ಕೊಟ್ಟೂರು
ಶಿಥಿಲಗೊಂಡಿದ್ದ ಮನೆ ಕೆಡವಲು ನಿಯುಕ್ತಿಗೊಂಡಿದ್ದ ಬಡ ಕಾರ್ಮಿಕನೊಬ್ಬನ ಮೇಲೆ ಮನೆ ಕುಸಿದು ಹಠಾತ್ತನೆ ಬಿದ್ದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಉಜ್ಜಯಿನಿ ವೃತ್ತದ ಬಳಿಯಿರುವ ಬೆಟಗೇರಿ ಕುಟುಂಬದವರ ಮನೆ ಬಳಿ ನಡೆದಿದೆ.
ಅಂಜಿನಪ್ಪ (37) ಈ ದುರ್ಘಟನೆಯಲ್ಲಿ ಸಾವಿಗೀಡಾದ ಬಡ ಕಾರ್ಮಿಕನಾಗಿದ್ದು ಈತನೊಂದಿಗೆ ಕೆಲಸ ಮಾಡುತ್ತಿದ್ದ ಇತರ ಐದು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟ ಅಂಜಿನಪ್ಪನ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಮನೆ ಬಿದ್ದ ಸ್ಥಳದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ತಾಲೂಕಿನ ಹುಣಸಿಕಟ್ಟಿ ಗ್ರಾಮದ ಆರು ಜನ ಕಾರ್ಮಿಕರು ಪಟ್ಟಣದಲ್ಲಿನ ಬೆಟಗೇರಿ ಕುಟುಂಬದವರಿಗೆ ಸೇರಿದ ಶಿಥಿಲಗೊಂಡಿದ್ದ ಮನೆಯನ್ನು ಕೆಡವಲು ನಿಯೋಜನೆಗೊಂಡಿದ್ದರು. ಈ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಮುಂದಾದ ಆರು ಜನ ಇದ್ದ ಕಾರ್ಮಿಕರು ಮನೆ ಕೆಡುವತ್ತಾ ಮುಂದಾಗಿ ಮುಂಭಾಗದ ಮನೆಯ ಆವರಣವನ್ನು ನೆಲಸಮಗೊಳಿಸಿದ್ದರು . ಇನ್ನೇನೂ ಹಿಂಭಾಗದ ಪ್ರದೇಶವನ್ನು ಕೆಡವಲು ಮುಂದಾಗುತ್ತಿದ್ದಂತೆ ಮನೆ ಕಾರ್ಮಿಕ ಅಂಜಿನಪ್ಪ ಮೇಲೆ ಒಮ್ಮೆಲೆ ಹಳೆಯ ಮನೆಯ ಮಣ್ಣು ಬೀಳತೊಡಗಿತು.
ಈ ಹಂತದಲ್ಲಿ ಅಂಜಿನಪ್ಪ ಮನೆಯಲ್ಲಿನ ಕೆಲ ಸಾಮಾನುಗಳನ್ನು ಹೊರಗೆ ತರಲು ಹೋಗಿದ್ದ ಮಹಿಳೆಯೊಬ್ಬಳನ್ನು ಹೊರಗೆ ಕಳುಹಿಸಿ ತಾನು ಹೊರ ಬರುವ ವೇಳೆಗೆ ಈ ದುರ್ಘಟನೆ ಸಂಭವಿಸಿತು. ಕೂಡಲೇ ಅಂಜಿನಪ್ಪನಿಗೆ ಉಸಿರಾಟ ನಿಂತು ಆತ ಕ್ಷಣ ಮಾತ್ರದಲ್ಲೇ ಸಾವಿಗೀಡಾದ ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ಅಂಜಿನಪ್ಪನ ಶವ ಹೊರ ತೆಗೆಯುವ ಕಾರ್ಯಾಚರಣೆ ಯನ್ನು ಕೈಗೊಂಡು ಯಶಸ್ವಿಯಾದರು. ತಹಶೀಲ್ದಾರ ಜಿ.ಅನಿಲ್‍ಕುಮಾರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣಕ್ಕೆ ಸಂಬಂ„ಸಿದಂತೆ ಕೊಟ್ಟೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿ.ಪಂ.ಸದಸ್ಯ ಎಂ.ಎಂ.ಜೆ ಹರ್ಷವಧರ್ನ ಈ ದುರ್ಘಟನೆಯಲ್ಲಿ ಸಾವಿಗೀಡಾದ ಕಾರ್ಮಿಕ ಅಂಜಿನಪ್ಪನ ಕುಟುಂಬದವರನ್ನು ಸಂತೈಸಿ ಸಂತ್ವಾನಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ