ಪಾಂಡವಪುರ ಬಸ್ ದುರಂತ : ಬಚಾವಾದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಮಂಡ್ಯ

           ಪಾಂಡವಪುರ ಬಳಿಯ ವಿ.ಸಿ.ನಾಲೆಗೆ ಖಾಸಗಿ ಬಸ್ ಉರುಳಿ ಬಿದ್ದು ವಿದ್ಯಾರ್ಥಿಗಳು ಸೇರಿದಂತೆ 30 ಪ್ರಯಾಣಿಕರು ಸಾವನ್ನಪ್ಪಿರುವ ನತದೃಷ್ಟ ಬಸ್ಸಿನಲ್ಲಿ ಇನ್ನೂ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸಬೇಕಾಗಿತ್ತು ಬಸ್ ಅವಧಿಗಿಂತ ಮುಂಚೆ ಬಂದಿದ್ದರಿಂದ ಅವರೆಲ್ಲಾ ಬದುಕುಳಿರುವುದು ವಿಧಿಯ ವಿಪರ್ಯಾಸ.!

         ದುರಂತ ಸಂಭವಿಸಿದ ಶನಿವಾರ ಬೆಳಿಗ್ಗೆ ಬಸ್ಸಿನ ಚಾಲಕ 20 ನಿಮಿಷಗಳ ಮುಂಚಿವಾಗಿ ಹೊರಟಿದ್ದರಿಂದ ಬಸ್ ಕೈ ತಪ್ಪಿ 30 ವಿದ್ಯಾರ್ಥಿಗಳು ಸಂಭವಿಸಬಹುದಾಗಿದ್ದ ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಈ ಬಸ್ಸಿನಲ್ಲಿ ವಿದ್ಯಾರ್ಥಿಗಳೇನಾದರೂ ಪ್ರಯಾಣಿಸಿದ್ದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು.

        ದುರಂತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ವದೇ ಸಮುದ್ರ, ಕನಗನಮರಡಿ, ದೊಡ್ಡಕೊಪ್ಪಲು ಮತ್ತು ಹುಲಿಕೆರೆಗಳಲ್ಲಿ ಸಾಲಾಗಿ ಮೃತದೇಹಗಳನ್ನು ಜೋಡಿಸಿ ಅಂತ್ಯಕ್ರಿಯೆ ನೇರವೇರಿಸಲಾಗಿದೆ ಬಸ್ ಎನಾದರೂ ಸಮಯಕ್ಕೆ ಸರಿಯಾಗಿ ಬಂದಿದ್ದರೆ ಸಾವಿನ ಸಂಖ್ಯೆ 75ಕ್ಕೂ ಹೆಚ್ಚಾಗುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ.

       ಪ್ರತಿ ಶನಿವಾರ ಮಧ್ಯಾನ್ಹ 12 ಗಂಟೆಗೆ ಕನಗನಮರಡಿಗೆ ಆಗಮಿಸುತ್ತಿತ್ತು. ತರಗತಿಗಳು ಮುಗಿದ ನಂತರ ಕನಿಷ್ಠ 30 ಮಂದಿ ವಿದ್ಯಾರ್ಥಿಗಳು ಕನಗನಮರಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಈ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು.ಆದರೆ ಶನಿವಾರ 15-20 ನಿಮಿಷ ಮುಂಚಿತವಾಗಿ ಆಗಮಿಸಿದ್ದರಿಂದ 30 ವಿದ್ಯಾರ್ಥಿಗಳಿಗೆ ಬಸ್ ಮಿಸ್ ಆಗಿದೆ ಎಂದು ಸ್ಥಳೀಯ ನಿವಾಸಿ ಚೌಡಯ್ಯ ಹೇಳುತ್ತಾರೆ.

       ಕೇವಲ ಮೂವರು ವಿದ್ಯಾರ್ಥಿಗಳಿಗೆ ಮಾತ್ರ ಈ ಬಸ್ ಸಿಕ್ಕಿದೆ. ಆಗ ಚಾಲಕ ಮುಂಚಿತವಾಗಿಯೇ ಪಾಂಡವಪುರದತ್ತ ಪ್ರಯಾಣ ಬೆಳೆಸಿದ್ದಾನೆ. ಕೆಲವು ಗ್ರಾಮಸ್ಥರಿಗೆ ಈ ಬಸ್ ಕೈ ತಪ್ಪಿದ್ದರಿಂದ ಬಸ್‍ನಲ್ಲಿ ಬಹುತೇಕ ಆಸನಗಳು ಖಾಲಿಯಿದ್ದವು. ಕನಗನ ಮರಡಿ ಬಸ್ ನಿಲ್ದಾಣದಿಂದ ವಿ.ಸಿ.ನಾಲೆ ಕೇವಲ 300 ರಿಂದ 400 ಮೀಟರ್ ಇದ್ದರೂ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಗೆ ತರತಗತಿಗಳು ನಡೆಯುತ್ತಿದ್ದರಿಂದ ಈ ಬಸ್ ಕೈತಪ್ಪಿದೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಸ್ ಆಗಮಿಸುತ್ತಿದ್ದರೆ ಭಾರೀ ದುರಂತ ಸಂಭಿಸುವ ಸಾಧ್ಯತೆ ಇತ್ತು. ಆದರೆ ಕೂದಲೆಳೆ ಅಂತರದಲ್ಲಿ ತಪ್ಪಿದ್ದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

         ಕನಗನಮರಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ಮಾತನಾಡಿ, ಪಾಂಡವಪುರ ಸರ್ಕಾರಿ ಕಾಲೇಜು, ವಿಜಯ ಕಾಲೇಜು ಹಾಗೂ ಪಾಂಡವಪುರ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು, ಚಿಕ್ಕ ಬೈಠರಹಳ್ಳಿ ಮತ್ತು ಕನಗನಮರಡಿ ಜನರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ತತಿ ಶನಿವಾರ ಈ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಶನಿವಾರ ಬಸ್‍ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು ಎಂದು ಉದ್ಗರಿಸಿದರು.

         ಅಂದಹಾಗೆ ರವಿಯವರು ಬೈಕ್‍ನಲ್ಲಿ ಬಸ್ಸಿನ ಹಿಂದೆಯೇ ಬರುತ್ತಿದ್ದರು. ಕನಗನಮರಡಿ ಬಸ್ ನಿಲ್ದಾಣಕ್ಕೆ 2 ಕಿ.ಮೀ ಇರುವಾಗಲೇ ಬಸ್ ನಾಲೆಗೆ ಬೀಳುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ.ನಾಲೆಗೆ ನೀರು ಬಿಡುವುದನ್ನು ನಿಲ್ಲಿಸಿದ್ದರಿಂದ ಶೋಧನಾ ಕಾರ್ಯಾಚರಣೆಗೆ ನೆರವಾಗಿದೆ. ನೀರನಲ್ಲಿ ಮುಳುಗಿ ಸಾವನ್ನಪ್ಪಿದ ಮೃತದೇಹಗಳನ್ನು ತ್ವರಿತವಾಗಿ ಹೊರತೆಗೆಯಲು ಸಾಧ್ಯವಾಯಿತು.

         ಮೂಲಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಚಾಲನೆಗೆ ಯೋಗ್ಯವಲ್ಲ ಎಂಬ ಅಂಶವನ್ನ ಅರಿತ ಬಸ್ಸಿನ ಮಾಲೀಕ 15 ವರ್ಷದ ಹಳೆಯ ಬಸ್‍ನ್ನು ಮಾರಾಟ ಮಾಡಿದ್ದಾನೆ. ಹಾಲಿ ಮಾಲೀಕ ಈ ಬಸ್ ಖರೀದಿಸುವ ಮುನ್ನ ಎಂಟು ಮಂದಿ ಕೈಗೆ ತಲುಪಿದ್ದ ಅಂಶವೂ ಬೆಳಕಿಗೆ ಬಂದಿದೆ.ಅದೇನೇ ಇರಲಿ ಬಸ್ ನಾಲೆಗೆ ಉರುಳಿ ಬಿದ್ದ ಪರಿಣಾಮ 30 ಜನರ ಪ್ರಾಣಪಕ್ಷಿ ಹಾರಿಹೋಗಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap