ಬೆಂಗಳೂರು
ಶಾಸಕ ಸತ್ಯನಾರಾಯಣ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುವ ಸೂಚನೆ ಸಿಗುತ್ತಿದ್ದಂತೆಯೇ ಕ್ಷೇತ್ರದಲ್ಲಿ ರಾಜಕೀಯ ಕಣ ನಿಧಾನವಾಗಿ ರಂಗೇರುತ್ತಿದೆ. ಸತ್ಯಾನಾರಾಯಣ್ ಕುಟುಂಬದ ಸದಸ್ಯರ ಮೇಲೆ ಬಿಜೆಪಿ- ಜೆಡಿಎಸ್ ಕಣ್ಣಿಟ್ಟಿದ್ದರೆ,ಇತ್ತ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಹ ಟಿಕೆಟ್‍ಗಾಗಿ ಪಕ್ಷದ ವರಿಷ್ಠರು ರಾಜ್ಯದ ನಾಯಕರ ಮೇಲೆ ಇನ್ನಿಲ್ಲದ ಪ್ರಭಾವ ಬೀರುತ್ತಿದ್ದಾರೆ.ಈ ನಿಟ್ಟಿನಲ್ಲಿಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕ್ಷೇತ್ರದ ಬಗ್ಗೆ ಕೆಲಕಾಲ ಚರ್ಚಿಸಿದ್ದಾರೆ.
ಈ ಕ್ಷೇತ್ರಕ್ಕಾಗಿ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ತಾಲೀಮು ಆರಂಭಿಸಿದ್ದು, ತಂತ್ರ ರೂಪಿಸುತ್ತಿದೆ.ಇಲ್ಲಿಯವರೆಗೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ.ಈ ಬಾರಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ಕೊಡಲು ನಿರ್ಧರಿಸಿದ್ದು, ಸತ್ಯನಾರಾಯಣ್ ಕುಟುಂಬದ ಸದಸ್ಯರಿಗೂ ಬಿಜೆಪಿ ಒಂದೆಡೆ ಮಣೆಹಾಕಿದೆ.ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಕ್ಕೆ ಶಿರಾದಲ್ಲಿ ಪ್ರಬಲ ಪೈಪೆÇೀಟಿ ಇದ್ದರೂ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲು ತಂತ್ರಗಾರಿಕೆ ರೂಪಿಸಿದೆ.
ಮೊದಲಿನಿಂದಲೂ ಜೆಡಿಎಸ್ ಭದ್ರಕೋಟೆಯಾಗಿರುವ ಶಿರಾ ಈ ಬಾರಿ ಉಪಚುನಾವಣೆಯಲ್ಲಿ ತೆಕ್ಕೆಯಿಂದ ಜಾರಿಕೊಳ್ಳದಂತೆ ಜೆಡಿಎಸ್ ಸಹ ಎಚ್ಚೆತ್ತುಕೊಂಡಂತಿದೆ.ಹೀಗಾಗಿ ಸತ್ಯನಾರಾಯಣ್ ಕುಟುಂಬದ ಸದಸ್ಯರ ಮೇಲೆಯೇ ತೆನೆಹೊತ್ತ ಮಹಿಳೆಯ ಕಣ್ಣು ಕೇಂದ್ರೀ ಕೃತವಾಗಿದೆ.ಮುಂದಿನವಾರ ಪಕ್ಷದ ಮುಖಂಡರ ಸಭೆ ನಡೆಸಿ ಈ ಬಗ್ಗೆ ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ.ಶಿರಾ ಉಪಚುನಾವಣೆ ವಿಚಾರವಾಗಿ ತುರುವೆಕೆರೆಯಲ್ಲಿಂದು ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಶಿರಾ ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್ ಭದ್ರಕೋಟೆ. ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ,ಸತ್ಯನಾರಾಯಣ ರಿಂದ ತುಂಬಲಾರದ ನಷ್ಟವಾಗಿದೆ.
ಟಿಕೆಟ್ ಬಗ್ಗೆ ಏನ್ನೂ ಚರ್ಚೆಯಾಗಿಲ್ಲ, ಟಿಕೆಟ್ ನೀಡುವ ವಿಚಾರವಾಗಿ ಇನ್ನೂ ಅಂತಿಮವಾಗಿಲ್ಲ.ಅವರ ಕುಟುಂಬಕ್ಕೆ ಟಿಕೆಟ್ ನೀಡುವುದು ಮೊದಲನೇ ಆಧ್ಯತೆ.ಕಾರ್ಯಕರ್ತರ ಸಭೆ ನಡೆಸಿ ಮುಂದಿನ ನಿರ್ಧಾರ ಎಂದಿದ್ದಾರೆ.ಗೆಲ್ಲುವ ಭರವಸೆಯೊಂದಿಗೆ ಟಿ.ಬಿ.ಜಯಚಂದ್ರ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಖಮಾಡಿದ್ದಾರೆ.ಇತ್ತೀಚೆಗೆ ಕ್ಷೇತ್ರದಲ್ಲಿ ಹೆಚ್ಚು ಓಡಾಡಿಕೊಂಡಿರುವ ಟಿಬಿಜೆ ಜನರನ್ನು ಆಕರ್ಷಿಸಲು ಆರಂಭಿಸಿದ್ದು ಜೆಡಿಯು ಕೂಡ ಸ್ಪರ್ಧಿಸಲು ಯತ್ನಿಸುತ್ತಿದೆ.
ಸಿದ್ದರಾಮಯ್ಯ ಭೇಟಿ ಬಳಿಕ ಟಿ.ಬಿ. ಜಯಚಂದ್ರ ಮಾತನಾಡಿ,ಉಪ ಚುನಾವಣೆ ಯಾವ ಸಂದರ್ಭದಲ್ಲಿ ಘೋಷಣೆ ಆಗತ್ತದೆಯೋ ಗೊತ್ತಿಲ್ಲ.ಅಕಾಲಿಕವಾಗಿ ಸತ್ಯನಾರಾಯಣ ಮರಣ ಹೊಂದಿದ್ದರಿಂದ ಉಪಚುನಾವಣೆ ಬಂದಿದೆ.ಸ್ವಾಭಾವಿಕವಾಗಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿದೆ.ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಎಂದಿಗೂ ಕೂಡ ಸಿದ್ಧವಿದೆ ಎಂದರಿ ಎರಡೂವರೆ ವರ್ಷದ ಹಿಂದೆ ತಾವು ಚುನಾವಣೆಯಲ್ಲಿ ಸೋತಿದ್ದರೂ ಕೂಡ ಕ್ಷೇತ್ರ ಬಿಟ್ಟಿಲ್ಲ.ಎಂದಿಗೂ ಕೂಡ ಜನರಪರವಾದ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದೇನೆ.ಪಕ್ಷದ ವರಿಷ್ಠರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ತಾವು ಬದ್ಧವಿರುವುದಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ