ದೃಡ ಮನಸ್ಸಿನಿಂದ ಏನನ್ನಾದರು ಸಾಧಿಸಬಹುದು : ಸಿ.ಸಿ.ಪಾವಟೆ

ತಿಪಟೂರು :

       ನಾವು ಏನನ್ನಾದರು ಮಾಡುವ ಮೊದಲು ನಿಶ್ಚಯಿಸಬೇಕು, ಆ ನಿಶ್ಚಯ ಮನಸಿನಲ್ಲಿ ಅಚ್ಚಳಿಯದಂತೆ ದೃಢವಾದರೆ ನಾವು ಏನನ್ನಾದರು ಸಾಧಿಸಬಹುದೆಂದು ಮನಶಾಸ್ತ್ರಜ್ಞರಾದ ಸಿ.ಸಿ.ಪಾವಟೆ ತಿಳಿಸಿದರು.

        ನಗರದ ಕಲ್ಪತರು ಆಡಿಟೋರಿಯಂನಲ್ಲಿ ಪ್ರೇರಣಾ ಸ್ಟಡಿಸೆಂಟರ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲ್ಪತರು ಪದವಿಪೂರ್ವಕಾಲೇಜು ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗಾಗಿ ಮನಶಾಸ್ತ್ರ್ರಜ್ಞರಿಂದ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಡೆಯುವವನು ಬೀಳುವುದು ಸಹಜ, ಆದರೆ ನಾನು ಬಿದೆ ನಾನು ತಪ್ಪು ಮಾಡಿದೆ ಎಂದು ಅಲ್ಲಿಯೇ ಕೊರಗದೇ ನಾನು ಬೀಳಲು ಕಾರಣವೇನೆಂದು ತಿಳಿದು ಅದನ್ನು ಸರಿಪಡಿಸಿಕೊಂಡು ಮುನ್ನಡೆಯುವುದೇ ನಿಜವಾದ ಜೀವನ, ಆದರೆ ನಾನು ಬಿದ್ದೆ ಎಂದು ಅಲ್ಲಿಯೇ ಕೊರಗಿದರೆ ಅವನು ನಿಜವಾಗಿಯೂ ಅನುತ್ತೀರ್ಣ,

        ಆದರೆ ಇಲ್ಲಿ ಬಂದಿರುವ ನೀವುಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳು ಬಂದಿದ್ದೀರಿ ನೀವು ಪರೀಕ್ಷೇಯಲ್ಲಿ ಉತ್ತೀರ್ಣರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಇದಕ್ಕೆ ಉದಾಹರಣೆ ಎಂದರೆ ನಾವಿಂದು ಕಾಣುತ್ತಿರುವ ಈ ವಿದ್ಯುತ್ ಬೆಳಕು, ಈ ವಿದ್ಯುತ್ ಬಲ್ಬ್‍ಅನ್ನು ಕಂಡುಹಿಡಿದ ಥಾಮಸ್ ಆಲ್ಫಾ ಎಡಿಸನ್ ಬಲ್ಬ್‍ಅನ್ನು ಕಂಡುಹಿಡಿಯಲು ಹಲವಾರು ಬಾರಿ ಪ್ರಯತ್ನಮಾಡಿ ತನ್ನ ಮನೆಯನ್ನೆ ಸುಟ್ಟುಹಾಕಿ ವಿಫಲವಾದ ಆದರೆ ಅವನ ನಿಶ್ಚಚಯ ಹೇಗಿತ್ತೆಂದರೆ ನಾನು ಇದನ್ನು ಸಾಧಿಸಲೇಬೇಕೆಂಬ ಅನವನ್ನು ಕೊನೆಗೂ ಯಶಸ್ವಿಯಾಗುವಂತೆ ಮಾಡಿತು ಇನ್ನು ಮೊನ್ನೆ ಐ.ಎ.ಎಸ್ ತೇರ್ಗಡೆಹೊಂದಿದ ಕೋಲಾರದ ನಂದಿನಿ ಸಹ 2 ಬಾರಿಗೆ ಅನುತ್ತೀರ್ಣಳಾಗಿ ನಂತರ ತೇರ್ಗಡೆಹೊಂದಿದಳು ಎಂದು ಹೇಳಿ ವಿದ್ಯಾರ್ಥಿಗಳಿ ಆತ್ಮವಿಶ್ವಾಸವನ್ನು ತುಂಬಿದರು.

         ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮನಶಾಸ್ತ್ರಜ್ಞೆ ಡಾ.ಮಾಲತಿ ಮಾತನಾಡಿ ಇಲ್ಲಿರುವ ಎಲ್ಲರೂ ಸಹ ಪ್ರತಿಭಾವಂತರೆ ಆದರೆ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವಲ್ಲಿ ಸ್ವಲ್ಪ ಎಡವಿದ್ದೀರಿ, ಆದರೆ ಕ್ರಮಬದ್ಧವಾದ ಅಧ್ಯಯನ ಮಾಡಿ ನೀವು ಪರೀಕ್ಷಗೆ ಹೋಗುವುದಕ್ಕಿಂತ ಮೊದಲೇ ಚೆನ್ನಾಗಿ ಅಭ್ಯಾಸ ಮಾಡಿ ಆದರೆ ಯಾವುದೇ ಗೊಂದಲಕ್ಕೆ ಒಳಗಾಗದೇ ಸಾವಕಾಶವಾಗಿ ಉತ್ತಿರಿಸಿ, ಸುಮ್ಮನೇ ಓದುತ್ತೇನೆಂದು ಓದದೇ ಅರ್ಥಮಾಡಿಕೊಂಡು ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನೇಳಿದರು.

         ಮನಶಾಸ್ತ್ರಜ್ಞೆ ಶಾಂತಲ ಮಾತನಾಡುತ್ತಾ ನೀವು ಪುಸ್ತಕವನ್ನು ನೋಡಿದರೆ ಇದು ಇಷ್ಟು ದೊಡ್ಡದು ಇದನ್ನು ಓದುವುದೇಗೆ ಎನ್ನುತ್ತೀರಿ ಆದರೆ ನೀವು ಅದರ ಉತ್ತರವನ್ನು ನೋಡಿದರೆ ಇಷ್ಟುದ್ದವಿದೆ ಇದನ್ನು ನಾನೇಗೆ ಓದುವುದು ಎಂದು ತಲೆಮೇಲೆ ಕೈಹೊತ್ತುಕೊಳ್ಳದೇ ಅದನ್ನೇ 4 ಭಾಗಗಳಾಗಿ ಮಾಡಿಕೊಂಡು ಸ್ವಲ್ಪಸ್ವಲ್ಪ ಅಭ್ಯಸಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

         ಕಾರ್ಯಕ್ರದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲ್ಪತರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗೀತಾಲಕ್ಷ್ಮಿ ಸೋಲೇ ಗೆಲುವಿನ ಸೋಪಾನ, ಇಲ್ಲಿಗೆದ್ದವನು ಇಲ್ಲೇ ತೃಪ್ತಿಪಟ್ಟರೆ ಸೋತವನು ಪ್ರಯತ್ನಿಸಿದರೆ ಈಡಿ ವಿಶ್ವವನ್ನೇ ಗೆಲ್ಲಬಹುದೆಂದು ತಿಳಿದು ಮುನ್ನುಗಿದರೆ ನೀವು ಏನನ್ನಾದರು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿ ಆತ್ಮಸ್ಥೈರ್ಯ ತುಂಬಿದರು.

          ಕಾರ್ಯಕ್ರದಲ್ಲಿ ತಾ.ಕ.ಸಾ.ಪ ಅಧ್ಯಕ್ಷ ಕೆ.ಬಾಲಕೃಷ್ಣ, ತಿಪಟೂರು ಕೃಷ್ಣ, ಭಾನುಪ್ರಕಾಶ್.ಹೆಚ್.ಜೆ, ಕನ್ನಡ ಅಭಿವೃದ್ಧಿಪ್ರಾಧಿಕಾರದ ಆನಂದ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಲ್ಪತರು ಪದವಿ ಪೂರ್ವ ಕಾಲೇಜಿನ ಕಾಲೇಜಿನ ಸಿಬ್ಬಂದಿ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link