ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ: ಶ್ರೀ ವೆಂಕಟರಮಣಪ್ಪ

ಪಾವಗಡ :

   ಪುರಸಭೆ ವ್ಯಾಪ್ತಯ ವಾರ್ಡ್‍ಗಳಲ್ಲಿ ಜನತೆಗೆ ಶುದ್ದ ಕುಡಿಯುವ ನೀರು ಪೂರೈಕೆಯಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಮುಂದಾಗುವ ಆನಾಹುತಕ್ಕೆ ನೀವೆ ಕಾರಣ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.

    ಅವರು ಸೋಮವಾರ ಪುರಸಭೆ ಸಭಾಂಗಣದಲ್ಲಿ ಕರೆದಿದ ಪಟ್ಟಣದ ವಾರ್ಡ್‍ಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಕುಂದ ಕೊರತೆಗಳನ್ನು ಅಳಿಸಿದ ಕಾರ್ಮಿಕ ಸಚಿವ ಪಟ್ಟಣದ ಯಾವ ಯಾವ ವಾರ್ಡ್‍ನಲ್ಲಿ ಸಮಸ್ಯೆಗಳಿವೆ ಎಂಬುದನ್ನು ನೂತನ ಪುರಸಭಾ ಸದಸ್ಯರಿಂದ ಮಾಹಿತಿ ಪಡೆದು,ಪಟ್ಟಣದಲ್ಲಿ ಚರಂಡಿ ವ್ಯೆವಸ್ಥೆ ಹಾಳಾಗಿದೆ ,ರಸ್ತೆಗಳನ್ನು ನೊಡಲು ಕಣ್ಣು ಸಾಲದು ಕೇಲವು ಪ್ರದೇಶಗಳಲ್ಲಿ ಬೀದಿ ದೀಪಗಳಿಲ್ಲದೆ ಜನತೆ ರಾತ್ರಿವೇಳೆ ಹೊರಬರಲು ಸಾದ್ಯವಾಗದಂತಾಗಿದ್ದು ಮೊದಲು ಪಟ್ಟಣದ ಎಲ್ಲಾ ಕಡೆ ಬೀದಿ ದೀಪ ನಿರ್ವಹಣೆಗೆ ಟೆಂಡರ್ ಕರೆದು ಸರಿಪಡಿಸಿ ಎಂದು ತಾಕಿತು ಮಾಡಿದರು.

    23 ವಾರ್ಡ್‍ಗಳಿಗೆ ನೀರು ಪೂರೈಕೆ ಮಾಡುವ ವಿಧಾನವನ್ನು ತಿಳಿಸಿ ಎಲ್ಲೆಲ್ಲಿ ಎಕ್ಸಪ್ರೇಸ್ ಲೈನ್ ಆಳವಡಿಸಲಾಗಿದೆ ಕೋಳವೆ ಬಾವಿಗಳೆಷ್ಟು , ಎಷ್ಟರಲ್ಲಿ ನೀರು ಬರುತ್ತಿದೆ ಭತ್ತಿಹೋದ ಕೋಳವೆ ಬಾವಿಗಳೆಲ್ಲಿವೆ , ಪುರಸಭೆಯಿಂದ ಕಳೆದಾ ಭಾರಿ ನೀರಿಗಾಗಿ ಕರ್ಚುಮಾಡಿದ ಅನುದಾನವಾದರೂ ಏನು ಎಂಬ ಪ್ರಶ್ನೆಗಳಿಗೆ ಆಧಿಕಾರಿಗಳ ಬಳಿ ಉತ್ತರವಿಲ್ಲದೆ ನಾವು ಹೋಸದಾಗಿ ಬಂದಿದ್ದೆವೆ ಎಂಬ ಮಾತುಗಳಿಗೆ ಸಚಿವರು ಕೆಂಡಮಂಡಲರಾಗಿ ನೆಪಕ್ಕಿಂತ ನನಗೆ ನಡೆಯದ ಮತ್ತು ನೆಡೆಯಬೇಕಾದ ಕೆಲಸವೆ ಮುಖ್ಯ ಸಬೂಬು ಬೇಡ ಕೆಲಸ ಅಗಬೇಕೆಂದರು.

   ಮುಂದಿನ ಸಭೆಗೆ ಪಟ್ಟಣದಲ್ಲಿ ಸಿಗುತ್ತಿರುವ ನೀರಿನ ಬಗ್ಗೆ ಪೂರೈಕೆ ವಾಟರ್ ಮ್ಯಾನ್ ಮತ್ತು ಜಾಡಮಾಲಿಕಗಳ ಕಾರ್ಯವೈಕರಿ ಬದಲಾಗಿ ಸಮಸ್ಯೆ ಆತೋಟಿಗೆ ತರದಿದ್ದಲ್ಲಿ ಜಾಗಕಾಲಿ ಮಾಡಲು ಸಿದ್ದರಾಗಿರಬೇಕು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೋಮ್ಲನಾಯ್ಕ್ , ಪುರಸಭೆ ಮಾಜಿ ಅದ್ಯಕ್ಷರಾದ ಶಂಕರ್ ರೆಡ್ಡಿ , ಜಿ.ಪಂ.ಸದಸ್ಯರಾದ ಹೆಚ್.ವಿ.ವೆಂಕಟೇಶ್, ಪುರಸಭಾ ಸದಸ್ಯರಾದ ರಾಜೇಶ್ , ಸುದೇಶ್ ಬಾಬು , ಬಾಲಸುಬ್ಮಣ್ಯಂ , ಇತರೆ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link