
ಬೆಂಗಳೂರು: ಮಳೆ ಅಭಾವದಿಂದ ಭೀಕರ ಬರಗಾಲದ ಸಂಕಷ್ಟ ಎದುರಿಸುತ್ತಿರುವ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೆ ಬಿಗ್ ಶಾಕ್ ನೀಡಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಶಿಫಾರಸನ್ನು ಪುರಸ್ಕರಿಸಿರುವ ಪ್ರಾಧಿಕಾರವು, ತಮಿಳುನಾಡಿಗೆ ಇಂದು (ಆಗಸ್ಟ್ 12) ಬೆಳಿಗ್ಗೆ 8 ಗಂಟೆಯಿAದ ಅನ್ವಯವಾಗುವಂತೆ 15 ದಿನಗಳ ಕಾಲ ಪ್ರತಿನಿತ್ಯ 12,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ವಾದ ಮಂಡಿಸಿದ ರಾಜ್ಯ ಸರ್ಕಾರವು, ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ಅವೈಜ್ಞಾನಿಕವಾಗಿದೆ. ಪಾಲಿಸಲು ಕಷ್ಟಕರವಾಗಿದೆ. ಕಳೆದ 30 ವರ್ಷಗಳ ಸರಾಸರಿಯಂತೆ ಕಾವೇರಿ ಜಲಾಶಯಗಳಲ್ಲಿ ಶೇ.47 ರಷ್ಟು ನೀರಿನ ಕೊರತೆಯಿದೆ. ಮಳೆ ಕಡಿಮೆಯಾಗಿ ಜಲಾಶಯಗಳಿಗೆ ನೀರಿನ ಒಳಹರಿವೂ ಸಹ ಕಡಿಮೆಯಾಗಿದೆ. ಡ್ಯಾಂಗಳಲ್ಲಿ ಕೇವಲ 77. 46 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ ಎಂದು ಅಂಕಿಅAಶಗಳ ಸಮೇತ ಮಾಹಿತಿ ನೀಡಿತು.
ಈ ಹಿಂದಿನ ವಿಚಾರಣೆ ವೇಳೆ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು ತಮಿಳುನಾಡಿಗೆ 52,500 ಕ್ಯೂಸೆಕ್ ನೀರು ಬಿಡಲು ನೀಡಿದ್ದ ಆದೇಶಕ್ಕಿಂತಲೂ ಹೆಚ್ಚಾಗಿ 86,942 ಕ್ಯೂಸೆಕ್? ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಇನ್ನೂ ಹೆಚ್ಚಿನ ನೀರು ಬಿಡಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಕುಡಿಯುವ ನೀರಿಗೆ ಅಗತ್ಯವಿರುವ ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕಿದೆ. ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ತನ್ನ ಆದೇಶವನ್ನು ಮುಂದೂಡಬೇಕು. ಒಂದು ವೇಳೆ ಆದೇಶ ನೀಡಲೇಬೇಕೆಂದರೆ 12 ಸಾವಿರ ಕ್ಯೂಸೆಕ್ ಬದಲಿಗೆ ಮಳೆಯ ಪ್ರಮಾಣ ನೋಡಿಕೊಂಡು 10 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ ನೀಡುವಂತೆ ಮನವಿ ಮಾಡಿದೆ.
ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆಗಳಿಲ್ಲ. 75 ಸಾವಿರ ಕ್ಯೂಸೆಕ್‌ನಷ್ಟಿದ್ದ ಒಳಹರಿವು ಈಗ 20 ಸಾವಿರಕ್ಕೆ ಕುಸಿದಿದೆ. ರಾಜ್ಯದಲ್ಲಿ ಕಾವೇರಿ ಕಣಿವೆ ಪ್ರದೇಶದ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಅಗತ್ಯವಿದೆ. ರೈತರು ಬೆಳೆಗಳಿಗೆ ನೀರು ಬಿಡಲು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವ ಅಂಶಗಳನ್ನು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಮುಂದೆ ಮಂಡಿಸಲಾಯಿತು.
ಇನ್ನೊAದೆಡೆ ತಮಿಳುನಾಡು ತನ್ನ ವಾದ ಮಂಡಿಸಿ ಜೂನ್ ಮತ್ತು ಜುಲೈ ತಿಂಗಳ ಬಾಕಿ ನೀರನ್ನು ಬಿಡಲು ಕರ್ನಾಟಕಕ್ಕೆ ಸೂಚಿಸಬೇಕು. ಕಾವೇರಿಯ ಜಲಾಶಯಗಳಲ್ಲಿ ಇಂದಿಗೆ 21 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಡ್ಯಾಂಗಳಲ್ಲಿ ಶೇ.75 ರಷ್ಟು ನೀರು ಭರ್ತಿಯಾಗಿದೆ. 12 ಸಾವಿರ ಕ್ಯೂಸೆಕ್ ಬದಲಿಗೆ ಪ್ರತಿ ದಿನ ಆ.13 ರಿಂದ ಆ.31ರ ವರೆಗೆ 37 ಟಿಎಂಸಿ ನೀರನ್ನು ಬಿಡಲು ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ಮನವಿ ಮಾಡಿದೆ.
ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳ ವಾದ ಆಲಿಸಿದ ನಂತರ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದ್ದ ಶಿಫಾರಸಿನಲ್ಲಿ ಯಾವುದೇ ಬದಲಾವಣೆ ಮಾಡದೆ ನೀರು ಬಿಡಲು ನಿರ್ದೇಶನ ನೀಡಿದೆ.
ತಮಿಳುನಾಡಿನ ಬೇಡಿಕೆ ಏನಿತ್ತು? : ಇನ್ನೊಂದೆಡೆ ತಮಿಳುನಾಡು ಸರಕಾರ, ಜೂನ್ ಮತ್ತು ಜುಲೈ ತಿಂಗಳ ಬಾಕಿ ನೀರನ್ನು ತಕ್ಷಣವೇ ಹರಿಸಬೇಕು ಹಾಗೂ ಆಗಸ್ಟ್ 13 ರಿಂದ 31 ರವರೆಗೆ ಒಟ್ಟು 37 ಟಿಎಂಸಿ ನೀರನ್ನು ಹರಿಸಲು ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಪಟ್ಟು ಹಿಡಿದಿತ್ತು. ಎರಡು ರಾಜ್ಯಗಳ ವಾದ ಆಲಿಸಿದ ಅWಒಂ, ಅಂತಿಮವಾಗಿ ಶಿಫಾರಸನ್ನೇ ಎತ್ತಿಹಿಡಿಯಿತು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯದ ಸಿದ್ಧತೆ : ಪ್ರಾಧಿಕಾರದ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆಗಸ್ಟ್ 13 ರಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದ್ದು, ಈ ವೇಳೆ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾನೂನು ತಂಡದೊAದಿಗೆ ಚರ್ಚಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನೀರಿನ ಲಭ್ಯತೆ ಗಮನಿಸಿ, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ನಾವು ರೈತರನ್ನು ಬದುಕಿಸುತ್ತೇವೆ, ಪ್ರಕೃತಿ ನಮ್ಮನ್ನು ಉಳಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಸಚಿವ ಚಲುವರಾಯಸ್ವಾಮಿ ಕೂಡ ಪ್ರತಿಕ್ರಿಯಿಸಿ, ದಿನಕ್ಕೆ 12,000 ಕ್ಯೂಸೆಕ್ ಎಂದರೆ ಸರಿಸುಮಾರು 1 ಖಿಒಅ ನೀರು ಬಿಡಬೇಕಾಗುತ್ತದೆ. ಮಳೆ ಕಡಿಮೆಯಾದರೆ ನೀರು ಬಿಡುವುದು ಕಷ್ಟ. ಹೀಗಾಗಿ ಸುಪ್ರೀಂ ಕೋರ್ಟ್ಗೆ ಹೋಗುವ ಆಲೋಚನೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಕರ್ನಾಟಕ ಬಂದ್’ : ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಮಾತನಾಡಿ, ಈ ತಿಂಗಳ 13 ರಂದು ರಾಜ್ಯಾದ್ಯಂತ ಶಾಂತಿಯುತವಾಗಿ ‘ಕರ್ನಾಟಕ ಬಂದ್’ ನಡೆಯಲಿದ್ದು, ಪ್ರತಿಯೊಬ್ಬರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದ್ದಾರೆ.
ಬಾಕ್ಸ್
ನೀರಿನ ಲಭ್ಯತೆ ಗಮನಿಸಿ ತೀರ್ಮಾನ – ಸಿಎಂ ಡಿಕೆಶಿ
12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಆದೇಶ ನೀಡಿದೆ. ಒಳಹರಿವು ಗಮನಿಸುತ್ತೇನೆ. ನಾವು ರೈತರ ಹಿತ ಕಾಪಾಡಬೇಕು. ಕೋರ್ಟ್ ಆದೇಶ ಪಾಲಿಸಬೇಕು. ನೀರಾವರಿ ಸಚಿವರ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬೆಳೆ ಉಳಿಸಬೇಕಾಗಿದೆ. ನೀರಿನ ಲಭ್ಯತೆ ಗಮನಿಸಿ ತೀರ್ಮಾನ ಮಾಡ್ತೇವೆ. ನಾನು ನೀರಾವರಿ ವಿಚಾರದಲ್ಲಿ ಬಹಳ ಪಾರದರ್ಶಕವಾಗಿದ್ದೇನೆ. ರಾಜಕಾರಣ ಮಾಡಲು ಆಗಲ್ಲ. ನಾವು ರೈತರನ್ನು ಬದುಕಿಸುತ್ತೇವೆ. ತಾಳ್ಮೆಯಿಂದ ಇರಿ. ಪ್ರಕೃತಿ ನಮ್ಮನ್ನು ಉಳಿಸುತ್ತದೆ” ಎಂದು ವಿಧಾನಸೌಧದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯ ಮಂಡಿಸಿದ ಬರದ ಅಂಕಿ-ಅAಶಗಳು ನೀರಲ್ಲಿ ಹೋಯ್ತು! : ಪ್ರಾಧಿಕಾರದ ಮುಂದೆ ಸುದೀರ್ಘ ವಾದ ಮಂಡಿಸಿದ ರಾಜ್ಯ ಸರ್ಕಾರವು, ಕಾವೇರಿ ಜಲಾಶಯಗಳಲ್ಲಿ ತೀವ್ರ ನೀರಿನ ಅಭಾವವಿರುವುದನ್ನು ಅಂಕಿ-ಅ0ಶಗಳ ಸಮೇತ ವಿವರಿಸಿತು. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಪ್ರಸ್ತುತ ಜಲಾಶಯಗಳಲ್ಲಿ ಶೇ. 47 ರಷ್ಟು ನೀರಿನ ಕೊರತೆ ಇದೆ. ರಾಜ್ಯದ ಡ್ಯಾಂಗಳಲ್ಲಿ ಪ್ರಸ್ತುತ ಕೇವಲ 77.46 ಖಿಒಅ ಸಂಗ್ರಹ ಮಾತ್ರ ಲಭ್ಯವಿದ್ದು, ಜಲಾಶಯಗಳಿಗೆ ಬರುತ್ತಿದ್ದ 75,000 ಕ್ಯೂಸೆಕ್ ಒಳಹರಿವು ಈಗ 20,000 ಕ್ಯೂಸೆಕ್‌ಗೆ ಕುಸಿದಿದೆ ಎಂದು ರಾಜ್ಯ ವಿವರಿಸಿದೆ. ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆಯ ನಗರಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿರುವುದರಿಂದ, ಆದೇಶವನ್ನು ಮುಂದೂಡಬೇಕು ಅಥವಾ 12,000 ಬದಲಿಗೆ 10,000 ಕ್ಯೂಸೆಕ್ ನೀರು ಬಿಡಲು ಅವಕಾಶ ನೀಡಬೇಕು ಎಂದು ಮಾಡಿದ ಮನವಿಗೆ ಪ್ರಾಧಿಕಾರ ಕಿವಿಕೊಡಲಿಲ್ಲ.








