ಭಾರತ ದೇಶದಂತ ಜಾತ್ಯಾತೀತ ಆಶಯಕ್ಕೆ ಅಪಚಾರವೆಸಗಿದ ದಿನ:-ಜಗನ್ನಾಥ್

ಹಗರಿಬೊಮ್ಮನಹಳ್ಳಿ:

      ಜಾತ್ಯಾತೀತ ರಾಷ್ಟ್ರವಾದ ಭಾರತದೇಶದಲ್ಲಿ ಸಂವಿಧಾನದ ಆಧಾರವಾದ ಜಾತ್ಯಾತೀಯತೆಗೆ ಅಪಚಾರವೆಸಗಿದ ದಿನವನ್ನಾಗಿ ಡಿ.06ರಂದು ಆಚರಿಸಲಾಗುತ್ತಿದೆ ಎಂದು ಸಿ.ಪಿ.ಎಂ.ನ ತಾಲೂಕು ಕಾರ್ಯದರ್ಶಿಯಾದ ಎಸ್.ಜಗನ್ನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

       ಅವರು ಪಟ್ಟಣದ ಬಸವೇಶ್ವರ ಬಜಾರದಲ್ಲಿ ಸಿ.ಪಿ.ಎಂ. ಪದಾಧಿಕಾರಿಗಳು ಗುರುವಾರ ಹಮ್ಮಿಕೊಂಡಿದ್ದ ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿ 26ವರ್ಷಗಳು ಕಳೆದ ದಿನವಾಗಿದ್ದು ಘಟನೆಯನ್ನು ವಿರೋಧಿಸಿ, ಕಾರಣ ಕರ್ತರಾದ ಸಂಘಪರಿವಾರದ ಶಕ್ತಿಗಳ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

          ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ನೀತಿಗಳಿಂದ ನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದ ಸಮಯದಲ್ಲಿ, ಕಾರ್ಮಿಕರನ್ನು, ದಲಿತರನ್ನು ಮತ್ತು ಮಹಿಳೆಯರ ಗಮನ ಬೇರೆಡೆ ಸೆಳೆಯಲು ಧಾರ್ಮಿಕ ಭಾವನೆಗಳನ್ನು ದುರುಪಯೋಗ ಮಾಡಿಕೊಂಡು ಅಯ್ಯುದ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿದ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ತೊಡಗಿಕೊಳ್ಳಲಾಗುವುದೆಂದು ಹೇಳಿಕೆ ನೀಡುತ್ತಿದ್ದಾರೆ.

          ಅಲ್ಲದೆ ಈಗ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿ ಮಾಡಲಿಕ್ಕೆ ಎಂದು ಹೇಳಿಕೆ ನೀಡುವ ಮೂಲಕ ಸಾಮಾನ್ಯ ಮನುಷ್ಯರ ಮನಸ್ಸುಗಳನ್ನು ಕದಡುತಿದ್ದಾರೆ ಎಂದು ಆರೋಪಿಸಿದರು.ಪಕ್ಷದ ರಾಜ್ಯ ಸಮಿತಿ ಸದಸ್ಯೆ ಬಿ.ಮಾಳಮ್ಮ ಮಾತನಾಡಿ, ಕೇಂದ್ರ ಸರ್ಕಾರದ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಅತ್ಯಾಚಾರ, ದಾಳಿ, ಕೊಲೆ ಸುಲಿಗೆಯಂತ ಕರ್ಮಕಾಂಡಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ ಎಂದು ದೂರಿದರು.

         ಜಿಲ್ಲಾ ಸಮಿತಿ ಸದಸ್ಯ ಕೊಟಗಿ ಮಲ್ಲಿಕಾರ್ಜುನ ಮಾತನಾಡಿದರು. ದೇವದಾಸಿ ಮಹಿಳೆಯರ ಸಂಘ, ಪ್ರಾಂತರೈತ ಸಂಘ, ಡಿವೈಎಫ್‍ಐ, ಎಸ್.ಎಫ್‍ಐ, ಜೆಎಂಎಸ್ ಹಾಗೂ ದಲಿತ ಹಕ್ಕುಗಳ ಸಮಿತಿ ಸಂಘಟನೆಗಳು ಪಾಲ್ಗೊಂಡು ಪ್ರತಿಭಟನೆಗೆ ಬೆಂಬಲಸೂಚಿಸಿದವು.

       ಮುಖಂಡರಾದ ಪಿ.ಚಾಂದ್‍ಬೀ, ಅಂಜಿನಮ್ಮ, ಹನುಮಂತ, ಮೈಲವ್ವ, ಹುಲಿಗೆಮ್ಮ, ಜಿ.ಸರೋಜ, ಆನಂದ, ಕೆ.ಗಾಳೆಪ್ಪ ಮುಂತಾದವರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link