ಕಿಂಗ್ಸ್ ಇಲೆವೆನ್ಸ್‍ಗೆ ಭರ್ಜರಿ ಗೆಲುವು

ಮೊಹಾಲಿ:

       ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬಯಿ ಇಂಡಿಯನ್ಸ್ ತಂಡಗಳ ನಡುವಣ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕಿಂಗ್ಸ್ ಇಲೆವೆನ್, 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ತವರಿನ ಲಾಭ ಪಡೆದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್, ಸುಲಭವಾಗಿ ಗೆಲುವು ಸಾಧಿಸಿದ್ದಾರೆ.

      ಮುಂಬಯಿ ಇಂಡಿಯನ್ಸ್ ನೀಡಿದ 177 ರನ್‍ಗಳ ಸವಾಲು ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್, 18.4 ಓವರ್‍ಗಳಲ್ಲಿ ಗೆಲುವು ಸಾಧಿಸಿದ್ದಾರೆ. ತಂಡದ ಪರ ಉತ್ತಮ ಆಟವಾಡಿದ ಕೆ.ಎಲ್. ರಾಹುಲ್, 71 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇನ್ನು, ಮಯಾಂಕ್ ಅಗರ್‍ವಾಲ್ 43 ರನ್ ಸಿಡಿಸಿದ್ರೆ, ಕ್ರಿಸ್ ಗೇಲ್ 40 ರನ್ ಸಿಡಿಸಿ ಕಿಂಗ್ಸ್ ಇಲೆವೆನ್ ತಂಡದ ಗೆಲುವಿಗೆ ನೆರವಾದರು.

        ಇನ್ನೊಂದೆಡೆ, ಉತ್ತಮ ಆರಂಭ ಪಡೆದಿದ್ದ ಮುಂಬಯಿ ಇಂಡಿಯನ್ಸ್ 200 ರ ಗಡಿ ಮುಟ್ಟುವ ಭರವಸೆ ಮೂಡಿಸಿದ್ದರು. ಬಳಿಕ 176 ರನ್‍ಗಳಿಸುವಷ್ಟರಲ್ಲಿ ಮುಂಬಯಿ ಇಂಡಿಯನ್ಸ್ ಶಕ್ತವಾಗಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ 20 ಓವರ್‍ಗಳಲ್ಲಿ 177 ರನ್‍ಗಳ ಸವಾಲು ನೀಡಿತ್ತು. ಮುಂಬಯಿ ಇಂಡಿಯನ್ಸ್ ಪರ ಡಿ’ ಕಾಕ್ ತಂಡದ ಆಸರೆಯಾಗಿದ್ದರು. 39 ಬಾಲ್‍ಗಳಲ್ಲಿ 60 ರನ್ ಸಿಡಿಸಿ ತಂಡದ ಸ್ಟಾರ್ ಪರ್ಫಾಮರ್ ಆದರು.

ಸ್ಕೋರ್ ವಿವರ

ಮುಂಬೈ ಇಂಡಿಯನ್ಸ್ : 176/6 (20)
ಕಿಂಗ್ಸ್ ಎಲೆವನ್ ಪಂಜಾಬ್ : 177/2(18.4)

ಪಂಜಾಬ್ ತಂಡ:

     ಲೋಕೇಶ್ ರಾಹುಲ್ (ವಿಕೆ), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ಹಾರ್ದಸ್ ವಿಲ್ಜೊಯೆನ್, ರವಿಚಂದ್ರನ್ ಅಶ್ವಿನ್ (ಸಿ), ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಆಂಡ್ರ್ಯೂ ಟೈ.

ಮುಂಬೈ ಇಂಡಿಯನ್ಸ್ ತಂಡ:

     ಕ್ವಿಂಟನ್ ಡಿ ಕಾಕ್ (ವಿಕೆ), ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಿಚೆಲ್ ಮ್ಯಾಕ್ಕ್ಲೆನಾಘನ್, ಮಯಾಂಕ್ ಮಾರ್ಕೆಂಡೆ, ಜಸ್‍ಪ್ರೀತ್ ಬೂಮ್ರಾ, ಲಸಿತ್ ಮಾಲಿಂಗ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link