ಸಮಾಜಕ್ಕೆ ಉತ್ತಮ ಸಂದೇಶ ನೀಡಿದವರು ಮಹರ್ಷಿ ವಾಲ್ಮೀಕಿ

ಚಿಕ್ಕನಾಯಕನಹಳ್ಳಿ

       ಮಹರ್ಷಿ ವಾಲ್ಮೀಕಿಯವರು ಲೇಖನಿ ಹಿಡಿದು ರಾಮಾಯಣ ರಚಿಸಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದರು. ಅದೇ ರೀತಿ ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸ್ವತಂತ್ರಕ್ಕಾಗಿ ಖಡ್ಗ ಹಿಡಿದು ಹೋರಾಟ ಮಾಡಿದರು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

       ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹನೀಯರ ಜಯಂತಿಗಳನ್ನು ಸರ್ಕಾರ ಮಾಡುತ್ತಿದೆ. ವಾಲ್ಮೀಕಿ ಮಹರ್ಷಿಗಳು ದರೋಡೆಕೋರರಾಗಿರಲಿಲ್ಲ ಅವರು ಶಿಕ್ಷಣ ತಜ್ಞರಾಗಿ ಇಡೀ ಮನುಕುಲಕ್ಕೆ ಶಿಸ್ತು, ನಿಯಮ, ಸಂಯಮ ನೈತಿಕತೆಯ ಬಗ್ಗೆ ತಿಳಿಸಿದರು ಎಂದ ಅವರು, ಮಹರ್ಷಿ ವಾಲ್ಮೀಕಿಯವರು ರಾಮರಾಜ್ಯ ಹಾಗೂ ಕಲ್ಯಾಣರಾಜ್ಯದ ಕನಸು ಕಂಡಿದ್ದರು.

       ಪಟ್ಟಣದಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು 10 ಲಕ್ಷರೂ ಮಂಜೂರು ಮಾಡಿದ್ದಾಗ ಹೇಳಿದ ಅವರು, ಅವಧಿಗೆ ಮುನ್ನ ಚುನಾವಣೆ ಬಂದಿದ್ದರಿಂದ ವಾಲ್ಮೀಕಿ ಭವನ ನಿರ್ಮಿಸಲು ಆಗಲಿಲ್ಲ. ಬುಕ್ಕಾಪಟ್ಟಣದಲ್ಲಿ 3 ವಾಲ್ಮೀಕಿ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. ನಾನು ಶಾಸಕನಾದ ಸಂದರ್ಭದಲ್ಲಿ ಎಸ್.ಟಿ ಆಶ್ರಮ ಶಾಲೆಯನ್ನು ಗೋಡೆಕೆರೆ ಗೇಟ್ ಬಳಿ ನಿರ್ಮಿಸಿದ್ದು ನಾಯಕ ಜನಾಂಗ ತಮ್ಮ ಮಕ್ಕಳನ್ನು ಎಸ್.ಟಿ. ಆಶ್ರಮ ಶಾಲೆಗೆ ಸೇರಿಸುವಂತೆ ಸಲಹೆ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಆದರ್ಶವನ್ನು ಮೈಗೂಡಿಸಿಕೊಳ್ಳುವಂತೆ ಹೇಳಿದರು.

      ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ದರೋಡೆ ಕೋರರಾಗಿರಲಿಲ್ಲ ಇದು ಕೇವಲ ದಂತೆಕತೆಯಷ್ಟೆ. ಮಹರ್ಷಿ ವಾಲ್ಮೀಕಿಯವರು 24 ಸಾವಿರ ಶ್ಲೋಕಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಅವರು ರಚಿಸಿದ ರಾಮಾಯಣ ಕಾವ್ಯ ಇಂದಿಗೂ ಸಮಾಜದಲ್ಲಿ ಹಾಸು ಹೊಕ್ಕಾಗಿದೆ. ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲು 1.5 ಕೋಟಿ ರೂಪಾಯಿ ಸರ್ಕಾರದಿಂದ ಬಿಡುಗಡೆ ಮಾಡಲು ಒತ್ತಡ ತರುವಂತೆ ಮನವಿ ಮಾಡಿದರು.

      ತಾಲ್ಲೂಕು ಕಚೇರಿಯಿಂದ ಹೊರಟ ವಾಲ್ಮೀಕಿ ಮೆರವಣಿಗೆ ಪಟ್ಟಣದ ಬಿ.ಹೆಚ್.ರಸ್ತೆ ನೆಹರು ವೃತ್ತದ ಮೂಲಕ ಹೊಸ ಬಸ್ ನಿಲ್ದಾಣ ನಂತರ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

       ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸೋಮಪ್ಪ ಕಡಕೋಳ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ತಾ.ಪಂ.ಸದಸ್ಯ ಕೇಶವಮೂರ್ತಿ, ಸಿ.ಡಿ.ಪಿ.ಓ ತಿಪ್ಪಯ್ಯ, ಬೇವಿನಹಳ್ಳಿ ಚೆನ್ನಬಸವಯ್ಯ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap