ಹೊಸ ಬಸ್ ಶೇಲ್ಟರ್‍ಗಳ ನಿರ್ಮಾಣ: ದಮ್ಮೂರು ಶೇಖರ್

ಬಳ್ಳಾರಿ

    ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 18 ಗ್ರಾಮಗಳಲ್ಲಿ ಹಾಗೂ ಬಳ್ಳಾರಿ ನಗರದ ವ್ಯಾಪ್ತಿಯಲ್ಲಿನ ವಿವಿಧ ಪ್ರದೇಶಗಳಲ್ಲಿ ಬಸ್ ಶೇಲ್ಟರ್‍ಗಳನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಬುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿದರು.

   ಬಳ್ಳಾರಿ ಎನ್.ಇ.ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಬಳ್ಳಾರಿ ನಗರ ಸಂಚಾರಿ ಇನ್ಸೆಪೆಕ್ಟರ್ ಆದ ನಾಗರಾಜ ಮಾಡಿಹಳ್ಳಿ ಹಾಗೂ ಪ್ರಾಯೋಜಕರು ಸಭೆಯಲ್ಲಿ ಭಾಗವಹಿಸಿದ್ದರು.ಸಭೆಯಲ್ಲಿ ನಗರದ ವಿವಿಧ ಸ್ಥಳಗಳನ್ನು ಗುರುತಿಸಲಾಯಿತು.

   ಅವುಗಳ ವಿವರ ಇಂತಿವೆ: ಕನಕ ದುರ್ಗಮ್ಮ ದೇವಸ್ಥಾನದ ಹತ್ತಿರ, ಹೊಸಪೇಟೆ ರಸ್ತೆಯ ಸುಧಾ ಕ್ರಾಸ್ ವೃತ್ತ, ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಕೌಲ್ ಬಜಾರ್ ರಸ್ತೆ, ಅಲ್ಲಿಪುರ ಮಹಾದೇವ ತಾತ ಮಠದ ಹತ್ತಿರ, ಬಿ.ಗೋನಾಳ್ ಹತ್ತಿರ, ವಿಮ್ಸ್ ಆಸ್ಪತ್ರೆ ಬಸ್ ನಿಲ್ದಾಣ ನವೀಕರಣ ಮಾಡುವುದು, ಎಸ್.ಪಿ. ವೃತ್ತದಲ್ಲಿ ಸಿರುಗುಪ್ಪ ಕಡೆಗೆ, ಸುಧಾ ವೃತ್ತ ಒ.ಪಿ.ಡಿ ಸರ್ಕಲ್ ಪೊಲೀಸ್ ಔಟ್ ಫೋಸ್ಟ್, ಕೆ.ಇ.ಬಿ. ವೃತ್ತ ಸಂಗನಕಲ್ಲು ರಸ್ತೆ, ಡಾ.ರಾಜಕುಮಾರ್ ರಸ್ತೆ (ಅನಂತಪುರ ರಸ್ತೆ) ಜಿಲ್ಲಾ ಆಸ್ಪತ್ರೆ ಹತ್ತಿರ, ಡಾ.ರಾಜಕುಮಾರ್ ರಸ್ತೆ (ಅನಂತಪುರ ರಸ್ತೆ) ಎಂ.ಜಿ ಆಟೋ ಮೊಬೈಲ್ಸ್ ಹತ್ತಿರ, ಹೆಚ್.ಆರ್.ಜಿ ವೃತ್ತ ಮೋತಿ ಟ್ಯಾಕೀಸ್ ಪಕ್ಕದಲ್ಲಿ, ಎ.ಪಿ.ಎಂ.ಸಿ ವೃತ್ತದ ಬೆಂಗಳೂರು ಕಡೆಗೆ, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 18 ಗ್ರಾಮಗಳು (ಜಾನೆಕುಂಟೆ, ಬೆಳಗಲ್ಲು, ಆಲದಹಳ್ಳಿ, ಕೊಳಗಲ್ಲು, ಹೊನ್ನಳ್ಳಿ, ಮುಂಡ್ರಿಗಿ, ಬಳ್ಳಾರಿ ಕಸಬಾ, ಪತ್ರಬುದಿಹಳ್, ಆಂದ್ರಾಳ್, ಬಿ.ಗೋನಾಳ್, ಬಿಸಲಹಳ್ಳಿ, ಬೇವಿನಹಳ್ಳಿ, ಹದ್ದಿನಗುಂಡು, ಸಂಗನಕಲ್ಲು, ಹಲಕುಂದಿ, ಮಿಂಚೇರಿ, ಸಂಜೀವನರಾಯನಕೋಟೆ).

    ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಪ್ಪ ಬಿರಾದಾರ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ರವಿಶಂಕರ್ ಹಾಗೂ ಎನ್.ಇ.ಕೆ.ಎಸ್.ಆರ್.ಟಿ.ಸಿ ಹಿರಿಯ ಅಧಿಕಾರಿಗಳು ಹಾಗೂ ಸಂಚಾರಿ ಪೆÇಲೀಸ ಅಧಿಕಾರಿಗಳು, ಪ್ರಾಯೋಜಕರು ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link