ಬರಗೂರರ ಕುಟುಂಬದ ಕುಡಿ ಶಿಲ್ಪಾಗೆ ಅಧ್ಯಾಪಕಿಯಾಗುವ ಮಹತ್ವಕಾಂಕ್ಷೆ

ಬರಗೂರು

    ಪ್ರತಿಭೆ ಅರಳಲು ಯಾವ ಪ್ರದೇಶವಾದರೇನು ಎಂಬುದಕ್ಕೆ ನೇರ ನಿದರ್ಶನ ಇಲ್ಲೊಂದಿದೆ. ಅದುವೆ ಹುಟ್ಟಿದ್ದು ವಾಸವಿರುವುದು ಬಯಲು ಸೀಮೆ ಗಡಿಭಾಗದ ಸಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿ. ಖ್ಯಾತ ಬಂಡಾಯ ಸಾಹಿತಿ ಡಾ ಬರಗೂರು ರಾಮಚಂದ್ರಪ್ಪನವರ ಹಿರಿಯ ಸಹೋದರ ಶಿಕ್ಷಕ ದಿವಂಗತ ಬಿಆರ್. ಚಿಕ್ಕರಂಗಪ್ಪನವರ ಕಿರಿ ಮಗ ಓಬಳೇಶ್‍ರ ಸುಪುತ್ರಿ ಶಿಲ್ಪ ಬಿ.ಓ. ಬರಗೂರು ಪಟ್ಟಣದ ಜ್ಞಾನ ಜ್ಯೋತಿ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಪಿಯೂಸಿಯಲ್ಲಿ 555 (ಶೇ. 92.05) ಅಂಕಗಳನ್ನು ಪಡೆದು ಗ್ರಾಮೀಣ ಭಾಗಕ್ಕೆ ಕೀರ್ತಿ ತಂದಿದ್ದಾರೆ.

    ಈ ವಿದ್ಯಾರ್ಥಿನಿ ಮೂಲತಃ ಆಂಧ್ರ ಗಡಿಭಾಗದ ಶಿರಾ ತಾಲ್ಲೂಕಿನ ಬರಗೂರು ಗ್ರಾಮದವರು. ತಂದೆ ಓಒಳೇಶ್, ತಾಯಿ ಮಹಾದೇವಮ್ಮ ಅವರ ಮಗಳು 1ನೇ ತರಗತಿಯಿಂದ 10ನೇ ತರಗತಿವರೆಗೆ ಗಡಿ ಗ್ರಾಮವಾದ ಬರಗೂರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ದ್ವಿತೀಯ ಪಿಯೂಸಿಯನ್ನು ವಾಣಿಜ್ಯ ವಿಭಾಗದಲ್ಲಿ ಗ್ರಾಮದ ಜ್ಞಾನ ಜ್ಯೋತಿ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

    ಅವರು ಯಾವುದೇ ಮನೆ ಪಾಠಕ್ಕೆ ಹೋಗದೆ, ಕನ್ನಡದಲ್ಲಿ 96, ಇಂಗ್ಲೀಷ್‍ನಲ್ಲಿ 71, ಇತಿಹಾಸ 98, ಅರ್ಥಶಾಸ್ತ್ರ 96, ವ್ಯವಹಾರ ಅಧ್ಯಯನ 95, ಲೆಕ್ಕಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳು ಸೇರಿ, ಒಟ್ಟಾರೆ 555 ಅಂಕ ಗಳಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಸಂತೋಷ ಹಂಚಿಕೊಳ್ಳುತ್ತಾ, ನಮ್ಮ ತಂದೆಯವರ ಅಪ್ಪ ಮತ್ತು ಚಿಕ್ಕಪ್ಪಂದಿರು ( ತಾತಂದಿರು) ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಾಗಿದ್ದು, ನಮ್ಮ ತಂದೆ ಹೈನುಗಾರಿಕೆಯಲ್ಲಿ ತೊಡಗಿದ್ದು ತಾಯಿ ಮನೆಯಲ್ಲಿ ಗೃಹಿಣಿಯಾಗಿದ್ದಾರೆ.

    ಅವರಿಗೆ ನಾನು ಸಹ ಕೆಲಸದಲ್ಲಿ ನೆರವಾಗುತ್ತಾ, ವ್ಯಾಸಂಗ ಮಾಡಿ, ಹೆಚ್ಚು ಅಂಕ ಪಡೆಯಲು ಜ್ಞಾನಜ್ಯೋತಿ ಕಾಲೇಜಿನ ಪ್ರಾಂಶುಪಾಲ ಡಿ.ಎನ್.ಪರಮೇಶ್‍ಗೌಡರ ಮಾರ್ಗದರ್ಶನ ಹಾಗೂ ಉಪನ್ಯಾಸಕರ ಪರಿಣಾಮಕಾರಿ ಬೋಧನೆಯೆ ಕಾರಣ. ನಾನು ಮುಂದೆ ಉನ್ನತ ಪದವಿ ಪಡೆದು ನಮ್ಮ ತಾತಂದಿರಾದ ಬಿ.ಆರ್ ಚಿಕ್ಕರಂಗಪ್ಪ, ಬಿ.ಆರ್.ಜಯರಾಮಯ್ಯ ಮತ್ತು ಪ್ರಖ್ಯಾತಿ ಬಂಡಾಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರಂತೆ ನಾನೂ ಅಧ್ಯಾಪಕಿಯಾಗುವ ಮಹತ್ವಕಾಂಕ್ಷೆ ಹೊಂದಿದ್ದೇನೆ. ಸಮಾಜ ಸೇವೆ ಮಾಡುವ ಗುರಿಯನ್ನೂ ಸಹ ಹೊಂದಿದ್ದೇನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap