ವಿಶ್ವ ಕ್ಯಾನ್ಸರ್ ವಿರೋಧಿ ದಿನಾಚರಣೆ

ಹಾವೇರಿ

      ವಿಶ್ವ ಕ್ಯಾನ್ಸರ್ ವಿರೋಧಿ ದಿನಾಚರಣೆ ಅಂಗವಾಗಿ ಹಾನಗಲ್ ತಾಲೂಕು ಅಕ್ಕಿಆಲೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಮತ್ತು ಉಪನ್ಯಾಸಕರಿಗೆ ಸೋಮವಾರ ತಂಬಾಕು ಸೇವನೆಯ ದುಷ್ಪರಿಣಾಮಗಳ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಶಿಕ್ಷಣವನ್ನು ನೀಡಲಾಯಿತು.

       ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಟ್ಪಾ ಕಾಯ್ದೆ-2003ರ ಕುರಿತು ಮತ್ತು ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಹಾಗೂ ಪಾಶ್ರ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಜಾಗೃತಿ ಮೂಡಿಸಲಾಯಿತು.

       ಸಮಾರಂಭದಲ್ಲಿ ಡಾ.ಆಸಿಫ್ ಶೇಕ್ ಅವರು ಮಾತನಾಡಿ, ಭಾರತ ದೇಶದಲ್ಲಿ ಗರ್ಭಕಂಠದ ಕ್ಯಾನ್ಸರನಿಂದ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿದ್ದಾಳೆ ಹಾಗೂ ಪ್ರತಿ ವರ್ಷ ಪತ್ತೆಹಚ್ಚಲಾದ ಎರಡು ಸ್ತನ ಕ್ಯಾನ್ಸರ್ ಪ್ರಕರಣದಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆ ಸಂಬಂಧಿ ಕಾಯಿಲೆಯಿಂದ ಪ್ರತಿದಿನ 2500 ರಷ್ಟು ಜನರು ಮರಣಹೊಂದುತ್ತಿದ್ದಾರೆ. ಕ್ಯಾನ್ಸರ್‍ನಿಂದಾಗುವ ಒಟ್ಟಾರೆ ಮರಣಗಳಲ್ಲಿ ಬಾಯಿ ಮತ್ತು ಶಾಸ್ವಕೋಶದ ಕ್ಯಾನ್ಸರ್‍ನಿಂದ ಶೇ.25 ರಷ್ಟು ಗಂಡಸರು ಹಾಗೂ ಸ್ತನಕ್ಯಾನ್ಸರ್ ಹಾಗೂ ಬಾಯಿ ಕ್ಯಾನ್ಸರ್‍ನಿಂದ ಶೇ.25 ರಷ್ಟು ಮಹಿಳೆಯರು ಮರಣಹೊಂದುತ್ತಿದ್ದಾರೆ.

       ತಂಬಾಕು ಸೇವನೆ ಅತ್ಯಂತ ಅಪಾಯಕಾರಿಯಾಗಿದೆ. ಶಾಲಾ ಆವರಣದಿಂದ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಈ ಕುರಿತಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಕಡ್ಡಿಪುಡಿ ವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link