ಬೆಂಗಳೂರು:
ನಕಲಿ ನೋಟುಗಳನ್ನು ಎಲ್ಲೇ ಆಗಲಿ ಚಲಾವಣೆ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಬ್ಯಾಂಕ್ಗೆ ಕೊಡುವುದಂತೂ ತುಂಬಾ ಕಷ್ಟ. ಹೀಗಿರುವಾಗ 1 ಕೋಟಿ ರೂ. ಮೊತ್ತದ ನಕಲಿ ನೋಟುಗಳು ಬ್ಯಾಂಕ್ಗಳಿಗೆ ಜಮೆಯಾಗಿ ಅಲ್ಲಿಂದ ರಿಸರ್ವ್ ಬ್ಯಾಂಕ್ಗೂ ಜಮೆ ಆಗಿವೆ ಎಂದರೆ ಅಚ್ಚರಿಯೇ ಸರಿ..!
ರಿಸರ್ವ್ ಬ್ಯಾಂಕ್ಗೆ ಜಮೆ ಆಗಿರುವ ಹಣದಲ್ಲಿ 500 ರೂ. ಮುಖಬೆಲೆಯ 9,753 ನಕಲಿ ನೋಟುಗಳು, 1 ಸಾವಿರ ರೂ. ಮುಖಬೆಲೆಯ 5,783 ನಕಲಿ ನೋಟುಗಳು ಸೇರಿ 1. 05 ಕೋಟಿ ರೂ. ಮೊತ್ತದ ನಕಲಿ ನೋಟುಗಳು ಪತ್ತೆಯಾಗಿವೆ.ಈ ಬಗ್ಗೆ ಲಕ್ನೌದಲ್ಲಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಸಿಸ್ಟೆಂಟ್ ಮ್ಯಾನೇಜರ್ ರಂಜನಾ ಮರವಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ ಈ 15,436 ನಕಲಿ ನೋಟುಗಳು 2017ರ ಅಕ್ಟೋಬರ್ನಿಂದ 2018ರ ಮಾರ್ಚ್ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ಗೆ ಜಮೆ ಆಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ