ಭೂ ಶಾಸನ ಕಾಯ್ದೆಗೆ ತುರ್ತಾಗಿ ಚಾಲನೆ ಕೊಡಿ

ಚಿತ್ರದುರ್ಗ;

       ಹಾಡಿ, ತಾಂಡ, ಹಟ್ಟಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡುವ ಮಹತ್ವ ಕಾಂಕ್ಷೆಯ ಭೂ ಶಾಸನ ಕಾಯ್ದೆಯನ್ನು ತುರ್ತಾಗಿ ಸರ್ಕಾರ ಅನುಷ್ಟಾನಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಶಿವಮೂರ್ತಿ ನಾಯಕ್ ಆಗ್ರಹಿಸಿದ್ದಾರೆಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಭೂ ಶಾಸನ ಕಾಯಿದೆಯನ್ನು ಹೆಚ್ಚು ಪ್ರಚಾರಗೊಳಿಸಿ ಅಧಿಕಾರಿಗಳು ಶೀಘ್ರವಾಗಿ ಚಾಲನೆ ನೀಡಬೇಕು ಇಲ್ಲದೆ ಹೋದರೆ ಇದು ಕಾನೂನಿನ ಉಲ್ಲಂಘನೆಯಾಗುತ್ತದೆ. ಈ ಸಂಬಂಧ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹಾಕಲು ಬೆಳಗಾವಿ ಆಧಿವೇಶನದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು

       ಹಟ್ಟಿ ಹಾಗೂ ಕಂದಾಯರಹಿತ ಗ್ರಾಮಗಳಲ್ಲಿ ವಾಸವಾಗಿರುವ ಮಹಿಳೆಯರು ಕೆಲಸ ಹುಡುಕಿಕೊಂಡು ಹೊರ ಊರುಗಳಿಗೆ ಹೋಗುತ್ತಿದ್ದಾರೆ. ಸಾರಿಗೆ ಹಾಗೂ ಶಾಲಾ-ಕಾಲೇಜುಗಳು ಇಲ್ಲದಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗಣತಿ ಮಾಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಅರಣ್ಯ, ಕಂದಾಯ, ಅಬಕಾರಿ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯ ಸಮಿತಿ ಸಭೆ ಕರೆದು ಕಂದಾಯರಹಿತ ಗ್ರಾಮಗಳನ್ನು ತುರ್ತಾಗಿ ಕಂದಾಯ ಗ್ರಾಮಗಳೆಂದು ಘೋಷಿಸಬೇಕು. ಪ್ಲಾನಿಂಗ್ ಕಮೀಷನ್ ಆಫ್ ಇಂಡಿಯಾದಿಂದ ಅನುದಾನ ಸಿಗುತ್ತದೆ. ಅಭಿವೃದ್ದಿಪಡಿಸಬಹುದು ಎಂದು ಒತ್ತಾಯಿಸಿದರು.

         ಜಿಲ್ಲೆಯಲ್ಲಿ ಕಂದಾಯ ಗ್ರಾಮಳಿಗೆ ಒಳಪಡುವಂತಹ ಗ್ರಾಮಗಳು ಸಾಕಷ್ಟಿವೆ. ಅಂತವುಗಳಲ್ಲಿ ಸುಮಾರು 604 ಗ್ರಾಮಳನ್ನು ಗುರುತಸಿಲಾಗಿದೆ. ಇವುಗಳಲ್ಲಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸುವಂತೆ 193 ಗ್ರಾಮಗಳ ಪ್ರಸ್ತಾವನೆ ಹೋಗಿದೆ. ಉಳಿದವುಗಳು ಇನ್ನು ಹೋಗಬೇಕಾಗಿದೆ. ಇನ್ನು ಜಿಲ್ಲೆಯಲ್ಲಿ ಹತ್ತು ಹಲವು ಹಟ್ಟಿಗಳಿವೆ. ಇವುಗಳನ್ನು ಗುರುತಿಸಿ ಅವುಗಳನ್ನು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ರಾಷ್ಟ್ರಪತಿಗಳು ಅಂಕಿತವನ್ನು ಹಾಕಿದ್ದಾರೆ. ಆದರೆ ಅಂಕಿತ ಬಿದ್ದ ಮೇಲೂ ಸರ್ಕಾರವಾಗಲಿ ಜಿಲ್ಲಾಡಳಿತವಾಗಲಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಇದನ್ನು ಕೂಡಲೇ ಮಾಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

         ವಾಸಿಸುವವನೇ ನೆಲದ ಒಡೆಯ (ಭೂ ಶಾಸನ) ಯೋಜನೆಯ ಪ್ರಕಾರ ಸುಮಾರು 48 ಸಾವಿರ ವಸತಿ ಪ್ರದೇಶಗಳಿವೆ. ಇವುಗಳು ಸರ್ಕಾರಿ, ಅರೇ ಸರ್ಕಾರಿ, ಖಾಸಗಿ ಅಬಕಾರಿ ಇಲಾಕೆಯ ವ್ಯಾಪ್ತಿಯಲ್ಲಿ ಕಂಡು ಬರುತ್ತವೆ. ಆದರೆ ಇವುಗಳು ಹಟ್ಟಿಗಳು ಎನಿಸಿಕೊಂಡಿದ್ದು, ಅಲ್ಲಿ ಬದುಕುತ್ತಿರುವ ಜನರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲವಾಗಿದೆ. ಇದರಿಂದ ಜನರು ಗುಳೆ ಹೋಗುತ್ತಿದ್ದಾರೆ. ಹಾಡಿಗಳ ಬಗ್ಗೆ ಸರಿಯಾದ ಅಂಕಿ ಸಂಖ್ಯೆ ಸಿಗುತ್ತಿಲ್ಲ. ಆದರೆ ಅವರ ಕಲ್ಯಾಣ ಯೋಜನೆಯಲ್ಲಿ ಮಾತ್ರ ಹಣ ಖರ್ಚಾಗುತ್ತಿದೆ. ಆದ್ದರಿಂದ ಸರ್ಕಾರ ಅಂಕಿ ಸಂಖ್ಯೆಗಳನ್ನು ಕೂಡಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಮೂಲಕ ತರಿಸಿಕೊಂಡು ಇವುಗಳ ಅಭೀವೃದ್ದಿಗೆ ಮುಂದಾಗಬೇಕು. ಇವುಗಳಿಗೆ ಸಂಬಂಧಪಡುವ ಇಲಾಖೆಗಳು ಸರಿಯಾಗಿ ಕೆಲಸ ಮಾಡಿ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಿಕೊಡಬೇಕು. ಆದರೆ ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಕೆಲಸ ವಿಳಂಬವಾಗುತ್ತಿದೆ ಎಂದು ಶಿವಮೂರ್ತಿ ನಾಯ್ಕ ಆರೋಪಿಸಿದರು

       ಇಲ್ಲಿ ಕಂದಾಯ ಗ್ರಾಮಗಳು ಹಾಗೂ ವಸತಿ ಜನ ಪ್ರದೇಶಗಳ ಮುಖಂಡರನ್ನು ಕರರೆದು ಮಾತನಾಡಿ ಅವರ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ ಇದರ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಗಮನವನ್ನು ಸೆಳೆದಿದ್ದೇವೆ. ಮುಂದಿನ ಅಧಿವೇಶನ ಮುಗಿದ ಮೇಲೆ ಕರೆದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಕೂಡಲೇ ಇದೆಲ್ಲವೂ ಸಕ್ರಮವಾಗಾಬೇಕು. ಇಲ್ಲದೆ ಹೋದರೆ ಜನ ವಸತಿ ಪ್ರದೇಶಗಳು ಭೂ ಕಬಳಿಕೆದಾರರ ಪಾಲಗಾಲಿವೆ. ಅವರಿಗೆ ಭೂ ಕಬಳಿಕೆಗೆ ಅವಕಾಶ ನೀಡಿದಂತಾಗುತ್ತದೆ. ಇದರ ಬಗ್ಗೆ ಕಠಿಣ ಕಾನೂನು ಜಾರಿಯಾಬೇಕು. ಒಂದು ವೇಳೆ ಸರ್ಕಾರವೇ ಆಗಲಿ ಜಿಲ್ಲಾಡಳಿತವೇ ಆಗಲಿ ಶೀಘ್ರವಾಗಿ ಕ್ರಮ ತೆಗೆದುಕೊಳ್ಳದೇ ಹೋದರೆ ರಾಜ್ಯದ 30 ಜಿಲ್ಲೆಗಳಲ್ಲೂ ದೊಡ್ಡ ದೋಲವನವನ್ನೆ ಮಾಡುತ್ತೇವೆ ಶಿವಮೂರ್ತಿ ಎಚ್ಚರಿಕೆ ನೀಡಿದರು.

       ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಯ್ಯ, ರಾಜಾನಾಯ್ಕ್, ಹನುಮಂತಪ್ಪ ಹಾಗೂ ಯಾದವ ಸಮಾಜದ ಮುಖಂಡ ಕೃಷ್ನಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link