ಬಳ್ಳಾರಿ
ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆ ಅಡಿ ರೂ.150ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಟ್ರಾಮಾ ಕೇರ್(ತುರ್ತು ಚಿಕಿತ್ಸಾ ಘಟಕ)ಗೆ ಇ-ಲೋಕಾರ್ಪಣೆ ಆ.31ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ವಿಮ್ಸ್ ನಿರ್ದೇಶಕ ಡಾ.ದೇವಾನಂದ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಸಚಿವ ಡಾ.ಹರ್ಷವರ್ಧನ್ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ.31ರಂದು ಬೆಳಗ್ಗೆ 11.30ಕ್ಕೆ ಎಲೆಕ್ಟ್ರಾನಿಕ್ ಉದ್ಘಾಟನೆ(ಇ-ಉದ್ಘಾಟನೆ)ಮಾಡಲಿದ್ದಾರೆ. ಕೇಂದ್ರ ಸಚಿವರಿಗೆ ಆರೋಗ್ಯ ಖಾತೆಯ ಕೇಂದ್ರ ರಾಜ್ಯ ಸಚಿವ ಅಶ್ವೀನಿಕುಮಾರ್ ಚೌಬೆ, ಸಿಎಂ ಯಡಿಯೂರಪ್ಪ ಅವರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಉಪಸ್ಥಿತರಿರಲಿದ್ದಾರೆ.
ಬಳ್ಳಾರಿಯ ಟ್ರಾಮಾಕೇರ್ ಕೇಂದ್ರದ ಬಳಿ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಅರಣ್ಯ,ಪರಿಸರ,ಜೀವವೈವಿಧ್ಯತೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಉಪಸ್ಥಿತರಿರಲಿದ್ದಾರೆ.ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಬಳ್ಳಾರಿ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ,ಸಂಸದರಾದ ವೈ.ದೇವೇಂದ್ರಪ್ಪ,ಕರಡಿ ಸಂಗಣ್ಣ, ಸೈಯದ್ ನಾಸೀರ್ ಹುಸೇನ್, ಶಾಸಕರಾದ ಇ.ತುಕಾರಾಂ,ಪಿ.ಟಿ.ಪರಮೇಶ್ವರನಾಯಕ್, ಎನ್.ವೈ.ಗೋಪಾಲಕೃಷ್ಣ, ಎಲ್.ಬಿ.ಪಿ.ಭೀಮಾನಾಯಕ್, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿ.ಕರುಣಾಕರರೆಡ್ಡಿ, ಜಿ.ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಜೆ.ಎನ್.ಗಣೇಶ, ಎಸ್.ವಿ.ರಾಮಚಂದ್ರ, ಚಂದ್ರಶೇಖರ ಪಾಟೀಲ್, ತಾಪಂ ಅಧ್ಯಕ್ಷೆ ಎಸ್.ಆರ್.ಲೀಲಾವತಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಸುನೀಲ್ ಶರ್ಮಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಟಿ.ಕೆ .ಅನಿಲಕುಮಾರ್, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ಆರ್.ನಂದಿನಿ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಸೂಪರ್ ಸ್ಪೇಶಾಲಿಟಿ ಟ್ರಾಮಾಕೇರ್ ಕೇಂದ್ರದ ಬಗೆಗಿಷ್ಟು:
ವಿಮ್ಸ್ ಸಂಸ್ಥೆಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಾಗಿ ಬರುವಂತಹ ರೋಗಿಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಮತ್ತು ಇತರೆ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು, ಇದರಿಂದ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಸರ್ಕಾರವು ಈ ನಿಟ್ಟಿನಲ್ಲಿ ವಿಮ್ಸ್ ಸಂಸ್ಥೆಯನ್ನು ಏಮ್ಸ್ ಮಾದರಿಯನ್ನಾಗಿ ಪರಿವರ್ತಿಸಲು ಉನ್ನತೀಕರಣಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಈ ಪ್ರಸ್ತಾವನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸ್ಪಂದಿಸಿ ವಿಮ್ಸ್ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷಾ-3 ಯೋಜನೆ ಅಡಿಯಲ್ಲಿ ಟ್ರಾಮಾ ಕೇರ್ ಕೇಂದ್ರ (ತುರ್ತು ಚಿಕಿತ್ಸಾ ಘಟಕವನ್ನು) ಪ್ರಾರಂಭಿಸಲು ಮತ್ತು ಸೂಪರ್ ಸ್ಪೆμÁಲಿಟಿ ಆಸ್ಪತ್ರೆಗೆ ಅವಶ್ಯಕವಿರುವ ಉಪಕರಣಗಳನ್ನು ಅಳವಡಿಸಲು ಅನುಮೋದನೆ ನೀಡಿತ್ತು.
ಅದರಂತೆ ವಿಮ್ಸ್ ಅಧೀನದಲ್ಲಿ ಪಿಎಂಎಸ್‍ಎಸ್‍ವೈ-3 ಯೋಜನೆ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯೋಗದಲ್ಲಿ ರೂ.150ಕೋಟಿಗಳ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಟ್ರಾಮ ಕೇರ್ ಕೇಂದ್ರ ಕಟ್ಟಡ ಮತ್ತು ಹೈಟೆಕ್ ವೈದ್ಯಕೀಯ ಉಪಕರಣಗಳು ಒಳಗೊಂಡ ಯೋಜನೆ ರೂಪಿಸಲಾಗಿರುತ್ತದೆ.
ಕೇಂದ್ರ ಸರ್ಕಾರದ ವತಿಯಿಂದ ರೂ.120ಕೋಟಿಗಳು ಮತ್ತು ರಾಜ್ಯ ಸರ್ಕಾರದ ವತಿಯಿಂದ ರೂ.30 ಕೋಟಿಗಳು(80:20 ಅನುಪಾತದಲ್ಲಿ) ಟ್ರಾಮಾ ಕೇರ್ ಸೆಂಟರ್‍ನ ಕಟ್ಟಡ ಕಾಮಗಾರಿ, ಉಪಕರಣ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉಪಕರಣಗಳನ್ನು ಒದಗಿಸಲು ಹೈಟ್ಸ್ ಇವರಿಗೆ ವಹಿಸಲಾಗಿರುತ್ತದೆ. ಕಟ್ಟಡ ಕಾಮಗಾರಿಗೆ ರೂ.65ಕೋಟಿಗಳು ಮತ್ತು ಉಪಕರಣಗಳಿಗೆ ರೂ.85 ಕೋಟಿಗಳು (ಟ್ರಾಮಾ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉಪಕರಣಗಳು ಒಳಗೊಂಡಿರುತ್ತವೆ) ಟ್ರಾಮಾ ಕೇರ್ ಸೆಂಟರ್ ಕಟ್ಟಡವು 49 ಸಾಮಾನ್ಯ ಹಾಸಿಗೆ, 72 ಐಸಿಯು ಹಾಸಿಗೆ ಮತ್ತು ತುರ್ತು ಚಿಕಿತ್ಸ ಘಟಕದಲ್ಲಿ 79 ಹಾಸಿಗೆಗಳು ಒಟ್ಟಾರೆ 200 ಹಾಸಿಗೆಗಳ ಸಾಮಥ್ರ್ಯವನ್ನು ಹೊಂದಿದೆ.
ಇದರ ಜೊತೆಗೆ ನ್ಯೂರೋ ಸರ್ಜರಿ ವಿಭಾಗ(ಅಪಘಾತದಿಂದ ತಲೆಯ ಮೇಲೆ ಪೆಟ್ಟು, ಮೆದುಳು ಹಾಗೂ ನರಹುರಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ), ಪ್ಲಾಸ್ಟಿಕ್ ಸರ್ಜರಿ ವಿಭಾಗ(ಸುಟ್ಟ ಗಾಯಗಳು, ಮರು ನಿರ್ಮಾಣದ ಶಸ್ತ್ರ, ಸೂಕ್ಷ್ಮ ರಕ್ತನಾಳಗಳ ಶಸ್ತ್ರಚಿಕಿತ್ಸೆ ಹಾಗೂ ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆಗಳು),ಆರ್ಥೋಪಿಡಿಕ್ಸ್ ವಿಭಾಗ(ಮೂಳೆ ಮತ್ತು ಸಂಧಿಗಳು ಸಮಸ್ಯೆಗಳು),ರೇಡಿಯೋಲಜಿ ವಿಭಾಗ(ದೇಹದ ವಿವಿಧ ಭಾಗಗಳ ಸಿ.ಟಿಸ್ಕ್ಯಾನ್ ಮತ್ತು ರೋಗ ನಿರ್ಧಾರ ಮಾಡುವ ವ್ಯವಸ್ಥೆ),ಅನಸ್ಥೇಷಿಯ ವಿಭಾಗ(ವಿಶೇಷ ಶಸ್ತ್ರಚಿಕಿತ್ಸೆಗಳಿಗೆ ಅರವಳಿಕೆ ಮದ್ದು ನೀಡುವ ವಿಭಾಗ)ಗಳನ್ನು ಹೊಂದಿರುವುದು ವಿಶೇಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ