ಆಟೋ ಪ್ರಯಾಣ ದರ ಹೆಚ್ಚಳ ಶೀಘ್ರದಲ್ಲೇ ಆದೇಶ

ಬೆಂಗಳೂರು

         ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪದ ಸಂಬಂಧ, ಶೀಘ್ರದಲ್ಲೇಅಂತಿಮ ಆದೇಶ ಹೊರಬೀಳಲಿದೆ.
ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಸಮಿತಿಗಳ ಸಭೆಯಲ್ಲಿ ಆಟೋ ಪ್ರಯಾಣದ ದರ ಹೆಚ್ಚಳ ವಿಚಾರ ಕುರಿತು ಜಿಲ್ಲಾಧಿಕಾರಿ ವಿಜಯ್ ಶಂಕರ್ ಜೊತೆ ಆಟೋ ಚಾಲಕರ ಸಭೆ ನಡೆಸಿದಾಗ ಬಂದ ಬೆಲೆ ಏರಿಕೆಯ ಪ್ರಸ್ತಾಪವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

         ದಿನಬಳಕೆ ವಸ್ತುಗಳು, ಎಲ್‍ಪಿಜಿ ದರ, ಆಟೋ ರಿಕ್ಷಾ ಬೆಲೆ, ವಿಮೆ, ಬಿಡಿಭಾಗಗಳ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಟೋ ಮೀಟರ್ ದರವನ್ನು ಹೆಚ್ಚಳ ಮಾಡಬೇಕು ಎಂದು ತಮ್ಮ ಬೇಡಿಕೆಗಳನ್ನು ಆಟೋ ಚಾಲಕರ ಸಂಘಟನೆಗಳು ಮುಂದಿಟ್ಟರು.

         ಅನಿಲ ದರ ಏರಿಕೆ ಕಾರಣ, ಆಟೋ ಚಾಲಕರಿಗೆ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿದ್ದಾರೆ.ಇನ್ನೂ, ಆನ್ ಲೈನ್ ನಲ್ಲಿ ಕ್ಯಾಬ್ ಗಳು ದೊರೆಯುವ ಕಾರಣ, ನಮಗೆ ಬಾಡಿಗೆ ದೊರೆಯುವುದಿಲ್ಲ. ಹೀಗಾಗಿ, ಈ ಕ್ಯಾಬ್ ಗಳ ಹಾವಳಿಯನ್ನು ತಡೆಯಬೇಕು ಎಂದು ಎಆರ್ ಡಿಯು ಶ್ರೀನಿವಾಸ್ ಹೇಳಿದರು.

          ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿ, ನಗರ ವ್ಯಾಪ್ತಿಯಲ್ಲಿ ಸಾವಿರಾರು ಆಟೋಗಳು ನಾಯಿಕೊಡೆ ಗಳಂತೆ, ತಲೆ ಎತ್ತಿವೆ.ಇಂತಹ ಆಟೋ ಗಳನ್ನು ಸಾರಿಗೆ ಇಲಾಖೆ ಜಪ್ತಿ ಮಾಡಬೇಕು.ಜೊತೆಗೆ, ಅನಧಿಕೃತ ಬಾಡಿಗೆ ಪಡೆಯುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಟೋ ಚಾಲಕ ರಾಜಣ್ಣ ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap