ಕೊರೊನಾ ಆಹ್ವಾನಿಸುತ್ತಿರುವ ಎಪಿಎಂಸಿ ಮಾರುಕಟ್ಟೆ

ತಿಪಟೂರು
     ಕಿಲ್ಲರ್ ಕೊರೊನಾ ಮಹಾಮಾರಿಯ ನಡುವೆಯೂ ರೈತರ ಹಿತದೃಷ್ಟಿಯಿಂದ ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು, ಎಪ್ರಿಲ್ 29 ರಿಂದ ತಿಪಟೂರಿನ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜನ್ನು ಪ್ರಾರಂಭ ಮಾಡಿ ರೈತರ ಮೆಚ್ಚುಗೆಗೆ ಎಲ್ಲರೂ ಪಾತ್ರರಾಗಿದ್ದರು.
     ಪ್ರಾರಂಭದಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಆರಂಭ ಶೂರತನ ತೋರಿಸಿದ ಎ.ಪಿ.ಎಂ.ಸಿ ಮತ್ತಿತರ ಸಿಬ್ಬಂದಿ, ಇಂದು ತಮ್ಮ ಹಿಡಿತÀವನ್ನು ಸಡಿಲಿಸಿದ್ದು ಕೊರೊನಾ ಸೋಂಕಿಗೆ ಮುಕ್ತ ಆಹ್ವಾನವನ್ನು ಕೊಡುವಂತೆ ನಡೆದುಕೊಳ್ಳುತ್ತಿದ್ದಾರೆ.ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರು ಎ.ಪಿ.ಎಂ.ಸಿ ಮಾರುಕಟ್ಟೆಯನ್ನು ಕೊರೊನಾದ ಮಧ್ಯೆ ತೆರೆಯಲು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಉಪವಿಭಾಗಾಧಿಕಾರಗಳು, ಡಿ.ವೈ.ಎಸ್ಪಿ, ನಗರ ಠಾಣೆ ಸಿಬ್ಬಂದಿ, ಬೆಸ್ಕಾಂ, ನಗರಸಭೆ, ಕೊಬ್ಬರಿ ವರ್ತಕರು, ರವಾನೆದಾರರು ಮುಂತಾದವರನ್ನು ಕರೆಸಿ ಸಭೆ ಮಾಡಿದ್ದರು.
 
     ಆ ನಿಯಮದಂತೆ ಹೊರ ರಾಜ್ಯದ ಲಾರಿಗಳ ಚಾಲಕರು, ಕ್ಲೀನರ್‍ಗಳು ಎಲ್ಲ್ಲಿಯೂ ಇಳಿಯಬಾರದು. ಅವರಿಗೆ ತಿಳಿಸಿರುವ ಸ್ಥಳದಲ್ಲೇ ಉಳಿದುಕೊಳ್ಳಬೇಕು.  ಅವರಿಗೆ ಊಟದ ವ್ಯವಸ್ಥೆಯನ್ನು ರವಾನೆದಾರರು ಮಾಡಬೇಕು. ಲಾರಿಗಳು ಮಾರುಕಟ್ಟೆಯಿಂದ ಹೊರಗೆ ಹೋಗುವಾಗ ಸಂಪೂರ್ಣವಾಗಿ ಮುಚ್ಚಿ ಹಗ್ಗವನ್ನು ಹಾಕಿರಬೇಕು. ಮಾರುಕಟ್ಟೆಗೆ ಎ.ಪಿ.ಎಂ.ಸಿಯವರು ಗೊಟ್ಟಿರುವ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪ್ರವೇಶ,  ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಿರಬೇಕು ಎಂದು ತೀರ್ಮಾನವಾಗಿತ್ತು. ಎಲ್ಲರೂ ಈ ನಿಬಂಧÀನೆಗಳಿಗೆ ಸಮ್ಮತಿಸಿದ ಮೇಲೆ  ಏಪ್ರಿಲ್ 29 ರಿಂದ ಕೊಬ್ಬರಿ ಹರಾಜು ಪ್ರಾರಂಭವಾಗಿತ್ತು. ಈ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಆರಕ್ಷಕರು ಕೆಲವು ಪ್ರಕರಣಗಳನ್ನು ದಾಖಲಿಸಿ,  ದಂಡವನ್ನು ವಸೂಲಿ ಮಾಡಿದ್ದರು.
     ಮಾರುಕಟ್ಟೆ ಪ್ರವೇಶಿಸುವ ಲಾರಿಗಳ ಚಾಲಕರು, ಕ್ಲೀನರ್‍ಗಳಿಗೆ ಆರೋಗ್ಯ ತಪಾಸಣೆಮಾಡಿ, ಲಾರಿಗೆ ಸಂಪೂರ್ಣವಾಗಿ ಕ್ರಿಮಿನಾಶಕವನ್ನು ಸಿಂಪಡಿಸಿ ಒಳಗೆ ಕಳುಹಿಸುತ್ತಿದ್ದಾರೆ. ಆದರೆ ಮತ್ತದೇ ವಾಹನ ಹೊರಗೆ ಹೋಗುವಾಗ ಅರ್ಧ ಲೋಡ್ ಆಗಿರುತ್ತದೆ ಮತ್ತು ಲಾರಿಗಳಿಗೆ ಸೂಕ್ತವಾದ ಹಗ್ಗಗಳನ್ನು ಹಾಕಿ ಕಟ್ಟಿರುವುದಿಲ್ಲ.  ಹೊರಗಡೆ ಇನ್ನುಳಿದ ಜಾಗಕ್ಕೆ ಸರಕನ್ನು ತುಂಬಿಸಲು ಹೋಗುವಾಗ ಕೊರೊನಾ ಹರಡುವುದಿಲ್ಲವೇ?  ಸಂಪೂರ್ಣವಾಗಿ ಹಗ್ಗ ಹಾಕದೇ ಇರುವ ಲಾರಿಗಳನ್ನು ಮಾರುಕಟ್ಟೆಯ ಪ್ರಾಂಗಣದಿಂದ ಏಕೆ ಹೊರಗೆ ಕಳುಹಿಸುತ್ತಿದ್ದಾರೆಂಬುದೆ ಸಾರ್ವಜನಿಕರ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap