳೆದ ಐದು ವರ್ಷಗಳಿಂದ ನಾವು ನಿರಂತರವಾಗಿ ಪ್ರಯತ್ನ ಮಾಡಿದ್ದೇವೆ. 70 ವರ್ಷಗಳ ಕಾಲ ಅನ್ಯಾಯ ಮಾಡಿದವರಿಗೆ ಪಾಠ ಕಲಿಸಬೇಕು ಅಲ್ಲವೇ ಎಂದು ಕೇಳಿದ ಮೋದಿ, 21ನೇ ಶತಮಾನದ ಜನರು ಮೋಸ ಮಾಡಿದ ಕಾಂಗ್ರೆಸ್‍ಗೆ ಶಿಕ್ಷೆ ಕೊಡಲಿದ್ದಾರೆ ಎಂದರು
ಪಾಕ್ ಉಗ್ರರ ಮೇಲೆ ದಾಳಿ ನಡೆಸಿದ್ದು ಎಲ್ಲರಿಗೂ ಹೆಮ್ಮೆಯಿದೆ. ಈ ವೇಳೆ ಇಡೀ ಜಗತ್ತು ಭಾರತದ ಪರವಾಗಿ ನಿಂತಿತು. ಆದರೆ ಕಾಂಗ್ರೆಸ್ ಪಾಕಿಸ್ಥಾನದ ಪರವಾದ ನಿಲುವು ತಾಳಿತು. ಐದು ವರ್ಷಗಳ ಹಿಂದೆ ಪಾಕ್ ಉಗ್ರರು ನಮ್ಮ ಮೇಲೆ ದಾಳಿ ಮಾಡುತ್ತಲೇ ಇದ್ದರು. ಆನಂತರ ಪಾಕಿಸ್ತಾನ ನಮ್ಮ ಮೆಲೆ ದಬ್ಬಾಳಿಕೆ ನಡೆಸುತ್ತಿತ್ತು. ಆದರೆ ಈ ಚೌಕಿದಾರ್ ಅಂತಹ ಪರಿಸ್ಥಿತಿ ಬದಲಾಯಿಸಿದ್ದಾರೆ. ಈಗ ಗಡಿಭಾಗದ ಆಚೆಗಿನ ದೇಶದ ಜನರಲಿ ಹೆದರಿಕೆ ಇದೆ ಎಂದು ಬಲವಾಗಿ ಸಮರ್ಥಿಸಿಕೊಂಡರು
2014ರಲ್ಲಿ ನೀವು ಹಾಕಿದ ಒಂದೊಂದು ಮತವೂ ನನಗೆ ತಾಕತ್ತು ನೀಡಿತು. ಆ ಕಾರಣಕ್ಕಾಗಿ ಜಗತ್ತಿನ ಎಲ್ಲೆಡೆ ಭಾರತದ ಜಯಘೋಷ ಮೊಳಗುತ್ತಿದೆ. ಅದಕ್ಕೆಲ್ಲಾ ಕಾರಣ ಮೋದಿ ಅಲ್ಲ, ದೇಶದ ಜನರೇ ಕಾರಣ. ಇಂದು ಭಾರತದ ಪ್ರತಿಯೊಬ್ಬ ವ್ಯಕ್ತಿ ಆತ್ಮ ವಿಶ್ವಾಸ ಹೊಂದಿದ್ದಾನೆ ಯಾಕೆಂದರೆ ದೇಶ ಮಹಾನ್ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ. ಇಡೀ ಜಗತ್ತು ಇಂದು ಭಾರತದ ಕಡೆ ನೋಡುವಂತೆ ನಾವು ಬದಲಾವಣೆ ತಂದಿದ್ದೇವೆ ಎಂದು ನುಡಿದರು
ಒಂದು ಬಲಿಷ್ಟ ಸರ್ಕಾರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರ ಬೆಂಬಲ ಬೇಕು. ಈಗ ನೀವು ಕೇಲವ ಪ್ರಧಾನಿ ಆಯ್ಕೆ ಮಾಡುವುದಲ್ಲ. ಪೂರ್ಣ ಬಹುಮತದ ಸರ್ಕಾರ ಆಯ್ಕೆ ಮಾಡಬೇಕು ಬಲಿಷ್ಟ ಸರ್ಕಾರ ಹೇಗಿರುತ್ತದೆ ಎನ್ನುವುದಕ್ಕೆ ನಾನು ನಿಮ್ಮೆದುರು ಇದ್ದೇನೆ. ಆದರೆ ಕರ್ನಾಟಕ ಸರ್ಕಾರ ಹೇಗಿದೆ ಎನ್ನುವುದುನ್ನು ನೀವು ನೋಡುತ್ತಿದ್ದೀರಿ. ಈ ಸರ್ಕಾರವನ್ನು ಯಾರೋ ಮುನ್ನಡೆಸುತ್ತಿದ್ದಾರೆ. ದೇಶಕ್ಕೆ ಎಂತಹ ಪ್ರಧಾನ ಮಂತ್ರಿ ಬೇಕು ಅಂದರೆ ದೇಶದ 130 ಕೋಟಿ ಜನ ಪ್ರಧಾನಿಗೆ ಹೈಕಮಾಂಡ್ ಆಗಿರಬೇಕು ಎಂದು ಪ್ರತಿಪಾದಿಸಿದರು
ಕಾಂಗ್ರೆಸ್ ಸಮುದಾಯ, ಜಾತಿ ಒಡೆದು ಅಧಿಕಾರಕ್ಕಾಗಿ ಮುಂದಾಗ್ತಿದೆ ಅಧಿಕಾರಕ್ಕಾಗಿ ಲಿಂಗಾಯತ ಸಮುದಾಯ ವಿಭಜನೆಗೆ ಯತ್ನಿಸಿದ್ದರು. ಇಂತಹವರಿಗೆ ನಾವು ಸರಿಯದ ಉತ್ತರ ಕೊಡಬೇಕು ಎಂದರು
ಪ್ರತಿ ಗ್ರಾಮ ಪಂಚಾಯತ್‍ನಲ್ಲಿ ಹೆಲ್ತ್ ಸೆಂಟರ್ ಸ್ಥಾಪನೆ, ಪ್ರತಿ ಕುಟುಂಬಕ್ಕೆ ಒಂದು ಮನೆ ನಿರ್ಮಿಸಿಕೊಡುವುದು ಮತ್ತು ವಿದ್ಯುತ್, ಗ್ಯಾಸ್ ಸಂಪರ್ಕ ಕಲ್ಪಿಸುವುದು ಸಹ ನಮ್ಮ ಸಂಕಲ್ಪ. ಜೊತೆಗೆ ಕೃಷಿಕರ ಆದಾಯ ದ್ವಿಗುಣ ಮಾಡುವುದು ಸಹ ನಮ್ಮ ಸಂಕಲ್ಪ.ಈಗಾಗಲೇ ಮೂರು ಕೋಟಿ ರೈತರ ಖಾತೆಗೆ ಹಣ ಜಮೆ ಆಗಿದೆ. ಇನ್ನೂ ಒಂದುವರೆ ಕೋಟಿ ರ್ಯತರ ಖಾತೆಗೆ ಜಮೆ ಆಗಲಿದೆ. ಕರ್ನಾಟಕದ 75 ಲಕ್ಷ ರೈತರಿಗೂ ಯೋಜನೆಯ ಲಾಭ ಸಿಗಲಿದೆ ಎಂದು ಪ್ರಧಾನಿಗಳು ತಿಳಿಸಿದರು
ಕರ್ನಾಟಕದಲ್ಲಿ ಮೈತ್ರಿ ಸರ್ಕಾರದಿಂದ ರೈತರಿಗೆ ಅನುಕೂಲ ಆಗಿದೆಯೇ ಎಂದು ಪ್ರಶ್ನೆ ಮಾಡಿದರಲ್ಲದೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಯಾವತ್ತೂ ರೈತರಿಗೆ ಒಳ್ಳೆಯದು ಮಾಡಲ್ಲ.ವೀರ ಮದಕರಿನಾಯಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ್ದು ಇತಿಹಾಸ. ಇವತ್ತು ನಾವೆಲ್ಲರೂ ಕೂಡಿ ಕರುನಾಡನ್ನು ರಕ್ಷಿಸಬೇಕಿದೆ ಎಂದು ಹೇಳಿದರು
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ನಾರಾಯಣಸ್ವಾಮಿ, ದಾವಣಗೆರೆ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್, ತುಮಕೂರು ಕ್ಷೇತ್ರದ ಅಭ್ಯರ್ಥಿ ಜಿ.ಎಸ್.ಬಸವರಾಜು, ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಶ್ರೀರಾಮುಲು, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಕರುಣಾಕರರೆಡ್ಡಿ, ರಾಮಚಂದ್ರಪ್ಪ, ಮುಖಂಡರಾದ ಡಾ.ಶಿವಯೋಗಿಸ್ವಾಮಿ, ಜಿ.ಎಂ.ಸುರೇಶ್, ಜಿ.ಟಿ.ನರೇಂದ್ರನಾಥ್ ಇನ್ನಿತರರು ಉಪಸ್ಥಿತರಿದ್ದರು