ಹೊನ್ನವಳ್ಳಿ :
ಸಮಯಕ್ಕೆ ಸರಿಯಾಗಿ ಮಳೆ ಬಂದು ಈ ಬಾರಿಯಾದರು ಉತ್ತಮ ಇಳುವರಿ ದೊರೆಯುತ್ತದೆ ಎಂಬ ಆಶಾಭಾವನೆಯೊಂದಿಗೆ ರಾಗಿಯನ್ನು ಬಿತ್ತನೆ ಮಾಡಿ ರಾಗಿಯನ್ನು ಅರಗಲು ತಯಾರಾಗಿದ್ದ ರೈತರಿಗೆ ದುತ್ತನೆ ಎದುರಾಗಿದ್ದೇ ಈ ಯುರಿಯಾ ಎಂಬ ಪಡೆಂಭೂತ.
ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರೂ ಸಾಲ ಸೋಲಮಾಡಿ ಉಳುವ ಕಾಯಕವನ್ನು ಮಾಡಿ, ಪಚ್ಚೆ ಹಸಿರಿನ ರಾಗಿ ಪೈರನ್ನು ನೋಡಿ ಸಂತೋಷದಿಂದ ರಾಗಿಯನ್ನು ರಸಗೊಬ್ಬರ ಅಂಗಡಿಯ ಮುಂದೆ ಬಂದು ನಿಲ್ಲುತ್ತಿದುದ್ದು ಕಂಡು ಬಂದಿದ್ದೆ ಯೂರಿಯಾ ಇಲ್ಲವೆಂಬ ಧ್ವನಿ.
ಈಗ ರಾಗಿಯ ಬೆಳವಣಿಗೆ ಅತ್ಯಗತ್ಯವಾಗಿ ಬೇಕಾದ ಯೂರಿಯಾನೇ ಸಿಗದಿದ್ದರೆ ಮತ್ತೆರಾಗಿ ಬೆಳೆಯ ಮಾತೆಲ್ಲಿ ಎಂಬಂತಾಗಿದ್ದು ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ ಎಂಬ ಗಾದೆ ಮಾತು ನಿಜವಾಗುತ್ತದೆಯೇ ಎಂಬ ಬಾವನೆ ರೈತರಲ್ಲಿಕಾಡುತ್ತಿದೆ
ಹೊನ್ನವಳ್ಳಿಯ ರೈತ ಸೇವಾ ಸಹಕಾರ ಸಂಘ ಅಧ್ಯಕ್ಷರು ಹೆಚ್.ಕೆ ಮುಪನಯ್ಯ ತಿಳಿಸುವಂತೆ ನಾವು ಯೂರಿಯಾ 200 ಚೀಲ ತರಿಸಬೇಕಾಂದರೆಡಿ.ಎ.ಪಿ 200 ಚೀಲ, ಕಾಂಪ್ಲೆಕ್ಸ್ 100ಚೀಲ ತೆಗೆದುಕೊಂಡರೆ ಯೂರಿಯಾ 200 ಚೀಲ ಕೊಡುತ್ತಾರೆಂದು ಫೆಡರೇಷನ್‍ನವರು ತಿಳಿಸುತ್ತಾರೆ.ನಮ್ಮಲ್ಲಿ ಹೆಚ್ಚಾಗಿ ರಾಗಿಯನ್ನೇ ಬೆಳೆಯುವುದರಿಂದ ನಮಗೆ ಸುಮಾರು 1000 ದಿಂದ 2000 ಚೀಲದಷ್ಟುಯೂರಿಯಾ ಬೇಕಾಗುತ್ತದೆ.
ಈ ಯೂರಿಯಾವನ್ನು ತರಿಸಲು ನಾವು ಡಿ.ಎ.ಪಿಯನ್ನುತರಿಸಲು ಸಾಧ್ಯವಿಲ್ಲ ಮತ್ತೆ ಮಳೆಗಾಲವಾದ್ದರಿಂದಡಿ.ಎ.ಪಿ.ಮತ್ತುಕಾಂಪ್ಲೆಕ್ಸ್ ಹಾಳಾಗದಂತೆ ಸಂಗ್ರಹಿಸುವುದು ಕಷ್ಟವಾಗುತ್ತದೆಂದು ತಿಳಿಸಿದರು.ವಿಠ್ಠಲಾಪುರದ ರೈತ ನಂಜುಂಡಯ್ಯ ಹೇಳುವಂತೆ ಈ ಬಾರಿ ಉತ್ತಮ ಮಳೆಯಾಗಿದ್ದು ರಾಗಿ ಬಿತ್ತನೆ ಮಾಡಿ ಯೂರಿಯಾಗಾಗಿ ಸೊಸೈಟಿಯ ಹತ್ತಿರ ಬಂದರೆ ಗೊಬ್ಬರವಿಲ್ಲದೇ ಇರುವುದು ಬೇಸರವಾಗಿದೆ. ಮಳೆ ಒಂದುಕಡೆ ಆಟವಾಡುತ್ತಿದ್ದರೆ ಗೊಬ್ಬರದ ಸಮಸ್ಯೆ ಒಂದು ಕಡೆಯಿದ್ದು ರೈತರ ಜೀವನ ಸಾಕಾಗಿ ಹೋಗಿದ್ದು ಶೀಘ್ರವಾಗಿ ಯೂರಿಯಾದ ವ್ಯವಸ್ಥೆಯನ್ನು ಮಾಡದೇ ಹೋದರೆ ಇಷ್ಟು ದಿನ ನಾವು ಹೊಲದಲ್ಲಿ ಮಾಡಿದ ಕಷ್ಟ ಫಲವಿಲ್ಲದೇ ಹೋಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ