ಹಾನಗಲ್ಲ :
ಹಾನಗಲ್ಲ ತಾಲೂಕ ಚಿಕ್ಕೇರಿ-ಹೊಸಳ್ಳಿ ರಸ್ತೆ ಪಕ್ಕದಲ್ಲಿ ಬಿದ್ದ ಬ್ಯಾಗನ್ನು ಅವರ ಮಾಲಕರಿಗೆ ಮರುಳಿಸಿ ಮಾನವಿಯತೆ ಮೆರೆದ ಕೆಇಬಿ ಶಾಖಾಧಿಕಾರಿ ಬಸವರಾಜ ಕವಲಿ.
ಚಿಕ್ಕೇರಿ ಹೊಸಳ್ಳಿ ಗ್ರಾಮದ ಸಂಜೀವ ಕನ್ನೇಶ್ವರ ಎಂಬವರಿಗೆ ಸೇರಿದ ಬ್ಯಾಗ ಇದಾಗಿದ್ದು, ಗುರುವಾರ ಸಂಜೆ ವೇಳೆಗೆ ಪತ್ನಿಯೊಂದಿಗೆ ಬೈಕಿನಲ್ಲಿ ಬಂಕಾಪುರ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಅದೆ ವೇಳೆಯಲ್ಲಿ ಕೆಇಬಿ ಶಾಖಾಧಿಕಾರಿ ಬಸವರಾಜ ಕವಲಿ ತಮ್ಮ ಕೆಲಸ ಮುಗಿಸಿಕೊಂಡು ಚಿಕ್ಕೆರಿ ಹೊಸಳ್ಳಿ ಮಾರ್ಗವಾಗಿ ಹಾನಗಲ್ಲಿಗೆ ಬರುವಾಗ ರಸ್ತೆ ಪಕ್ಕದಲ್ಲಿ ಬಟ್ಟೆತುಂಬಿದ ಬ್ಯಾಗ ಬಿದ್ದಿರುವುದು ಗಮನಕ್ಕೆ ಬಂದಿದೆ ನಂತರ ಬ್ಯಾಗನ್ನು ತೆಗೆದು ನೊಡಿದಾಗ ಅದರಲ್ಲಿ ಒಂದು ತೊಲೆ ಕಿವಿಯೊಲೆ ಹಾಗೂ 300 ರೂ.ಹಣ ಮತ್ತು ಬಟ್ಟೆಯಿರುವುದು ಗಮನಿಸಿ ಕೂಡಲೆ ಅಕ್ಕಪಕ್ಕದ ಹಳ್ಳಿಯವರಿಗೆ ಬಸವರಾಜ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿ ತಿಳಿದ ಸಂಜೀವ ಕನ್ನೇಶ್ವರ ಕೆಇಬಿ ಆಫೀಸಿಗೆ ಬಂದು, ಕಳೆದು ಹೋಗಿರುವ ಬ್ಯಾಗ ತಮ್ಮದೆಂದು ಖಚಿತ ಪಡಿಸಿ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕಿರಣಕುಮಾರ ಅವರ ಸಮಕ್ಷಮದಲ್ಲಿ ಬ್ಯಾಗನ್ನು ವಾಪಸ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ