ಸುಳ್ಳು ಭರವಸೆಗಳನ್ನು ನೀಡಿ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದಾರೆ: ರುದ್ರಪ್ಪ ಲಮಾಣಿ

ಸವಣೂರ :

       ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಬಿಜೆಪಿ ಪಕ್ಷ.ಸುಳ್ಳು ಭರವಸೆಗಳನ್ನು ನೀಡಿ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಸುಳ್ಳೇ ಅವರ ಮನೆ ದೇವರು ಎಂದು ಮಾಜಿ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

         ತಾಲೂಕಿನ ಯಲವಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲಿ ಅವರು ಮಾತನಾಡಿ, ಚುನವಾನಣಾ ಪೂರ್ವದಲ್ಲಿ ಮೋದಿಯವರು ವಿದೇಶಗಳಲ್ಲಿ ಬಚ್ಚಿಟ್ಟಿರುವ ಎಲ್ಲಕಪ್ಪು ಹಣವನ್ನೂ ನಾವು ವಾಪಸ್ ತರುತ್ತೇವೆ. ಎಲ್ಲ ಭ್ರಷ್ಟರನ್ನೂ ಹಿಡಿದು ಜೈಲಿಗೆ ಅಟ್ಟುತ್ತೇವೆ. ಭಾರತದ ಪ್ರತಿ ನಾಗರಿಕರ ಬ್ಯಾಂಕ್‍ಖಾತೆಗೆ 15ಲಕ್ಷ ರೂಪಾಯಿಗಳನ್ನು ಹಾಕುತ್ತೇವೆ ಎಂದು ಸುಳ್ಳು ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಮೇಲೆ ಯಾರೋಬ್ಬರಿಗೂ ಹದಿನೈದು ಪೈಸೆನು ಹಾಕಲೀಲ್ಲ. ಅಂತಹ ಸುಳ್ಳು ಭರವಸೆ ನೀಡುವವರನ್ನು ನಂಬದೆಜನಪರ, ಅಲಪಸಂಖ್ಯಾತರ, ರೈತಪರ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತವನ್ನು ನೀಡಿ ಹಾವೇರಿ ಲೋಕಸಭಾ ಅಭ್ಯರ್ಥಿ ಡಿ.ಆರ್.ಪಾಟೀಲರನ್ನು ಅಧಿಕಾರಕ್ಕೆ ತರೋಣವೆಂದು ಹೇಳಿದರು.

         ಜೆಡಿಎಸ್ ಕಾರ್ಯಾಧ್ಯಕ್ಷ ಉಮೇಶ ತಳವಾರ ಮಾತನಾಡಿ, ಹಿಂದೂತ್ವದ ಹೆಸರಲ್ಲಿ ರಾಜಕಾರಣ ಮಾಡುವರು ಬಿಜೆಪಿಯವರು, ಸಮಾಜವನ್ನುಒಡೆದು ಆಳುವಂತಹ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾರೆ. ಅಂತಹ ಕೋಮುವಾದಿಗಳಿಗೆ ಮತ ನೀಡದೆ. ನಮ್ಮ ಮೈತ್ರಿಕೂಟದ ಅಭ್ಯರ್ಥಿ ಡಿ.ಆರ್.ಪಾಟೀಲರು ಸುಂಸ್ಕ್ರತರು, ಪ್ರಾಮಾಣಿಕರು, ಗಾಂಧಿವಾದಿಗಳು, ಇಂತವರಿಗೆ ನಿಮ್ಮ ಮತವನ್ನು ನೀಡಿ ನಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಬೆಂಬಲಸಿ.ಎಂದರು

           ಈ ಸಂದರ್ಭದಲ್ಲಿ ಹಾವೇರಿ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್-ಜಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಿ.ಆರ್.ಪಾಟೀಲ, ಪಂಚಾಯತ ರಾಜ್ಯ ಸದಸ್ಯರ ಕೂಟದ ಅಧ್ಯಕ್ಷ ಸತೀಶ, ಎಂ.ಎಂ.ಹಿರೇಮಠ, ಪ್ರೋ ಜಿ.ಬಿ.ಶಿವರಾಜ, ಗಾಂಧಿಭವನದ ಉಪಾಧ್ಯಕ್ಷ ಶಿವರಾಜ, ಕೊಟ್ರೇಶಪ್ಪ ಬಸವಣ್ಣಿ, ಶಿವರಾಜ ಅಲ್ಲಾಪುರ, ರಮೇಶ ಕಡಕೋಳ, ಶ್ರೀಧರ ದೊಡ್ಡಮನಿ, ಶಂಕ್ರಣ್ಣ ಮಕರಬ್ಬಿ, ನಾಗರಾಜ ಡೊಳ್ಳಿನ, ಮಲ್ಲಪ್ಪರಾಟಿ, ಮಂಜುನಾಥ ಸರಸೋರಿ, ಹನುಮಂತಗೌಡ ಹೊಸಮನಿ, ನಾಗಪ್ಪ ಲಮಾಣಿ, ಜಿಪಂ. ಸದಸ್ಯೆ ನೀಲವ್ವ ಚವ್ಹಾಣ, ರಾಜೇಶ್ವರಿ ಪಾಟೀಲ, ಬಸವರಾಜ ಮಾಳಗಿ, ರಜಾಕ್ಸಾಬ ಮುಲ್ಲಾ, ಜಯಣ್ಣಕೋಟಮಠ, ಮಂಜುನಾಥ ಮುಗದೂರ, ಹಾಗೂ ಕಾಂಗ್ರೆಸ್-ಜೆಡಿಸ್ ಮೈತ್ರಿಕೂಟದ ಕಾರ್ಯಕರ್ತರು,ಪಕ್ಷದ ಅಭಿಮಾನಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link