ಸರಕಾರದ ಪ್ರತಿಷ್ಠಿತ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿ: ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್

ಬಳ್ಳಾರಿ

           ಮಹಾತ್ಮಾ ಗಾಂಧಿ 150ನೇ ಜನ್ಮವರ್ಷಾಚರಣೆ ನಿಮಿತ್ತ ಗಾಂಧಿ 150ರ ರಂಗಪಯಣ “ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ ರಂಗರೂಪಕ ಪ್ರದರ್ಶನ ಬಳ್ಳಾರಿ ಜಿಲ್ಲೆಯಲ್ಲಿ ಡಿ.27ರಿಂದ ಆರಂಭವಾಗಲಿದ್ದು, ಜಿಲ್ಲೆಯ 7 ತಾಲೂಕುಗಳಲ್ಲಿ 28 ಪ್ರದರ್ಶನಗಳು ನಡೆಯಲಿದೆ. ಇದು ಸರಕಾರದ ಪ್ರತಿಷ್ಠಿತ ಕಾರ್ಯಕ್ರಮವಾಗಿರುವ ಹಿನ್ನೆಲೆ ಯಾವುದೇ ರೀತಿಯ ಲೋಪವಾಗದಂತೆ ಸಂಬಂಧಿಸಿದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.ತಪ್ಪಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಮುಕ್ಕಣ್ಣ ಕರಿಗಾರ್ ಹೇಳಿದರು.

           ನಗರದ ಜಿಪಂನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ ರಂಗರೂಪಕ ಪ್ರದರ್ಶನಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರತಿ ತಾಲೂಕಿಗೆ 4 ಪ್ರದರ್ಶನಗಳಂತೆ 28 ಪ್ರದರ್ಶನಗಳನ್ನು ಮಾಡಲಾಗುತ್ತಿದೆ. ಪ್ರತಿ ತಾಲೂಕಿನಲ್ಲಿ ಒಂದು ಸಾರ್ವಜನಿಕ ಬಹಿರಂಗ ಸ್ಥಳದಲ್ಲಿ ಪ್ರದರ್ಶನವನ್ನು ದೊಡ್ಡಪ್ರಮಾಣದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

         ಹಡಗಲಿ ತಾಲೂಕಿನಲ್ಲಿ ಡಿ.27 ಮತ್ತು 28ರಂದು ರಂಗಭಾರತಿ ಸ್ಥಳದಲ್ಲಿ ಎರಡು ಪ್ರದರ್ಶನ, ಗಾಂಧಿ ಅಧ್ಯಯನ ಕೇಂದ್ರ, ಮೋರಾರ್ಜಿ ವಸತಿ ಶಾಲೆಗಳಲ್ಲಿ ಪ್ರದರ್ಶನ ನಡೆಯಲಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಸಮುದಾಯ ರಂಗಮಂದಿರ, ರಾಷ್ಟ್ರೋತ್ಥಾನ್ ಸ್ಕೂಲ್ ಮತ್ತು ಕಾಲೇಜು, ಕೋಗಳಿ ಬಯಲು ರಂಗಮಂದಿರದಲ್ಲಿ ಡಿ.29ರಿಂದ 30ರವರೆಗೆ, ಕೂಡ್ಲಿಗಿ ತಾಲೂಕಿನಲ್ಲಿ ಖಾನಾಹೊಸಳ್ಳಿ ಪದವಿ ಪೂರ್ವ ಕಾಲೇಜು, ಖಾನಾಮೊಡಗು ಬಿಇಡಿ ಮತ್ತು ಸ್ಕೂಲ್, ತಿಮ್ಮಲಾಪುರ ಮೊರಾರ್ಜಿ ವಸತಿ ಶಾಲೆ,

             ಕೂಡ್ಲಿಗಿ ಆಂಜಿನೇಯ ರಂಗಮಂದಿರದಲ್ಲಿ ಡಿ.31 ಮತ್ತು ಜ.1ರಂದು ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು.
ಸಂಡೂರು ತಾಲೂಕಿನಲ್ಲಿ ಸಂಡೂರು ಪಿಯು ಕಾಲೇಜು, ಬಂಡ್ರಿ ವಸತಿ ಶಾಲೆ, ಚೋರನೂರು ಮತ್ತು ಸುಶೀಲಾ ನಗರದಲ್ಲಿ ಜ.2 ಮತ್ತು 3ರಂದು ರಂಗಪ್ರದರ್ಶನ ನಡೆಯಲಿದೆ. ಹೊಸಪೇಟೆ ತಾಲೂಕಿನಲ್ಲಿ ಜ.5ರಿಂದ 6ರವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು, ದುರ್ಗದಾಸ ರಂಗಮಂದಿರ, ವಿನಾಯಕ ಸ್ಕೂಲ್ ಮತ್ತು ಕಾಲೇಜು, ಶರೀಫ್ ರಂಗಮಂದಿರದಲ್ಲಿ ಪ್ರದರ್ಶನ, ಬಳ್ಳಾರಿ ತಾಲೂಕಿನಲ್ಲಿ ಜ.8ರಿಂದ 9ರವರೆಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಸಾಂಸ್ಕøತಿಕ ಬಯಲು ರಂಗಮಂದಿರ, ಕುರುಗೋಡು ಸರಕಾರಿ ಪದವಿಪೂರ್ವ ಕಾಲೇಜು,ಯರ್ರಂಗಲಿ ವಸತಿ ಶಾಲೆ, ಸಿರಗುಪ್ಪ ತಾಲೂಕಿನಲ್ಲಿ ಜ.11ರಿಂದ 12ರವರೆಗೆ ಕೆಂಚನಗುಡ್ಡ ವಸತಿ ಶಾಲೆ, ಸಿರಿಗೇರಿ, ಸಿರಗುಪ್ಪ ಪದವಿ ಪೂರ್ವ ಕಾಲೇಜು, ಸರಕಾರಿ ಪ್ರೌಢಶಾಲೆಗಳಲ್ಲಿ ಈ ಪ್ರದರ್ಶನ ನಡೆಯಲಿದೆ ಎಂದು ಅವರು ವಿವರಿಸಿದರು.

            ಸಮಾಜಕಲ್ಯಾಣ, ಬಿಸಿಎಂ,ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ,ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ,ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.

              ನಾಟಕ ಪ್ರದರ್ಶನ ನೀಡಲು ಆಗಮಿಸುವ ಕಲಾವಿದರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಅವರು, ಸಾರ್ವಜನಿಕ ಸ್ಥಳಗಳಲ್ಲಿ ನಾಟಕ ಪ್ರದರ್ಶನ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಅಗತ್ಯ ಸಹಕಾರ ಪಡೆದುಕೊಳ್ಳಿ,ಇದಕ್ಕೆ ಸಂಬಂಧಿಸಿದಂತೆ ಅವರಿಗೆ ಸೂಚಿಸಲಾಗುವುದು ಎಂದರು.

               ಮಹಾತ್ಮ ಗಾಂಧಿಯೆಂದರೆ ಅವರು ಅತಿಮಾನರೇನಲ್ಲ.ಎಲ್ಲರಂತೆಯೆ ಹುಟ್ಟಿ,ಎಲ್ಲರಂತೆಯೇ ಬೆಳೆದ ಸಾಮಾನ್ಯರೇ ಆಗಿದ್ದವರು, ಕಷ್ಟದಲ್ಲಿರುವವರ ಬಗ್ಗೆ ಸದಾ ಮರುಗುವ,ಸುಳ್ಳು ಮತ್ತು ಅನ್ಯಾಯದ ವಿರುದ್ಧ ಎದೆಗುಂದದೆ ಹೋರಾಡುವ,ಅವರ ಗುಣಗಳಿಂದಾಗಿ ನಮ್ಮ ನಡುವೆಯೇ ಮಹಾತ್ಮರಾಗಿ ರೂಪುಗೊಂಡವರು. ಪಾಪು ಬಾಪುವಾಗಿ ಬೆಳೆದ ಕಥನವನ್ನು ಈ ರಂಗಮುಖೇನ ಪ್ರದರ್ಶಿಸಲಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿ ಪ್ರೇಕ್ಷಕರನ್ನೇ ಉದ್ದೇಶವಾಗಿಟ್ಟುಕೊಂಡು ಸರಳವಾಗಿ ಈ ರಂಗರೂಪವನ್ನು ಕಟ್ಟಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕರು ವೀಕ್ಷಿಸಬೇಕು ಎಂದು ಅವರು ಮನವಿ ಮಾಡಿದರು.

                 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಹಾಗೂ ಪಾಪು ಗಾಂಧಿ-ಗಾಂಧಿ ಬಾಪು ಕಾರ್ಯಕ್ರಮದ ಜಿಲ್ಲಾ ಸಂಘಟಕ ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಕಾರ್ಯಕ್ರಮದ ಉದ್ದೇಶಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಶ್ರೀಧರನ್, ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ರಾಜಪ್ಪ,ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಅಮಿತ್ ಬಿದರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶುಭಾ, ಗಾಂಧಿ ಭವನದ ಕಾರ್ಯದರ್ಶಿ ಟಿ.ಜಿ.ವಿಠ್ಠಲ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಬಿಸಿಎಂ,ಪದವಿ ಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link