ಹುಳಿಯಾರು
ಹುಳಿಯರು ಕೋಡಿಪಾಳ್ಯದಲ್ಲಿ ತನ್ನ ವಿಭಿನ್ನ ಚಟುವಟಿಕೆಗಳಿಂದ ಹೆಸರಾಗಿರುವ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಜ.27 ರಿಂದ ಫೆ.1 ರವರೆಗೆ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.
ಒಟ್ಟು ಆರು ದಿನಗಳ ಕಾಲ ಕನ್ನಡ, ತಮಿಳು, ಮಲಯಾಳಂ, ಮರಾಠಿ, ತೆಲುಗು, ಕನ್ನಡ ಹೀಗೆ ವಿವಿಧ ಭಾಷೆಗಳ, ವಿವಿಧ ರಾಜ್ಯಗಳ, ಪ್ರಸಿದ್ಧ ತಂಡಗಳು ವಿವಿಧ ವಿಚಾರಗಳಿಗೆ ಒತ್ತು ನೀಡಿ ನಾಟಕ ಪ್ರದರ್ಶನ ನೀಡುತ್ತಿವೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರ್ ಇದರ ಕರ್ನಾಟಕದ ಪ್ರತಿನಿಧಿ ನಂಜುಂಡಸ್ವಾಮಿ ತೊಟ್ಟವಾಡಿ ಮಾತನಾಡಿ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಸಹಯೋಗದಲ್ಲಿ ಹುಳಿಯಾರಿನ ಧ್ಯಾನ ನಗರಿಯ ಸಾಂಸ್ಕೃತಿಕ ಸದನದಲ್ಲಿ ಜನವರಿ 27 ರಿಂದ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್ ನಡೆಯಲಿದೆ ಎಂದರು.
ಜ.27ರ ಭಾನುವಾರ ಸಂಜೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಸಂಸದ ಮುದ್ದಹನುಮೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಲಹರಿ ರೆಕಾರ್ಡಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಿ.ಮನೋಹರ ನಾಯ್ಡು,ತುಳಸಿ ರಾಮ್ (ಲಹರಿ ವೇಲು) ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಫೆಬ್ರವರಿ 1 ರ ಶುಕ್ರವಾರ ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೊನವಂಶಿ ಕೃಷ್ಣ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನೀಸ್ ಜಾಯ್ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕೋತ್ಸವಕ್ಕೆ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







