ಎಂ ಎನ್ ಕೋಟೆ

ಹೊರಗಡೆಯಿಂದ ಬಂದವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬೇಡಿ. ಏನಾದರೂ ಮಣೆ ಹಾಕಿದರೆ ಸ್ಥಳೀಯರಿಗೆ ಚುನಾವಣೆ ನಿಲ್ಲಲು ಬಿಡುವುದಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಸೋಮಲಾಪುರ, ಇಡಕನಹಳ್ಳಿ, ಚೇಳೂರು ಹಾಗೂ ನಿಟ್ಟೂರು ಗ್ರಾಮಗಳಲ್ಲಿ ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ಪರ ರೋಡ್ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಈಗಾಗಲೇ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯಬೇಕಾದರೆ ಒಂದಲ್ಲ ಒಂದು ಗೊಂದಲ ಸೃಷ್ಟಿಸಿ ಕಡಿಮೆ ನೀರನ್ನು ಬಿಟ್ಟಿದ್ದಾರೆ. ಅಂಥವರಿಗೆ ನಾವು ಮತ ಹಾಕಬಾರದು ಎಂದರು.
ನಮ್ಮ ತುಮಕೂರು ಜಿಲ್ಲೆಯನ್ನು ದೇವೆಗೌಡ್ರಿಗೆ ಏನಾದರೂ ಮಾರಿಕೊಂಡರೆ, ನಾಳೆ ನಮ್ಮ ಜಿಲ್ಲೆಯ ಮಕ್ಕಳು ದಿವಾಳಿಯಾಗುತ್ತಾರೆ. ಈ ಜಿಲ್ಲೆಯ ಮಕ್ಕಳಿಗೆ ಏನು ಇಲ್ಲದ ಪರಿಸ್ಥಿತಿ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಎಸ್ ಬಸವರಾಜು, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಅ.ನಾ.ಲಿಂಗಪ್ಪ, ಬಿಜೆಪಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬೆಟ್ಟಸ್ವಾಮಿ, ಚಂದ್ರಶೇಖರಬಾಬು, ಪ್ರಕಾಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








