ತುಮಕೂರು: 63 ಪಾಸಿಟೀವ್ ಪ್ರಕರಣ: ಒಬ್ಬರು ಸಾವು

ತುಮಕೂರು

    ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ನಿತ್ಯ ವರದಿಯಾಗುತ್ತಲೇ ಇವೆ. ಬುಧವಾರ ಜಿಲ್ಲೆಯ 63 ಜನರಲ್ಲಿ ಪಾಸಿಟೀವ್ ಖಚಿತವಾಗಿದೆ. ಇದರೊಂದಿಗೆ ಈವರೆಗೆ ಸೋಂಕಿತರ ಸಂಖ್ಯೆ 1536ಕ್ಕೆ ಏರಿದೆ. ಜೊತೆಗೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ ಪುರುಷರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

    ಹುಳಿಯಾರಿನ 36 ವರ್ಷದ ವ್ಯಕ್ತಿ ಜ್ವರ, ಉಸಿರಾಟದ ತೊಂದರೆಯಿಂದ ಹುಳಿಯಾರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲು ದ್ರವವನ್ನು ಪರೀಕ್ಷಗೆ ಒಳಪಡಿಸಲಾಗಿದ್ದು, ಪಾಸಿಟೀವ್ ವರದಿ ಬಂದಿತ್ತು. ಇವರನ್ನು ಇದೇ 28ರಂದು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 48ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

     ಬುಧವಾರ ವರದಿಯಾದ 63 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 32 ಜನರಲ್ಲಿ ಕೊರೊನ ಸೋಂಕು ಖಚಿತವಾಗಿದೆ .ಚಿಕ್ಕನಾಯಕನಹಳ್ಳಿ ತಲ್ಲೂಕಿನಲ್ಲಿ 8, ಕುಣಿಗಲ್ ತಾಲ್ಲೂಕಿನಲ್ಲಿ 7, ಮಧುಗಿರಿ ತಾಲ್ಲೂಕಿನಲ್ಲಿ 5, ಶಿರಾ ತಾಲ್ಲೂಕಿನಲ್ಲಿ 4, ತುರುವೇಕೆರೆ ತಾಲ್ಲೂಕಿನಲ್ಲಿ 4, ಪಾವಗಡ ತಾಲ್ಲೂಕಿನಲ್ಲಿ 2, ತಿಪಟೂರು ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿದೆ. ಇವರಲ್ಲಿ 40 ಪುರುಷರು, 23 ಮಹಿಳೆಯರು ಸೇರಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿ, ನಾಲ್ವರು ಮಕ್ಕಳು, 60 ವರ್ಷ ವಯಸ್ಸಿನ ಮೇಲ್ಪಟ್ಟ 4 ಜನ ಇದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 1536 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 667, ಕುಣಿಗಲ್ ತಾ. 145, ಪಾವಗಡ ತಾ. 125, ಮಧುಗಿರಿ ತಾ. 119, ಶಿರಾ 98, ಚಿಕ್ಕನಾಯಕನಹಳ್ಳಿ ತಾ. 81, ಗುಬ್ಬಿ ತಾ. 79, ಕೊರಟಗೆರೆ ತಾ. 75, ತುರುವೇಕೆರೆ ತಾ. 74, ತಿಪಟೂರು ತಾ. 73 ಪ್ರಕರಣ ವರದಿಯಾಗಿವೆ.ಬುಧವಾರ ಗುಣಮುಖರಾಗಿ ಆಸ್ಪತ್ರೆಯಿಂದ 44 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 725 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 763 ಸಕ್ರಿಯ ಪ್ರಕರಣಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap