ಪ್ರೌಢ ಶಾಲೆ ಮಕ್ಕಳು ಒಂದು ಗಿಡ ಬೆಳೆಸುವುದನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು : ಸಾಲು ಮರದ ತಿಮ್ಮಕ್ಕ

ಬೆಂಗಳೂರು

       ಮಕ್ಕಳಲ್ಲಿ ಪರಿಸರದ ಪ್ರೀತಿ, ಪರಿಸರ ಸ್ನೇಹಿ ಸ್ವಭಾವವನ್ನು ಬೆಳೆಸಿ ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ, ಪ್ರೌಢ ಶಾಲೆ ಮಕ್ಕಳು ಒಂದು ಗಿಡ ಬೆಳೆಸುವುದನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು ಎಂದು ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಒತ್ತಾಯಿಸಿದರು.

       ಮಕ್ಕಳಲ್ಲಿ ಪರಿಸರದ ಪ್ರೀತಿ, ಪರಿಸರ ಸ್ನೇಹಿ ಸ್ವಭಾವವನ್ನು ಬೆಳೆಸಲು ವಿದ್ಯಾರ್ಥಿಗಳು ಒಂದು ಗಿಡ ನೆಟ್ಟು ಬೆಳೆಸಬೇಕು.ಇದಕ್ಕೆ ಶಿಕ್ಷಣ ಇಲಾಖೆ ಅಂಕಗಳನ್ನು ನೀಡಬೇಕು.ಆಗ ಮಾತ್ರ ಹಸಿರು ವಾತಾವರಣ ನಿರ್ಮಾಣ ಮಾಡಬಹುದು ಎಂದು ನುಡಿದರು.ನಗರದಲ್ಲಿಂದು ಎಂಜಿ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಸೌಪರ್ಣಿಕಾ ಸಂಸ್ಥೆಯ ಸಹಯೋಗದೊಂದಿಗೆ 10 ಸಾವಿರ ಗಿಡಗಳನ್ನು ಬೆಳೆಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿ ಸಣ್ಣವರಿರಲಿ, ದೊಡ್ಡವರಿರಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು. ಮನೆ ಮುಂದೆ ಜಾಗ ಇಲ್ಲದೇ ಇದ್ದರೆ ರಸ್ತೆ ಬದಿಯಲ್ಲಿ ನೆಟ್ಟು ಬೆಳೆಸಿ ಎಂದ ಅವರು, ಮದುವೆಯಾಗಿ 20 ವರ್ಷ ಕಳೆದರೂ ಮಕ್ಕಳಾಗಲಿಲ್ಲ. ಅದಕ್ಕೆ ನಾನು ಮತ್ತು ಪತಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದೆವು.ಬೆಳಿಗ್ಗೆ ಕೆಲಸಕ್ಕೆ ಹೋಗುವ ಮೊದಲು ಎಲ್ಲ ಗಿಡಗಳಿಗೆ ನೀರು ಎರೆಯುತ್ತಿದ್ದೆವು ಎಂದು ನೆನೆದರು.

        ನಾನೇ ನೆಟ್ಟಿದ್ದ ಮರವೊಂದಕ್ಕೆ ಈಗ 70ರ ವಯಸ್ಸು. ನಾನೇ ಬೆಳೆಸಿದ ಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವ ನಿತ್ಯ ಕೇಳಿಬರುತ್ತಿದೆ. ಅದನ್ನು ಕೇಳುವುದೇ ನನಗೆ ಆನಂದ. ಅನೇಕ ಪಾದಚಾರಿಗಳಿಗೆ ನೆರಳಿನ ಆಶ್ರಯವಾಗಿರುವುದು ಸಂತೃಪ್ತಿ ಎಂದಿದೆ ಎಂದು ತಿಮ್ಮಕ್ಕ ಹೇಳಿದರು.

        ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅನಂತ ಲಕ್ಷ್ಮಿ, ಊರ್ಮಿಳಾ ಚನಾನ್, ಸೌಪರ್ಣಿಕಾ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ರಾಜ ಮುಖರ್ಜಿ ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link