ಕೊರಟಗೆರೆ
ಕರುನಾಡಿನ ಕಲೆ, ಸಾಹಿತ್ಯ, ಸಂಸ್ಕತಿ ಮತ್ತು ಪರಂಪರೆಯನ್ನು ಉಳಿಸುವಂತಹ ಕೆಲಸಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕು ಎಂದು ಸರಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ಲತಾ ತಿಳಿಸಿದರು.
ಅವರು ತಾಲ್ಲೂಕಿನ ಬೊಮ್ಮಲದೇವಿಪುರ ಗ್ರಾಮದಲ್ಲಿ ಮರಿಗಮ್ಮ, ದುರ್ಗಮ್ಮ ಆಟೋ ಚಾಲಕರ ಸಂಘ, ಸರಕಾರಿ ಪದವಿ ಪೂರ್ವ ಕಾಲೇಜ್, ಸರಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಪಾಠಶಾಲೆ ವತಿಯಿಂದ ಏರ್ಪಡಿಸಲಾಗಿದ್ದ 4 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತಾ, ್ತಕನ್ನಡ ನಾಡಿನ ಜನ್ಮ ಭೂಮಿಯ ಋಣ ತೀರಿಸಲು ಪ್ರತಿಯೊಬ್ಬರು ಬದ್ದರಾಗಬೇಕು ಎಂದರು.
ಸತತ 4 ವರ್ಷಗಳಿಂದಲೂ ಬಿಡಿ ಪುರ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸೇರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ಬಹಳ ಅದ್ದೂರಿಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಜಾತಿ, ಮತ ಭೇದ ಮರೆತು ಯುವಕರು ಒಗ್ಗೂಡಿ ಸಾಮರಸ್ಯದಿಂದ ಕನ್ನಡರಾಜ್ಯೋತ್ಸವ ಆಚರಣೆಗೊಳಿಸಿರುವುದು, ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಯುವಕರು ಜಾತಿ, ಮತ ಮರೆತು ಕೈ ಜೋಡಿಸಲಿದ್ದಾರೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿರುವುದು ಉತ್ತಮ ಬೆಳೆವಣಿಗೆ ಆಗಿದೆ ಎಂದು ಅಭಿಪ್ರಾಯ ಪಟ್ಟರು.
ಉಪನ್ಯಾಸಕ ಹನುಮಂತರಾಯಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆಯಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಇಂದು ಮಹಾನ್ ವ್ಯಕ್ತಿಗಳಾದ ನಮ್ಮ ಕಣ್ಣಿನ ಮುಂದೆ ಸಾಕ್ಷಿಗಳಿವೆ. ಅನ್ಯ ಭಾಷೆಗಳ ವ್ಯಾಮೋಹ ತೊರೆದು ಮಾತೃ ಭಾಷೆಗೆ ಆದ್ಯತೆ ಕೊಡಬೇಕು ಎಂದರು.
ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ನಾಗರಾಜು ಮಾತನಾಡಿ, ಕನ್ನಡ ರಾಜ್ಯೋತ್ಸವ ನವೆಂಬರ್ 1 ಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು. ದೇಶದಲ್ಲಿಯೇ 8 ಜ್ಞಾನ ಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಉಳಿಸಿ ಬೆಳೆಸಬೇಕಾದ ಕರ್ತವ್ಯ ನಮ್ಮ ಮೇಲಿದೆ ಎಂದರು.
ಆಟೋಚಾಲಕರ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, 4 ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದು, ನಮ್ಮ ಆಟೋ ಸಂಘದಿಂದ ಪ್ರಥಮ ವರ್ಷದಿಂದ ಪ್ರಾರಂಭಗೊಂಡು ಪ್ರತಿ ವರ್ಷ ಹಂತ ಹಂತವಾಗಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆಗೊಳ್ಳುತ್ತಿದೆ. ಈ ಬಾರಿ ಸಾರ್ವಜನಿಕರ ಸಹಕಾರ ಹಾಗೂ ಅಕ್ಕಪಕ್ಕದ ಹಳ್ಳಿಗಳ ಸಹಕಾರ ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಇನ್ನಷ್ಟು ಮೆರುಗು ಬಂದಿದೆ. ಪ್ರತಿ ಬಾರಿಯ ರಾಜ್ಯೋತ್ಸವದ ಆಚರಣೆಗೆ ತಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾಗಿದೆ ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ಬೋರಯ್ಯ, ಪ್ರಸನ್ನಕುಮಾರ್, ಲೋಕೇಶ್, ಕವಿತ, ಕಮಲ, ಸತೀಶ್, ಅಶ್ವತ್ಥ್‍ನಾರಾಯಣ, ಭಾರತಿ, ಆಟೋಚಾಲಕರ ಸಂಘದ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಶಿವಾಜಿ, ಪ್ರಕಾಶ್, ಚಂದ್ರಣ್ಣ, ಗಂಗರಾಜು, ಶ್ರಿನಿವಾಸ್, ನಾಗೇಶ್, ಉಮಾಶಂಕರ್, ಮಂಜುನಾಥ್, ಲೋಕೇಶ್, ಅನಂತಕುಮಾರ್, ಉಮೇಶ್, ನರಸಿಂಹರಾಜು, ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
