ಚಾಲಕನನ್ನು ಸುಲಿಗೆ ಮಾಡಿ ಭೀಕರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು

        ಚಾಲಕನ ಸುಲಿಗೆ ಮಾಡಿ ಭೀಕರವಾಗಿ ಕೊಲೆ ಮಾಡಿ ಲಾರಿ ಕೆಳಗೆ ಮೃದೇಹ ಹಾಕಿ ಪರಾರಿಯಾಗಿದ್ದ ಮೂವರು ಸುಲಿಗೆಕೋರರನ್ನು ಸಿನಿಮಿಯ ರೀತಿಯಲ್ಲಿ ದಕ್ಷಿಣ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಇಲಿಯಾಸ್ ನಗರದ ಸಯ್ಯದ್ ಸಲ್ಮಾನ್(21)ಯಲಚೇನಹಳ್ಳಿ ಕನಕನಗರದ ಸಯ್ಯದ್ ತೌಹೀದ್ ಅಲಿಯಾಸ್ ವರದ(28)ಇಲಿಯಾಸ್ ನಗರದ ಮೊಹಮ್ಮದ್ ಮುದಾಸೀರ್ ಅಲಿಯಾಸ್ ಮುದ್ದು(24) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 2 ಸ್ಕೂಟರ್‍ಗಳು 12,850 ರೂ ನಗದು ಮೊಬೈಲ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

       ಕಳೆದ ನ.3ರಂದು ರಾತ್ರಿ ತಲಘಟ್ಟಪುರದ 80 ಅಡಿ ರಸ್ತೆ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಚಾಲಕ ಕಂ ಮಾಲೀಕ ಚಂದಾಪುರದ ಭಾಸ್ಕರ್ (44) ಅವರನ್ನು ಹತ್ಯೆಗೈದು ಆರೋಪಿಗಳು ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು.

       ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗಳ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿಲಾಗಿತ್ತು ತಮ್ಮ ಸೂಚನೆಯಂತೆ ಪೊಲೀಸರೇ ಲಾರಿ ಚಾಲಕರ ವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. ಎಸಿಪಿ ಮಹದೇವ್ ನೇತೃತ್ವದಲ್ಲಿ ಇಬ್ಬರು ಇನ್ಸ್‍ಪೆಕ್ಟರ್ಗಳು, ಸಿಬ್ಬಂದಿ ಆರೋಪಿಗಳ ಪತ್ತೆಗೆ ಎರಡು ಲಾರಿಗಳನ್ನು ಪಡೆದು ರಾತ್ರಿ ವೇಳೆ ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಿದ್ದರು. ಆದರೆ, ಇವರನ್ನು ಲಾರಿ ಚಾಲಕರೆಂದೇ ತಿಳಿದ ಆರೋಪಿಗಳು ದರೋಡೆ ಮಾಡಲು ಮುಂದಾದಾಗ ಪೊಲೀಸರು ಬೀಸಿದ ಬಲೆಗೆ ಬಿದಿದ್ದಾರೆ.

       ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಲಾರಿ ಚಾಲಕ ಭಾಸ್ಕರ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಹಣಕ್ಕಾಗಿ ಲಾರಿ ಚಾಲಕನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.ಆರೋಪಿಗಳ ಬಂಧನದಿಂದ ತಲಘಟ್ಟಪುರದ 1 ಕೊಲೆ ಸುಬ್ರಮಣ್ಯಪುರದ 2 ಸುಲಿಗೆ ಸೇರಿ ಮೂರು ಪ್ರಕರಣಗಳು ಪತ್ತೆಯಾಗಿವೆ.ಸಬ್‍ಇನ್‍ಸ್ಪೆಕ್ಟರ್ ಸುಬ್ರಹ್ಮಣಿ, ಸಿಬ್ಬಂದಿಗಳಾದ ಮಹೇಶ್, ಪ್ರದೀಪ್ ಹಾಗೂ ಇತರೆ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link