ಹುಳಿಯಾರು
ಹುಳಿಯಾರಿನಲ್ಲಿ ಇತ್ತೀಚೆಗೆ ನಡೆದ ಹೋಬಳಿ ಮಟ್ಟದ ಕನಕ ಜಯಂತಿ ಆಚರಣೆಯ ಜಮಾ ಮತ್ತು ಖರ್ಚಿನ ಸಭೆಯು ಮಂಗಳವಾರ ಪ್ರವಾಸಿ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.
ಕನಕ ಜಯಂತಿಯನ್ನು ಅದ್ದೂರಿಯಾಗಿ ಮಾಡುವ ಜೊತೆಗೆ 33,060 ರೂ.ಗಳನ್ನು ಉಳಿಸಿರುವ ಬಗ್ಗೆ ಸಂಘಟಕರನ್ನು ಸಭೆಯಲ್ಲಿ ಸೇರಿದ್ದ ಕುರುಬ ಸಮುದಾಯದವರು ಮುಕ್ತ ಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.
ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರ ಸಮಾಜದವರಿಗೂ, ವಿಶೇಷವಾಗಿ ಆರ್ಯವೈಶ್ಯ ಸಮಾಜದವರಿಗೆ ಅಭಿನಂದಿಸಲಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ಸಮಾಜದ ಬಡ ಮಕ್ಕಳಿಗೆ ಹಾಗೂ ಉತ್ತಮ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಧನ ಸಹಾಯ ಮಾಡಲು ನಿರ್ಧರಿಸಲಾಯಿತು.
ಹೊಸದುರ್ಗ ಸಮೀಪದ ಕೆಲ್ಲೋಡಿನ ಕನಕ ಶಾಖಾಮಠದಿಂದ ನಿರ್ಮಾಣ ಮಾಡುತ್ತಿರುವ ಶಾಲಾ, ಕಾಲೇಜು ಮತ್ತು ವಿದ್ಯಾರ್ಥಿ ನಿಲಯ ಕಾರ್ಯಗಳಿಗೆ ಕೈ ಜೋಡಿಸಲು ನಿರ್ಧರಿಸಲಾಯಿತು.
ಕನಕ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ಇಚ್ಚಿಸಿದಂತೆ ಹುಳಿಯಾರಿನಲ್ಲಿ ಸರ್ವ ಧರ್ಮ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.ಕನಕ ಜಯಂತಿ ಕಾರ್ಯಕ್ರಮದ ಜಮಾ & ಖರ್ಚು ಲೆಕ್ಕದ ನಂತರ ಉಳಿತಾಯ ಮಾಡಿರುವ 33,060 ರೂ.ಗಳನ್ನು ಕನಕ ಪತ್ತಿನ ಸಹಕಾರ ಸಂಘದಲ್ಲಿ ಮುಂದಿನ ಸಾಲಿನ ಕನಕ ಜಯಂತಿ ಆಚರಣೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಠೇವಣಿ ಇಡಲು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
