ಬಳ್ಳಾರಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಲವ್ ವಿಥೌಟ್ ರೀಸನ್ ಫೌಂಡೇಷನ್ ಹಾಗೂ ಆಸ್ಟರ್ ಸಿ ಎಂ ಐ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತವಾಗಿ ಸೀಳು ತುಟಿ ಸೀಳು ಅಂಗಳ ಮತ್ತು ಮುಖದ ವಿಕಲಾಂಗತೆಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಡಾ.ರಶ್ಮಿ ಚುಮ್ಕಿ ಯಿನಾ ಫೌಂಡೇಷನ್ ಇವರು ಉದ್ಘಾಟಿಸಿ ರಾಷ್ಟ್ರೀಯ ಬಾಲ ಸ್ವಸ್ಥ ಈ ಒಂದು ಕಾರ್ಯಕ್ರಮ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಬಡವರ ಬಾಳಿನಲ್ಲಿ ಆಶಾ ದೀಪ ಬೆಳೆಗಿಸಿದಂತಿದೆ ಎಂದು ಉದ್ಘಾಟನಾ ನುಡಿಗಳು ಹಾಡಿದರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಕಛೇರಿಯಲ್ಲಿ ಕಾರ್ಯಕ್ರಮ ನೆರವೇರಿಸಿ ಶ್ರೀ ಮತಿ ಡಾ.ಜ್ಯೋತಿ ಆರ್ ಬಿ ಎಸ್ ಡಾಕ್ಟರ್ ಸೆಲ್ ನ ಮುಖ್ಯಸ್ಥರು ಇವರು ಮಾತಾನಾಡಿ ಈ ಒಂದು ಸೀಳು ತುಟಿ ಮತ್ತು ಮುಖದ ಭಾಗಗಳಲ್ಲಿ ಕಿವಿ ಮೂಗು ಇನ್ನಿತರ ಅನೇಕ ಸಮಸ್ಯೆಗಳು ಹೆಚ್ಚು ಕಂಡುಬರುವುದು ಸಂಬಂಧಿಕರಲ್ಲಿ ಮದುವೆ ಯಾಗುವುದರಿಂದ ಇಂತ ಕಾಯಿಲೆ ಗಳಿಗೆ ತುತ್ತಾಗಿ ಬಳುಲುವಂತ ಸ್ಥಿತಿ ನಿರ್ಮಾಣ ವಾಗುತ್ತದೆ ಎಂದರು.
ನಂತರ ಸದರಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಮುಖ್ಯಸ್ಥರಾದ ಡಾ,ರವೀಂದ್ರ ಮಾತಾನಾಡಿ ರಾಷ್ಟ್ರೀಯ ಬಾಲ ಸ್ವಸ್ಥಾ ಆರೋಗ್ಯ ಯೋಜನೆ ಇದು ಕೇಂದ್ರ ಸರ್ಕಾರದ ಯೋಜನೆ ಯಾಗಿದ್ದು,ಇದರಿಂದ ಬಡಜನರು ಇಂತ ದೊಡ್ಡ ಕಾಯಿಲೆಗಳಿಗೆ ವರದಾನವಾಗಿದೆ,ಏಕೆಂದರೆ ಬಡತನದಿಂದ ಬಳಲುವ ಕೂಲಿ ಕಾರ್ಮಿಕರು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾದ್ಯವಿಲ್ಲ,ಖರ್ಚು ಐದರಿಂದ ಆರು ಲಕ್ಷದ ವರೆಗೆ ತಗಲಬಹುದು ಇದು ಒಂದೇ ಬಾರಿಗೆ ಮಗಿಯುವ ಆಪರೇಷನ್ ಅಲ್ಲ ಎರಡರಿಂದ ಮೂರು ಸಾರಿ ಶಸ್ತ್ರಚಿಕಿತ್ಸೆ ಗೆ ಹೊಳ ಪಡಿಸುವ ಸಾಧ್ಯತೆ ಇರುತ್ತದೆ ಎಂಬುದು ತಿಳಿಸಿದರು.
ಇದರಲ್ಲಿ 35 ಚಿಕ್ಕ ಕಂದಮ್ಮಗಳು ದಾಖಲಾಗಿವೆ ವಿವಿಧ ಹಳ್ಳಿ ಮತ್ತು ನಗರ ಪ್ರದೇಶಗಳಿಂದ ಆಗಮಿಸಿ ನೊಂದಣಿ ಮಾಡಿಸಿದರು. ನಂತರ ಈ ಮಕ್ಕಳನ್ನು ಪರೀಕ್ಷೆ ಗೆ ಹೊಳಪಡಿಸಿ ಸಂಬಂಧಿಸಿದ ಆಸ್ಪತ್ರೆಯ ಮುಖಾಂತರ ಚಿಕಿತ್ಸೆ ಬೆಂಗಳೂರಿನ ನುರಿತ ವೈದ್ಯರಿಂದ ಮಾಡಿಸಲಾಗುವುದು ಹೇಳಿದರು ಉಚಿತವಾಗಿ ಮಾಡುವುದರ ಜೊತಗೆ ದಾಖಲಾದ ದಿನದಿಂದ ಗುಣವಾಗಿ ಮನೆಗೆ ಹೋಗುವ ತನಕ ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಮದ್ದಿನ ಖರ್ಚು ಊಟ ವಸತಿ ಸೌಲಭ್ಯ ಸಂಪೂರ್ಣ ಉಚಿತ ವಾಗಿರುತ್ತದೆ.ಈ ಸಂದರ್ಭದಲ್ಲಿ ಡಾ.ಮಹೇಶ್ವರಿ ಡಾ. ವಿಮುಲಾ,ಡಾ.ಶಿವಶಂಕರ್, ಡಾ.ಮಲ್ಲಿಕಾರ್ಜುನ ಜಾಫರ್ ಎಲ್ಲಾ ವೈದ್ಯರುಗಳು ಶಸ್ತ್ರಚಿಕಿತ್ಸೆಗೆ ಹೊಳಪಡುವ ಮಕ್ಕಳ ಪೋಷಕರು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
