ಸಿಸಿಬಿಗೆ ಪಿಡಿಒಯಿಂದ ಸ್ಪೋಟಕ ಮಾಹಿತಿ…!!!

ಬೆಂಗಳೂರು

         ಸಿವಿಲ್ ಪೇದೆ ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಅರಣ್ಯರಕ್ಷಕ ಹುದ್ದೆ, ಪ್ರಥಮ ದರ್ಜೆ ನೌಕರ, ದ್ವಿತೀಯ ದರ್ಜೆ ನೌಕರ, ಪೊಲೀಸ್ ಪೇದೆ ಮತ್ತು ಸರ್ಕಾರಿ ಉಪನ್ಯಾಸಕರ ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆತಂಕಕಾರಿ ಸಂಗತಿ ಲಭ್ಯವಾಗಿದೆ

          ಪ್ರಕರಣದ ಸಂಬಂಧ ಬಂಧಿಸಿರುವ ಮಧುಗಿರಿ ತಾಲ್ಲೂಕಿನ ಗೊಂದಿಹಳ್ಳಿ ಪಿಡಿಒ ಮಹೇಶ್ ವಿಚಾರಣೆಯಲ್ಲಿ ಅರಣ್ಯ ರಕ್ಷಕರ ಹುದ್ದೆ, ಪ್ರಥಮ ದರ್ಜೆ ನೌಕರ ಹುದ್ದೆ, ದ್ವಿತೀಯ ದರ್ಜೆ ನೌಕರ ಹುದ್ದೆ ಮತ್ತು ಸರ್ಕಾರಿ ಉಪನ್ಯಾಸಕರ ಹುದ್ದೆಗಳಿಗೆ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.

         ಪ್ರಕರಣದ ಸಂಬಂಧ ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಬಸವರಾಜ್ ಮನೆ ಮೇಲೆ ದಾಳಿ ನಡೆಸಿ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿರುವ ಪೆÇಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದಾಳಿ ನಡೆಸುವ ಬಂಧಿತ ಶಿವಕುಮಾರ್ ಅಲಿಯಾಸ್ ಗೂರೂಜಿ ಮಠದಲ್ಲಿರುವುದನ್ನು ಕಂಡು ಮಠಕ್ಕೆ ಏಕೆ ಹೋಗಿದ್ದೆ ಎಂದು ಕೇಳಿದ್ದಕ್ಕೆ ಯೋಗ ಹೇಳಿಕೊಡಲು ಬಂದಿದ್ದಾಗಿ ನನಗೆ ಯೋಗಾಸನದಲ್ಲಿ ಆಸಕ್ತಿ ಹೊಂದಿರುವುದಾಗಿ ಉತ್ತರಿಸಿದ್ದಾನೆ.
ಕಳೆದ ಮೂವತ್ತು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೊಡಗಿ ಬೆಂಗಳೂರಿನಲ್ಲಿ ಅಭ್ಯರ್ಥಿಗಳನ್ನ ಸೇರಿಸಿ ಗೂರೂಜಿಡೀಲ್ ಮಾಡುತ್ತಿದ್ದ ಎಂಬ ಮಾಹಿತಿಯೂ ಸಿಕ್ಕಿದೆ.

ಹುಡುಗಿಯರ ಶೋಕಿ!

        ತುಮಕೂರಿನಲ್ಲಿ ಕುಟುಂಬವಿದ್ದರೂ ಬೆಂಗಳೂರಲ್ಲಿ ಗೆಳೆಯನಿಗೆ ಸೇರಿದ ಅಪಾರ್ಟ್‍ಮೆಂಟ್‍ನಲ್ಲಿ ಶಿವಕುಮಾರ್ ಅಲಿಯಾಸ್ ಗೂರೂಜಿ ವಾಸವಿದ್ದ. ಅಲ್ಲಿ ಯುವತಿಯರ ಜೊತೆ ಆಗಾಗ ಪಾರ್ಟಿ ಮಾಡಿ ಕಾಲ ಕಳೆಯುತ್ತಿದ್ದನಂತೆ. ಆದರೆ ಪ್ರಶ್ನೆ ಪತ್ರಿಕೆ ಸಂಬಂಧ ಆಪರೇಷನ್ ಸೋರಿಕೆ ಡೀಲ್ ಇದ್ದಾಗ ಮಾತ್ರ ಹೊರ ಬರುತ್ತಿದ್ದ ಎಂದು ತಿಳಿದು ಬಂದಿದೆ.

         2113 ಹುದ್ದೆಗಳ ನೇಮಕಾತಿಗೆ ನ.25ರಂದು ರಾಜ್ಯವ್ಯಾಪಿ ನಿಗದಿ ಪಡಿಸಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಬಂಧಿತ ಕಿಂಗ್‍ಪಿನ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿ ಸೋರಿಕೆ ಮಾಡಿದ್ದ. ಈತನ ಜತೆಗೆ ಕೈ ಜೋಡಿಸಿದ್ದ ಪಿಡಿಒ ಮಹೇಶ್ ,ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ಪತ್ತೆಹಚ್ಚಿ ವ್ಯವಹಾರ ಕುದುರಿಸುವ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ.

        ಸುಮಾರು 200 ಮಂದಿ ಅಭ್ಯರ್ಥಿಗಳನ್ನು ಶಿವಕುಮಾರಯ್ಯ ಸಂಪರ್ಕ ಮಾಡಿ ಪ್ರಶ್ನೆಪತ್ರಿಕೆ ಕೊಡಲು 6ರಿಂದ 8 ಲಕ್ಷ ರೂ. ನಿಗದಿ ಮಾಡಿದ್ದ. ಒಪ್ಪಿಕೊಂಡ ಅಭ್ಯರ್ಥಿಗಳಿಂದ ತಲಾ 3ರಿಂದ 4 ಲಕ್ಷ ರೂ. ಪಡೆದು ಎಸ್‍ಎಸ್‍ಎಲ್‍ಸಿ, ಪಿಯುಸಿ ಅಂಕಪಟ್ಟಿ ಪಡೆಯಲು ಮತ್ತೊಬ್ಬ ಆರೋಪಿ ಬಸವರಾಜುಗೆ ವಹಿಸಿದ್ದ. ನ.23ರಂದು ಬೆಳ್ಳಂದೂರು ಕ್ರಾಸ್‍ನಲ್ಲಿ ಬಸವರಾಜು ಕಾರಿನಲ್ಲಿ ಹಣ, ಅಂಕಪಟ್ಟಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.

        ತುಮಕೂರು, ಬೆಂಗಳೂರಿನಲ್ಲಿರುವ ಶಿವಕುಮಾರಯ್ಯ ಮನೆ ಮೇಲೆ ದಾಳಿ ನಡೆಸಿದಾಗ 5 ಸರ್ಕಾರಿ ಹುದ್ದೆಯ ಪ್ರಶ್ನೆಪತ್ರಿಕೆಗಳು ಪತ್ತೆಯಾಗಿವೆ. ಅರಣ್ಯರಕ್ಷಕ ಹುದ್ದೆ, ಪ್ರಥಮ ದರ್ಜೆ ನೌಕರ, ದ್ವಿತೀಯ ದರ್ಜೆ ನೌಕರ, ಪೊ78ಲೀಸ್ ಪೇದೆ ಮತ್ತು ಸರ್ಕಾರಿ ಉಪನ್ಯಾಸಕರ ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap