ಜಗಳೂರು
ಭಾರತೀಯ ಯೋಧರ ಮೇಲೆ ಉಗ್ರರು ನಡೆಸಿದ ಪೈಶಾ ಚಿಕ ಕೃತ್ಯ ಖಂಡಿಸಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮುಖಾಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಹೆಚ್.ಬಸವರಾಜ್ ಮಾತನಾಡಿ ಹುಟ್ಟುತ್ತಲೇ ಹಗೆತನದಲ್ಲಿ ಹುಟ್ಟಿದ ಪಾಕಿಸ್ತಾ ನ ತಾಲಿಬಾನಿಗಳನ್ನು ಬೆಳೆಸಿಕೊಂಡು ಇಂತಹ ಹೀನ ಕೃತ್ಯ ನಡೆಸುತ್ತಿದೆ. ಪಾಕಿಸ್ತಾನಕ್ಕೆ ಒಳ್ಳೆಯ ಮಾತುಗಳು ಅರ್ಥವಾಗುವುದಿಲ್ಲ. ಅದಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದರು.
ಉಗ್ರರ ದಾಳಿಯಲ್ಲಿ 49 ಜನ ಯೋಧರು ಹುತಾತ್ಮರಾಗಿದ್ದು ಅತೀವ ನೋವು ತಂದಿದೆ. ಇಡೀ ದೇಶ ಯೋಧರಿ ಗಾಗಿ ಮರುಗುತ್ತಿರುವ ಈ ಸಂದರ್ಭ ವಿಚ್ಛಿದ್ರಕಾರಕ ಶಕ್ತಿಗಳು, ದೇಶ ವಿರೋಧಿ ಗಳು ಉಗ್ರರ, ಪಾಕಿಸ್ತಾನದ ಪರ ಮಾತನಾ ಡುತ್ತಿದ್ದಾರೆ. ಬೆಳಗಾವಿಯ ಶಿಕ್ಷಕಿಯೊಬ್ಬರು ಪಾಕಿಸ್ತಾನದ ಪರ ಫೇಸ್ ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದಾರೆ. ದೇಶದ ಅನ್ನ ತಿಂದು ದೇಶದ ವಿರುದ್ಧ ಯೋಚನೆ ಮಾಡುವ ಇವರನ್ನು ಮೊದಲು ರಸ್ತೆ ಬದಿಯಲ್ಲಿ ಗಲ್ಲಿಗೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ವಿ.ತಿಪ್ಪೇಸ್ವಾಮಿ ಮಾತನಾಡಿ ಬಾಂಗ್ಲ ವಿಮೋಚನಾ ಸಂದರ್ಭ ವಿರೋಧ ಪಕ್ಷ ದಲ್ಲಿದ್ದ ವಾಜಪೇಯಿ ಅವರು ಇಂದಿರಾಗಾಂಧಿ ಅವರಿಗೆ ದುರ್ಗೆಯಂತೆ ಕಾರ್ಯನಿರ್ವಹಿಸಿ ಎಂದು ಹೇಳಿದ್ದರು. ಆ ಕಾಲ ಈಗ ಬಂದಿದೆ. ಗಾಂಧೀಯ ಮಾತು ಇವರಿಗೆ ಕೇಳುವುದಿಲ್ಲ. ಹಮ್ಮುರಬಿಯ ಸಿದ್ಧಾಂತದಂತೆ ಪಾಪಿಗಳ ರುಂಡ ಚೆಂಡಾಡಬೇಕು. ದೇಶದ ಒಳಗಿನ ಹಾಗೂ ದೇಶದ ಹೊರಗಿನ ಶತ್ರುಗಳ ವಿರುದ್ಧ ಇಸ್ರೇಲ್ ಮಾದರಿಯಲ್ಲಿ ಹೋರಾಡಬೇಕು ಎಂದರು.
ವಕೀಲ ಡಿ.ಶ್ರೀನಿವಾಸ್ ಮಾತನಾಡಿ ನಮ್ಮ ಸೈನಿಕರಿಗೆ ಸಾವಿರ ಜನ ಉಗ್ರರನ್ನು ಮಟ್ಟಹಾಕುವ ತಾಕತ್ತು ಇದೆ. ಆದರೆ, ನೇರವಾಗಿ ಬರದೆ ಮೋಸದಿಂದ ಇಂತಹ ಕೃತ್ಯ ಎಸಗಿದ್ದಾರೆ. ಇನ್ನೂ ಉಗ್ರರಿಗೆ ಯಾವುದೇ ಮಾನವೀಯತೆ ತೋರಿಸುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿ, ಹೇಗೆ, ಯಾವಾಗ ಪ್ರತಿಕಾರ ತಿರಿಸಿಕೊಳ್ಳಬೇಕು ಎಂಬುದನ್ನು ಸೈನ್ಯ ತೀರ್ಮಾನ ಮಾಡಬೇಕು. ಸೈನ್ಯದ ತೀರ್ಮಾನಕ್ಕೆ ಇಡೀ ದೇಶದ ಬೆಂಬಲವಿದೆ ಎಂಬ ಸಂದೇಶ ನೀಡಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಕೀಲರಾದ ಪಟೇಲ್, ಕರಿಬಸಯ್ಯ, ಪ್ರಕಾಶ್, ನಾಗಪ್ಪ, ಓಬಳೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ