ಕುಡತಿನಿ
ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ದೂರಿದರು.
ಕುಡತಿನಿ ಪಟ್ಟಣದ ಶ್ರೀ ವೇಣು ಗೋಪಾಲ ಕೃಷ್ಣ ಕ್ರುಷ್ಣ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಭಾನುವಾರ ಸ್ಥಳೀಯ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕ ಸಂಘ ಹಮ್ಮಿಕೊಂಡಿದ್ದ ‘ಬಿಟಿಪಿಎಸ್ ಗುತ್ತಿಗೆ ಕಾರ್ಮಿಕ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದರು. ಕಳೆದ ದಶಕದಿಂದ ಗುತ್ತಿಗೆ ಅಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಬಿಟಿಪಿಎಸ್ ಮತ್ತು ಕೆಪಿಟಿಸಿಎಲ್ ಸಂಸ್ಥೆ ಯಾವುದೇ ಸುರಕ್ಷತಾ ಕ್ರಮಗಳು ಭದ್ರತೆ ಇಲ್ಲದೆ ಕಾರ್ಮಿಕರಿದ್ದಾರೆ. ಅದರೂ ಸರ್ಕಾರದ ಅಧಿಕಾರಿಗಳು, ಗುತ್ತಿಗೆ ನೌಕರರನ್ನು ಜೀತದಾಳುವಿನಂತೆ ಕಾಣುತ್ತಿದ್ದರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಉದ್ಯೋಗ ಭದ್ರತೆ, ಕನಿಷ್ಟ ವೇತನ, ಇಎಸ್‍ಐ, ಗ್ರಾಜುಟಿ, ಸಮಾನ ಕೆಲಸಕ್ಕೆ ಸಮಾನ ವೇತನ, ಜೀವವಿಮೆ ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕರ್ನಾಟಕ ವಿದ್ಯುತ್ ನೌಕರರ ಫೆಡರೇಷನ್ ಅಧ್ಯಕ್ಷ ಜೆ.ಸತ್ಯಬಾಬು ಮಾತನಾಡಿ, ಸುಪ್ರಿಂ ಕೋರ್ಟ್ ತೀರ್ಪಿನಂತೆ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠವೇತನ ಸೇರಿ ಮುಂತಾದ ಸೌಲಭ್ಯಗಳಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪಿದರು.ಸ್ಥಳೀಯ ಬಿಟಿಪಿಎಸ್ ಮತ್ತು ಕೆಪಿಟಿಸಿಎಲ್ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ ಯಲ್ಲಾಪುರ ಅಧ್ಯಕ್ಷತೆವಹಿಸಿ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಭದ್ರತೆಯನ್ನು ಒದಗಿಸಿಕೊಡುವಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಮುತುವರ್ಜಿವಹಿಸಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಕಾರ್ಮಿಕರಾದ ಕೆ.ಪೋಲಪ್ಪ, ಜಿ.ಎಸ್.ವೆಂಕಟ ರಮಣ ಬಾಬು, ಟಿ.ಕೆ.ಕಾಮೇಶ, ಜಂಗ್ಲಿಸಾಬ್, ವಾಸು, ತಿಮ್ಮಪ್ಪ, ಚಂದ್ರಕುಮಾರಿ, ಮಲ್ಲಮ್ಮ, ರುದ್ರಮ್ಮ, ಜಗದೀಶ್, ಪಾಂಡು, ರೇಣುಕರಾಜು, ಸೇರಿ ಸಾವಿರಾರು ಕಾರ್ಮಿಕರು ಇದ್ದರು.