ತುರುವೇಕೆರೆ
ಜಾತಿ, ಮತ, ಧರ್ಮಗಳೆಂಬ ಸೀಮಾತೀತ ಎಲ್ಲೆಯನ್ನೂ ಮೀರಿದ ಆಶಯಗಳನ್ನು ಹೊಂದಿರುವ ರೋಟರಿ ಸಂಸ್ಥೆ ದೇಶದಾದ್ಯಂತ ಹೆಚ್ಚಿನ ಜನಮನ್ನಣೆ ಗಳಿಸಿಕೊಂಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ರೋ|| ಸುರೇಶ್‍ಹರಿ ಅಭಿಪ್ರಾಯಪಟ್ಟರು.ಪಟ್ಟಣದ ಜೆ.ಪಿ ಆಂಗ್ಲಶಾಲಾ ಆವರಣದಲ್ಲಿ ತಾಲ್ಲೂಕು ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ರೋಟರಿ ಜಿಲ್ಲಾ 3190 ರಾಜ್ಯಪಾಲರ ಅಧಿಕೃತ ಭೇಟಿ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶುದ್ದಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ಜನರಿಗೆ ಅನುಕೂಲವಾಗುವ ಇನ್ನು ಹತ್ತಾರು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ರೋಟರಿ ಕ್ಲಬ್ ತೊಡಗಿಸಿಕೊಳ್ಳಬೇಕು. ತಾವು ಕೂಡಿಟ್ಟ ಹಣ ಉಪಯೋಗಿಸದೆ ಬಿಟ್ಟುಹೋಗುವ ಮೊದಲು ದುಡಿಮೆಯ ಸ್ವಲ್ಪ ಭಾಗವನ್ನಾದರೂ ಸಮಾಜಕ್ಕೆ ಮರಳಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅಂತವರಿಂದ ದಾನ ಪಡೆದು ಗ್ರಾಮೀಣ ಪ್ರದೇಶದ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸಿ ಎಂದು ರೋಟರಿ ಸದಸ್ಯರಿಗೆ ಕಿವಿ ಮಾತು ಹೇಳಿದರಲ್ಲದೆ ಸಾರ್ವಜನಿಕರ ಹಿತಕ್ಕಾಗಿ ರೋಟರಿ ಸದಸ್ಯರು ಹಣದ ಬಿಕ್ಷೆ ಬೇಡುವುದರಲ್ಲಿ ಯಾವುದೇ ಕೀಳರಿಮೆ ಉಂಟಾಗದು. ತನ್ನ ಕೆಲಸದಲ್ಲಿ ಸ್ವಾರ್ಥ, ಅಂಜಿಕೆ ಎಣಿಸದೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳಿ.
ಹಣಗಳಿಸುವುದೇ ಜೀವನದ ಪ್ರಧಾನ ಗುರಿಯಲ್ಲ. ತಾನಿರುವಷ್ಟು ದಿನ ಸಮಾಜದ ಅಸಹಾಯಕರ ಧನಿಯಾಗಬೇಕು. ಆಗ ಮಾತ್ರ ಬದುಕಿಗೊಂದು ಮೌಲ್ವಿಕತೆ ಪ್ರಾಪ್ತವಾಗುತ್ತದೆ ಎಂದರು.ಇದೇ ವೇಳೆ ಸಮಾರಂಭದಲ್ಲಿ ರೋಟರಿ ಸದಸ್ಯರಿಂದ ನೂತನ ಜಿಲ್ಲಾ ತುಮುಲ್ ಅಧ್ಯಕ್ಷರಾಗಿ ಆಯ್ಕೆಯದ ಸಿ.ವಿ.ಮಹಾಲಿಂಗಯ್ಯ ಅವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೋಟರಿ ತಾಲ್ಲೂಕು ಅಧ್ಯಕ್ಷ ಡಾ. ಕೆ.ಎಸ್.ಚೇತನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕಾರ್ತಿಕೇಯರೆಡ್ಡಿ, ಅಸಿಸ್ಟೆಂಟ್ ಗವರ್ನರ್ ಎಸ್.ಕೆ.ಥಾಮಸ್, ಜಿಎಸ್‍ಆರ್ ಬಿಳಿಗೆರೆ ಶಿವಕುಮಾರ್, ತಿರುಮಲ, ಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ಗ್ಯಾಷ್‍ಪ್ರಭು, ನಿಕಟಪೂರ್ವ ಅದ್ಯಕ್ಷ ಲೋಕೇಶ್, ಪ್ರಕಾಶ್‍ಗುಪ್ತಾ, ತುಕಾರಾಮ್, ರಾಜಣ್ಣ, ದೇವರಾಜ್, ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ಷಣ್ಮುಖಪ್ಪ, ಟಿ.ರಾಮಚಂದ್ರು, ಬಿಎಂಎಸ್ ಉಮೇಶ್, ಸಾ.ಶಿ.ದೇವರಾಜು, ಜಯರಾಂ, ಸತೀಶ್‍ಕುಮಾರ್, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ