ಚೈಲ್ಡಲೈನ್ ಸೇ ದೋಸ್ತಿ ವೀಕ್ ಕಾರ್ಯಕ್ರಮ

ಹಾನಗಲ್ಲ :

        ವಿಜ್ಞಾನದ ಅವಿಷ್ಕಾರಗಳು ಮನುಷ್ಯನ ಉನ್ನತಿಗೆ ಸಹಕಾರಿ ಮಾಡಿಕೊಳ್ಳಬೇಕೆ ಹೊರತು ಅವನತಿಗೆ ಆಹ್ವಾನ ನೀಡುವುದು ಬೇಡ ಎಂದು ಹಾನಗಲ್ಲ ಠಾಣೆಯ ಪಿಎಸ್‍ಐ ಗುರುರಾಜ ಮೈಲಾರ ಎಚ್ಚರಿಕೆ ನೀಡಿದರು.

         ಗುರುವಾರ ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೋಷನಿ ಸಮಾಜಸೇವಾ ಸಂಸ್ಥೆಯ ಸಹಯೋಗಿದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ ಚೈಲ್ಡಲೈನ್ ಸೇ ದೋಸ್ತಿ ವೀಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ನಮ್ಮ ಬಳಕೆಗೆ ಲಭ್ಯವಾದ ವಸ್ತು ಸಾಮಗ್ರಿಗಳು ದುರುಪಯೋಗದ ಮೂಲಕ ನಮ್ಮ ಬದುಕನ್ನೇ ಹಾಳು ಮಾಡುತ್ತಿವೆ. ಬದುಕನ್ನು ಉತ್ತಮಪಡಿಸಿಕೊಳ್ಳಲು ಬಳಸಬೇಕಾದವುಗಳು ಬದುಕನ್ನು ಕುತ್ತಿನತ್ತ ಒಯ್ಯುತ್ತಿವೆ.

           ವಿಶೇಷವಾಗಿ ಯುವ ಸಂಪನ್ಮೂಲ ಇದಕ್ಕೆ ಬಲಿಯಾಗುತ್ತಿದೆ ಎಂದ ಅವರು, ಆನ್‍ಲೈನ ಹಾಗೂ ಮೋಬೈಲ ಮೂಲಕ ಮೋಸ ಕಾರ್ಯಗಳು ನಡೆಯುತ್ತಿವೆ. ಹಣ ಮಾನ ಮರ್ಯಾದೆಯನ್ನು ದೋಚುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸದಿದ್ದರೆ ಅನಾಹುತಕ್ಕೆ ಗುರಿಯಾಗಬೇಕಾದೀತು ಎಂದು ಎಚ್ಚರಿಸಿದರು.

           ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಎಂ.ಪ್ರಸನ್ನಕುಮಾರ, ಆನ್‍ಲೈನ್ ವಿಶ್ವದ ಸ್ವಾಸ್ಥ್ಯಕ್ಕೆ ಬಳಕೆಯಾಗುವುದಕ್ಕಿಂತ ವಿಶ್ವರೋಗವಾಗಿ ಹರಡುತ್ತಿದೆ. ದೇಶ ಕಾಯಬೇಕಾದ ಯುವಕರು ದುಶ್ಚಟಗಳ ಮೂಲಕ ದೇಹ ತ್ಯಾಗ ಮಾಡುತ್ತಿದ್ದಾರೆ. ಮಾರಕ ವ್ಯಸನಗಳು ವಿಷಪ್ರಾಶನವಾಗುತ್ತಿವೆ. ಡ್ರಗ್ಸ ಮಾಫಿಯಾದಂತೆ ಆನ್‍ಲೈನ ಮಾಫಿಯಾ ಕೂಡ ಮಾರಕವಾಗುತ್ತಿದೆ. ಒಳ್ಳೆಯವರ ಸಹವಾಸ ಬೇಕು. ಇಲ್ಲದೆ ಹೋದರೆ ಜೀವವನ್ನೇ ಬಿಡಬೇಕಾದೀತು ಎಂದು ಎಚ್ಚರಿಸಿದರು.

            ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಡಿಂಪಲ್ ಡಿಸೋಜಾ ಮುಖ್ಯ ಅತಿಥಿಯಾಗಿ ಮಾತನಾಡಿ ಸಾಮಾಜಿಕ ಜಾಲ ತಾಣಗಳು ಬೆಂಕಿಯಾಗಿ ಉರಿದು ಯುವಕರ ಬದುಕನ್ನು ಹಾಳು ಮಾಡುತ್ತಿವೆ. ಸ್ಮಾರ್ಟಫೋನುಗಳು ಬದುಕನ್ನು ಸ್ಮಾರ್ಟ ಮಾಡುವ ಬದಲು ನಾಶ ಮಾಡುತ್ತಿವೆ. ಯುವಕರಲ್ಲಿ ಸಕಾರಾತ್ಮಕ ಚಿಂತನೆ ಹಾಳು ಮಾಡಿ ನಕಾರಾತ್ಮಕ ಆಲೋಚನೆಗಳ ಮೂಲಕ ಬದುಕಿನ ನಾಶಕ್ಕೆ ಪ್ರೇರೇಪಿಸುತ್ತಿದೆ ಎಂದರು.

            ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಅಧ್ಯಕ್ಷತೆವಹಿಸಿದ್ದರು. ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ಎಚ್.ಎಸ್.ಬಾರ್ಕಿ, ಉಪನ್ಯಾಸಕರಾದ ಎಸ್.ಎಸ್.ನಿಸ್ಸೀಮಗೌಡರ, ಸುಮಂಗಲಾ ನಾಯನೇಗಿಲ, ರೂಪಾ ಹಿರೇಮಠ, ಎಸ್.ಎಸ್.ಜವಳಿ, ಚಂದ್ರಶೇಖರ ಹಾವೇರಿ, ಎಸ್.ಕೆ.ತೀರ್ಥಂಕರ, ವೀಣಾ ದೇವರಗುಡಿ, ಆಯಿಷಾ, ಎನ್.ಎಸ್.ದೊಡ್ಡಮನಿ, ಮೂಕಾಂಬಿಕಾ ನಾಯಕ್, ಸಂಜನಾ ಕಲಾಲ, ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ಮಲಾ, ಸಿಸ್ಟರ್ ಜಾನೇಟ್ ಅತಿಥಿಗಳಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link