ಬಿಜೆಪಿಗೆ ಮತ ಚಲಾಯಿಸುವ ಮುಸ್ಲಿಂರು ಮುಸ್ಲಿಮರೇ ಅಲ್ಲ : ಜಮೀರ್ ಅಹ್ಮದ್

ಬೆಂಗಳೂರು

          ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವ ಮುಸ್ಲಿಂರು ಮುಸ್ಲಿಮರೇ ಅಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

          ನಗರದ ಅರಮನೆ ಮೈದಾನದಲ್ಲಿ ಆಲ್ ಇಂಡಿಯಾ ಜಮಿಯತ್ ಉಲ್ ಮನ್ಸೂರ್ ಕರ್ನಾಟಕ ಸಂಘಟನೆ ಆಯೋಜಿಸಿದ್ದ, ನದಾಫ್, ಪಿಂಜಾರ ಹಾಗೂ ಮನ್ಸೂರಿ ಸಮಾಜಗಳ ರಾಷ್ಟ್ರೀಯ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಗೆ ಬಿಜೆಪಿ ತೀಕ್ಷ್ನ ಪ್ರತಿಕ್ರಿಯೆ ನೀಡಿ ಇದು ಸಚಿವರ ಸಂಸ್ಕøತಿಯನ್ನು ತೋರುತ್ತದೆ ಎಂದಿದೆ.

          ಸಚಿವರಾಗಿದ್ದುಕೊಂಡು ಬಿಜೆಪಿಗೆ ಮುಸ್ಲಿಂರು ಮತ ಹಾಕಬಾರದು ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಜಮೀರ್ ಅಹಮದ್ ಸಚಿವರಾಗಲು ಯೋಗ್ಯರಲ್ಲ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಬಿಜೆಪಿ ಮುಖಂಡರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಗ್ರಹಿಸಿದ್ದಾರೆ.

          ಸಮಾವೇಶದಲ್ಲಿ ಸಚಿವ ಜಮೀರ್ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದರೆ, ಜಾತ್ಯತೀತ ಮತ್ತು ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕ ಬೇಕು.ಹೀಗೆ, ಆಗಬಾರದು ಎಂದರೆ, ಪ್ರತಿಯೊಬ್ಬರು ಜಾತ್ಯತೀತ ಸಿದ್ದಾಂತಯುಳ್ಳ ಪಕ್ಷಗಳಿಗೆ ಮತ ನೀಡಬೇಕು.ಒಂದು ವೇಳೆ ಮುಸ್ಲಿಮರು ಬಿಜೆಪಿಗೆ ಮತ ನೀಡಿದರೆ, ಅವರು ಮುಸ್ಲಿಂ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ

           ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಕಡ್ಡಾಯವಾಗಿ ಮತ ಹಾಕಿದರೆ, ರಾಜ್ಯದಲ್ಲಿ ಇಪ್ಪತ್ತಕ್ಕೂ ಅಧಿಕ ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲ್ಲಿದೆ ಎಂದ ಅವರು, ಒಂದೊಂದು ಲೋಕಸಭೆ ಕ್ಷೇತ್ರದಲ್ಲೂ 3ರಿಂದ 5 ಲಕ್ಷವರೆಗೂ ಮುಸ್ಲಿಮರ ಮತಗಳಿವೆ ಎಂದು ತಿಳಿಸಿದರು.

         2014ರಲ್ಲಿ ದೇಶದ ಬದಲಾವಣೆಗಾಗಿ ನಾವು ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದೇವೆ. ಆದರೆ ಅವರು ನೀಡಿದ್ದ ಒಂದು ಭರವಸೆ ಅನ್ನು ಈಡೇರಿಸಿಲ್ಲ. ದೇಶದಲ್ಲಿ ಅಸಮಾನತೆ, ಆರ್ಥಿಕ ಸಂಕಷ್ಟ ಸೇರಿದಂತೆ ಬಹು ದೊಡ್ಡ ಸಮಸ್ಯೆಗಳನ್ನು ಅವರು ಹುಟ್ಟು ಹಾಕಿದ್ದಾರೆ.ಹೀಗಾಗಿ, ಅವರನ್ನು ನಾವು ಮತ್ತೆ ಅಯ್ಕೆ ಮಾಡಬಾರದೆಂದು ವಾಗ್ದಾಳಿ ನಡೆಸಿದರು.

        ಇದಕ್ಕೂ ಮೊದಲು ನದಾಫ್, ಪಿಂಜಾರ ಹಾಗೂ ಮನ್ಸೂರಿ ಸಮುದಾಯಗಳ ಕುರಿತು ಮಾತನಾಡಿದ ಜಮೀರ್ ಅಹ್ಮದ್, ರಾಜ್ಯದಲ್ಲಿ 85 ಲಕ್ಷ ಮುಸ್ಲಿಮರ ಪೈಕಿ 30 ಲಕ್ಷ ನದಾಫ್, ಪಿಂಜಾರ ಜನಸಂಖ್ಯೆ ಇದೆ. ಹೀಗಾಗಿ, ಈ ಬಾರಿ ಇವರಿಗೆ ಪ್ರತ್ಯೇಕ ಬಜೆಟ್ ಮತ್ತು ಅನುದಾನ ಮೀಸಲಿಡಲಾಗುವುದು ಹಾಗೂ ಜಾತಿ ಪ್ರಮಾಣ ಪತ್ರ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

         ಸಮಾವೇಶದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಆರ್.ಎ.ಉಸ್ಮಾನಿ ಮನ್ಸೂರಿ,ಶಾಸಕ ಮೊಹಿದ್ದೀನ್ ಶಮ್ಸ್, ರಾಷ್ಟ್ರೀಯ ಅಧ್ಯಕ್ಷ ಜಾವೀದ್ ಇಕ್ಬಾಲ್ ಮನ್ಸೂರಿ ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap