ಮುಕ್ತಿ ಕಾಣದ ಮಸಿಬಳಿದ ನಾಮಫಲಕಗಳು

ಕೊಟ್ಟೂರು

ವಿಧಾನ ಸಭಾ ಚುನಾವಣೆ ಮುಗಿದು ಏಳು ತಿಂಗಳಾಗಿದ್ದರೂ, ಶಂಕುಸ್ಥಾಪನೆ, ಉದ್ಘಾಟನೆ ನಾಮಫಲಕದಲ್ಲಿದ್ದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯ ಹೆಸರುಗಳ ಮೇಲೆ ಬಳಿದ ಕಪ್ಪು ಮಸಿ ಇನ್ನೂ ಹಾಗಿಯೇ ಇದೆ. 

        ಚುನಾವಣಾ ಆಯೋಗದ ನಿರ್ದೆಶನದಂತೆ ಲೋಕೋಪಯೋಗಿ ಇಲಾಖೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಆಡಳಿತ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರು ಉದ್ಘಾಟಿಸಿದ ಕಾಮಗಾರಿ, ಅಡಿಗಲ್ಲು ಶಂಕುಸ್ಥಾಪನೆ ನಾಮಫಲಕದಲ್ಲಿನ ಹೆಸರುಗಳಿಗೆ ಮಸಿ ಬಳಿಯಲಾಗಿತ್ತು.

        ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಮಸಿ ಬಳಿದ ನಾಮಫಲಕಗಳು ರಾಜಕಾರಣಿಗಳನ್ನು ಅಣಕಿಸುವಂತ್ತಿವೆ. ಕಾಮಗಾರಿಯ ಮೊತ್ತ, ಅನುಷ್ಠಾನಕ್ಕೆ ಬಂದ ದಿನಾಂಕ, ಶಾಸಕರು, ಸಚಿವರು, ಎಂ.ಪಿಗಳ, ಹಾಗೂ ಸ್ಥಳೀಯ ಗ್ರಾ.ಪಂ. ತಾ.ಪಂ. ಜಿ.ಪಂ. ಸದಸ್ಯರ ಯಾರ ಹೆಸರುಗಳು ಕಾಣುತ್ತಿಲ್ಲ.

       ಈ ನಾಮಫಲಕಗಳು ಮೋಹರಂ ಹಬ್ಬದಲ್ಲಿನ ವಿಚಿತ್ರ ವೇಷತೊಟ್ಟವರಂತೆ ಕಾಣುತ್ತಿವೆ. ಚುನಾವಣೆ ನಂತರ ಈ ಫಲಕಗಳು ಮೊದಲಿನಂತೆ ಕಾಣಬೇಕೆಂಬುದು ನಾಮಫಲಕದಲ್ಲಿರುವ ಜನಪ್ರತಿನಿಧಿಗಳ ಆಸೆ ಮತ್ತು ಹಕ್ಕೊತ್ತಾಯ. ಈ ಸಮಸ್ಯೆ ಹಗರಿಬೊಮ್ಮನಹಳ್ಳಿ, ಕೊಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದಲ್ಲಿ ಎಲ್ಲಾ ಕಡೆಗೂ ನಾಮಫಲಕಗಳಿಗೆ ಮಸಿ ಬಳಿಯಲಾಗಿದೆ.

       ಆದರೆ ಮಸಿ ಬಳಿದ ನಾಮಫಲಕಗಳು ಇದ್ದ ಸ್ಥಳದಲ್ಲಿ ಮೊದಲಿನಂತೆ ನಾಮಫಲಕಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಕೋಟ್ಯಂತರ ರು. ಖರ್ಚಾಗುತ್ತದೆ. ಮೇಲಾಗಿ ಅಷ್ಟು ಹಣವನ್ನು ಖರ್ಚುಮಾಡಲು ಸರ್ಕಾರ ಸಿದ್ದವಿಲ್ಲ.

        ಇನ್ನೊಂದು ವಿಷಯವೆಂದರೆ ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುವುದರಿಂದ ಈಗ ಮಸಿ ಬಳಿದ ನಾಮಫಲಕಗಳು ಹಾಗೆ ಇರಲಿ ಲೋಕೋಪಯೋಗಿ ಇಲಾಖೆ ಚಿಂತಿಸಿದಂತ್ತಿದೆ.

         ಆದೇನೆ ಇರಲಿ, ಜನಪ್ರತಿನಿಧಿಗಳ ಜನಪರ ಕಾರ್ಯವನ್ನು ಎತ್ತಿ ತೋರಿಸುವಂತಹ ನಾಮಫಲಕಗಳು ಕಪ್ಪು ಮಸಿ ಬಳಿದಿರುವುದಕ್ಕೆ ಅನೇಕ ಜನಪ್ರತಿನಿಧಿಗಳು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link