ಜನೋಪಯೋಗಿ ಕೆಲಸ ಮಾಡಲು ಎಲ್ಲ ಸಂಘಟನೆಗಳು ಮುಂದಾಗಬೇಕು

ಸವಣೂರ :

       ಜೀವನ ಸಾರ್ಥಕ ಆಗಬೇಕಾದರೆ ಸಮಾಜ ಸೇವೆ ಮಾಡುವ ಮನೋಭಾವನೆ ಅವಶ್ಯಕ. ಕಡು ಬಡವರಿಗೆ ಕಣ್ಣುಗಳ ತಪಾಸಣೆ ಹಾಗೂ ಜನೋಪಯೋಗಿ ಕೆಲಸ ಮಾಡಲು ಎಲ್ಲ ಸಂಘಟನೆಗಳು ಮುಂದಾಗಬೇಕು ಎಂದು ಅಖಿಲ ಭಾರತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ ಲಮಾಣಿ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆ ಸವಣೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆ,ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ,ತಾಲೂಕ ವೈದ್ಯಾಧಿಕಾರಿಗಳ ಕಛೇರಿ.ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ ಹಾಗೂ ಅಖಿಲ ಭಾರತ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಇವುಗಳ ಸಹಕಾರ, ಸಂಯುಕ್ತಾಶ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಚಾಲನೆ ನೀಡಿ ಅವರು ಮಾತನಾಡಿದರು.

        ಹಳ್ಳಿ ಜನರಿಗೆ ಸಾಕಷ್ಟು ಸೌಲಭ್ಯಗಳು ಗೊತ್ತೆ ಆಗುವುದಿಲ್ಲ.ವಿದ್ಯಾವಂತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅವುಗಳ ತಿಳುವಳಿಕೆ ಹಾಗೂ ಜಾಗೃತಿ ಕಾರ್ಯ ಮಾಡುವ ಕಾಯಕ ಪ್ರವೃತರಾಗಬೇಕು.ಇಂತಹ ಜನೋಪಯೋಗಿ ಕೆಲಸ ಮಾಡಿದರೆ ಸಮಾಜದ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಸಾಧ್ಯ. ಉತ್ತಮ ಕೆಲಸವನ್ನು ನಮ್ಮ ಸಂಘಟನೆಯ ಮುಖ್ಯ ಧ್ಯೇಯವಾಗಿಟ್ಟುಕೊಂಡು ಮುಂದುವರಿಸುತ್ತೇವೆ ಎಂದರು.

         ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್‍ಸಾಬ ಬುಡಂದಿ ಮಾತನಾಡಿ ಯುವಕರು ಹಾಗೂ ಸಂಘಟನೆಗಳು ಮನಸ್ಸು ಮಾಡಿದರೆ ದೇಶ ಅಭಿವೃದ್ಧಿ ಹೊಂದುತ್ತದೆ.ನಿಸ್ವಾರ್ಥ ವ್ಯಕ್ತಿಗಳಿಂದ ಸಮಾಜದ ಬದಲಾವಣೆ ಸಾಧ್ಯ. ಈ ಶಿಬಿರವು ನೂರಾರು ಬಡ ಕುಟುಂಬಗಳಿಗೆ ನೆರವಾಗುತ್ತಿರುವುದು ತುಂಬಾ ಉಪಯುಕ್ತ. ಯುವಕರ ಸೇವಾ ಭಾವಕ್ಕೆ ಹಿರಿಯರ ಅನುಭವ ನೀಡಿದರೆ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂದರು.

        ನಿವೃತ್ತ ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿಗಳಾದ ಶಿವಾನಂದ ಬಡಶೆಟ್ಟಿ ಯುವಕರಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಆಸ್ಪತ್ರೆಯ ಡಾ|| ವಿಕ್ರಮ್,ಅರುಣ ಜಿ, ಶಂಕರ ನಾಯ್ಕ.ಸಂಘಟನೆಯ ಫಕ್ಕಿರೇಶ ಕಾಳಿ. ವೆಂಕಟೇಶ ಕರೆಕಲ್ಲ.ಮಾರುತಿ ಬೇವಿನಹಳ್ಳಿ.ಚಂದ್ರು ತಳವಾರ.ಈರಣ್ಣ ಲಮಾಣಿ. ಮಹೇಶ ಪೂಜಾರ.ರಾಜೇಶ ಚವ್ಹಾಣ.ಅರುಣ ಪಾಟೀ.ಮೆಹಬೂಬಸಾಬ ಮುಂಡರಗಿ. ಮಾತೇಶ ಕರಬರಿ ಸೇರಿದಂತೆ ಹಿರೇಮುಗದೂರ ಅಮ್ಮಾ ಸಂಸ್ಥೆ(ರಿ) ಪದಾಧಿಕಾರಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link