ಆ.14 ರಂದು ವಿಪ ಸಭಾಪತಿ ಚುನಾವಣೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಚುನಾವಣೆಗೆ ಆಗಸ್ಟ್ 14ರಂದು ದಿನಾಂಕ ನಿಗದಿಪಡಿಸಿ ಇಂದು ಅಧಿಸೂಚನೆ ಹೊರಡಿಸಲಾಗಿದೆ.

ಬಸವರಾಜ ಹೊರಟ್ಟಿ ರಾಜೀನಾಮೆಯಿಂದ ತೆರವಾಗಿರುವ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಈಗಾಗಲೇ ಸಲೀಂ ಅಹಮ್ಮದ್ ಅವರನ್ನು ಸಭಾಪತಿ ಸ್ಥಾನದ ಅಭ್ಯರ್ಥಿಯಾಗಿ ಘೋಷಿಸಿದೆ. ಉಮಾಶ್ರೀ ಉಪಸಭಾಪತಿ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಪುಟ್ಟಣ್ಣರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಲಾಗಿದೆ.

ಬಸವರಾಜ ಹೊರಟ್ಟಿ ಆ.14ರಂದು ರಾಜೀನಾಮೆ ಕೊಡಲು ತೀರ್ಮಾನಿಸಿದ್ದರು. ಆದರೆ ಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿ ಕಾಂಗ್ರೆಸ್ ಮುಖಂಡರು ಆ.7ರಂದು ವಿಧಾನಸೌಧದಲ್ಲಿನ ಸಭಾಪತಿ ಚೇಂಬರ್??ಗೆ ಆಗಮಿಸಿ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದರು. ಈ ಮಧ್ಯೆ ಹೊರಟ್ಟಿ ಮೇಲೆ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಚರ್ಚೆಯೂ ನಡೆದಿತ್ತು. ಇತ್ತ ಸರ್ಕಾರ ರಾಜೀನಾಮೆ ನೀಡಲು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಹೊರಟ್ಟಿ ಅಂದೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜೀನಾಮೆಯ ಬಳಿಕ ಮಾತನಾಡಿದ್ದ ಹೊರಟ್ಟಿ, ಕೂಡಲೇ ರಾಜೀನಾಮೆ ಕೊಡಿ ಅಂದರು. ಅದಕ್ಕಾಗಿ ಕೊಟ್ಟೆ. ಆ.14ರಂದು ರಾಜೀನಾಮೆ ಕೊಡಬೇಕಿತ್ತು. ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಪಡೆದಿರುವುದು ಸ್ವಲ್ಪ ಬೇಸರ ಮೂಡಿಸಿದೆ ಎಂದಿದ್ದರು.

Recent Articles

spot_img

Related Stories

Share via
Copy link