ಪಾವಗಡ
ತಾಲ್ಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಡಗಲ್ ಹೋಬಳಿಯ ಕಾರನಾಗನಹಟ್ಟಿ ಗ್ರಾಮದ ಅಡಕೆ ವ್ಯಾಪಾರಿ ರಾಮಪ್ಪನವರ ಮನೆ ಬೀಗ ಒಡೆದು, ಬೀರುವಿನಲ್ಲಿದ್ದ 1 ಲಕ್ಷ ನಗದು ಹಣ ಮತ್ತು 10 ಸಾವಿರ ರೂ. ಮೌಲ್ಯದ ಮೊಬೈಲ್‍ನ್ನು ಕಳ್ಳರು ದೋಚಿಕೊಂಡು ಹೋದ ಪ್ರಕರಣ ಶುಕ್ರವಾರ ತಡ ರಾತ್ರಿ ಜರುಗಿದೆ.
ರಾಮಪ್ಪ ತಮ್ಮ ಕುಟುಂಬ ಸಮೇತ ಶುಕ್ರವಾರ ನೆಂಟರಾದ ರಂಗಸಮುದ್ರ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ್ ರವರ ಮನೆಗೆ ವರ ಮಹಾಲಕ್ಷ್ಮಿ ಹಬ್ಬಕ್ಕೆ ಹೋಗಿದ್ದರು. ಹಬ್ಬ ಮುಗಿಸಿಕೊಂಡು ರಾಮಪ್ಪ ಶನಿವಾರ ಮನೆಗೆ ಹೋಗಿ ನೋಡಿದಾಗ ಬಾಗಿಲು ಒಡೆದು ಮನೆಯಲ್ಲಿ ಬೀರುವಿನಲ್ಲಿದ್ದ ವಸ್ತುಗಳು ಹಾಗೂ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಕಳ್ಳತನ ಮಾಡಿಕೊಂಡು ಹೋಗಿರುವುದು ಬಯಲಾಗಿದೆ .
ಅಕ್ಕಪಕ್ಕವವರ ಮನೆಗೆ ಹೊರಗಿನಿಂದ ಚಿಲಕ ಹಾಕಿ, ಈ ಕೃತ್ಯ ಎಸಗಿದ್ದಾರೆ. ರಾಮಪ್ಪ ಮನೆಯ ಹತ್ತಿರ ಹೋದಾಗ ಪಕ್ಕದ ಮನೆಯವರು ರಾಮಪ್ಪನನ್ನು ತಮ್ಮಗಳ ಮನೆಯ ಕೂಗಿ ಚಿಲಕ ತೆಗೆಯಲು ತಿಳಿಸಿದ್ದಾರೆ. ಕಳ್ಳರು ತಮ್ಮ ಚಾಲಾಕಿತನ ತೋರಿಸಿ, ಈ ಕಳ್ಳತನ ಎಸಗಿದ್ದಾರೆ. ರಾಮಪ್ಪ ಅಡಕೆ ವ್ಯಾಪಾರ ಮಾಡುತ್ತಿದ್ದರು. ಕೊರೋನಾದಂತಹ ದುಸ್ಥಿತಿಯಲ್ಲಿ ಕಳ್ಳತನ ವಾಗಿರುವುದರಿಂದ ರಾಮಪ್ಪನ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಸ್ಥಳಕ್ಕೆ ಅರಸೀಕೆರೆ ಠಾಣಾ ಪೊಲೀಸರು ಆಗಮಿಸಿ, ಎಸ್.ಐ. ಶ್ರೀನಿವಾಸ್ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
