ದಾವಣಗೆರೆ:
ಶ್ರೀಸ್ವಾಮಿ ಅಯ್ಯಪ್ಪ ಶಬರಿಮಲೈ ಸೇವಾ ಸಮಿತಿಯಿಂದ ಇಲ್ಲಿನ ನಿಟುವಳ್ಳಿ ರಸ್ತೆಯ ಕೆ.ಬಿ. ಬಡಾವಣೆಯ ಲೇಬರ್ ಕಾಲೋನಿಯಲ್ಲಿ ಡಿ.8ರಿಂದ 10ರ ವರೆಗೆ ಶ್ರೀಅಯ್ಯಪ್ಪಸ್ವಾಮಿ ದೀಪೋತ್ಸವ, ಮೆರವಣಿಗೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಟಿ. ರವಿಕುಮಾರ್ ನಿಬ್ಗೂರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಡಿ.8ರಂದು ಬೆಳಿಗ್ಗೆ 6 ಗಂಟೆಗೆ ಅಷ್ಟೋತ್ತರ ಮಹಾಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಡಿ.9ರಂದು ಮಧ್ಯಾಹ್ನ 3 ಗಂಟೆಗೆ ಲೇಬರ್ ಕಾಲೋನಿಯ ಸ್ವಾಮಿಯ ದೇವಸ್ಥಾನದಿಂದ ಆರಂಭವಾಗುವ ಕೆಟಿಜೆ ನಗರ, ವಿದ್ಯಾರ್ಥಿ ಭವನ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಅರುಣ ಟಾಕೀಸ್, ವಸಂತ ಟಾಕೀಸ್, ಗಾಂಧಿ ವೃತ್ತ, ಕಿರುವಾಡಿ ವೃತ್ತ, ಶಿವಪ್ಪ ವೃತ್ತ ಮತ್ತಿತರೆಡೆ ಸಂಚರಿಸಿ, ಪುನಃ ಸ್ವಾಮಿ ಮಂಟಪಕ್ಕೆ ತಲುಪಿ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.
ಡಿ. 10ರಂದು ಬೆಳಿಗ್ಗೆ 5 ಗಂಟೆಯಿಂದ 6.30ರ ವರೆಗೆ ಅಗ್ನಿಕುಂಡದ ಹರಕೆ ಅರ್ಪಿಸುವ ಕಾರ್ಯಕ್ರಮ, ಮಹಾಮಂಗಳಾರತಿ, ಬಾಳೆ ಮಂಟಪ ವಿಸರ್ಜನೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಲೋಕಪ್ಪ, ಗಂಗಾಧರ, ರಘು, ಪ್ರಸನ್ನ, ಅಣ್ಣಪ್ಪ, ಪುರುಷೋತ್ತಮ, ರವಿಕುಮಾರ, ಮಲ್ಲಿಕಾರ್ಜುನ, ಸುಬ್ಬರಾವ್, ಮಹೇಶ್, ರಮೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ