ಭ್ರಷ್ಟಾಚಾರ ವಿರೋಧಿ ಜಾಗೃತ ಅರಿವು ಸಪ್ತಾಹ

ಬ್ಯಾಡಗಿ:

      ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತ ಅರಿವು ಸಪ್ತಾಹದ ಅಂಗವಾಗಿ ಗ್ರಾಹಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

       ಬಳಿಕ ಮಾತನಾಡಿದ ಶಾಖಾ ವ್ಯವಸ್ಥಾಪಕ ಎಸ್.ಎನ್.ಯಾಜಿ, ಆಡಳಿತ ವ್ಯವಸ್ಥೆಯಲ್ಲಿ ಅವ್ಯವಹಾರಗಳು ನಡೆಯದಂತೆ ಜನರಲ್ಲಿ ಅರಿವು ಮೂಡಿಸಿ ತನ್ಮೂಲಕ ಜಾಗೃತಿಯನ್ನುಂಟು ಮಾಡುವ ಕೆಲಸವಾಗಬೇಕಾಗಿದ್ದು ಇದರಿಂದ ಮಾತ್ರ ಸುಭದ್ರ ಸಮಾಜ ನಿರ್ಮಾಣ ಸಾಧ್ಯವೆಂದರು.

     ಆಡಳಿತದಲ್ಲಿ ಗುಣಮಟ್ಟ ಸುಧಾರಣೆ ಮತ್ತು ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಾಗದಂತೆ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಇಲ್ಲ ದಿದ್ದರೇ ದೇಶದಲ್ಲಿ ಜನಸಾಮಾನ್ಯರು ಬದುಕು ನಡೆಸುವುದು ದುಸ್ತರವಾಗಲಿದೆ, ಸರ್ಕಾರದ ಎಲ್ಲ ವಿಭಾಗಗಳು ನಿತ್ಯದ ಕಾರ್ಯ ಚಟುವಟಿಕೆಗಳು ವ್ಯವಸ್ಥಿತವಾಗಿ ಮತ್ತು ಕಾನೂನಾತ್ಮಕವಾಗಿ ನಡೆದು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವಂತಾಗಬೇಕು ಈ ಕುರಿತು ಜಾಗೃತಿ ಮೂಡಿಸಿ ಭ್ರಷ್ಟ ರಹಿತ ಸಮಾಜ ನಿರ್ಮಿಸಬೇಕಿದೆ ಎಂದರು.

         ಅನಗತ್ಯ ವಿಳಂಬವೂ ಭ್ರಷ್ಠಾಚಾರಕ್ಕೆ ಸಮ: ಕರ್ನಾಟಕ ರಕ್ಷಣಾ ವೇದಿಕೆಯ ಎ.ಬಿ.ಪರಮೇಶ್ವರಪ್ಪ ಮಾತನಾಡಿ, ಭ್ರಷ್ಟಾಚಾರ ವೆಂದರೆ ಕೇವಲ ಹಣ ಪಡೆದು ಕೆಲಸ ಮಾಡಿಕೊಡುವುದಷ್ಟೇ ಅಲ್ಲ ನಿಮ್ಮ ಕೆಲಸಗಳನ್ನು ಮಾಡಿಕೊಡಲು ಅನಗತ್ಯವಾಗಿ ವಿಳಂಬ ಮಾಡುವುದು ಕಾರಣ ವಿಲ್ಲದೇ ಓಡಾಡಿಸುವುದೂ ಸಹ ಭ್ರಷ್ಟಾಚಾರದ ಒಂದು ಭಾಗವಾಗಿದೆ, ಇದಕ್ಕಾಗಿ ಸರ್ಕಾರ ಹಲವಾರು ನಿಯಮಗಳನ್ನು ರೂಪಿಸಿ ಜಾರಿಗೆ ತಂದಿದ್ದರೂ ಸಹ ಸಕಾರಾತ್ಮಕ ಸ್ಪಂದನೆಗಳಿಲ್ಲದಿರುವುದು ನೋವಿನ ಸಂಗತಿ ಯಾಗಿದೆ ಎಂದರು.

        ಭ್ರಷ್ಟಾಚಾರ ರಹಿತ ಸಂಸ್ಥೆಗಳನ್ನು ಹುಡುಕಬೇಕಾಗಿದೆ: ಬಸವರಾಜ ಹಾವನೂರ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ತಾಂಡ ವವಾಡುತ್ತಿದ್ದು ಭ್ರಷ್ಟ ರಹಿತ ಸಂಸ್ಥೆಗಳನ್ನು ಹುಡುಕುವಂತಾಗಿದೆ, ಪರ್ಯಾಯವಾಗಿ ಸಾರ್ವಜನಿಕರೇ ಇದರ ಬಗ್ಗೆ ಎಚ್ಚೆತ್ತು ಕೊಳ್ಳುವ ಲಂಚ ನೀಡದೇ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವಾಗ ಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ನೂರಾರು ಗ್ರಾಹಕರು ಮತ್ತು ಸಿಬ್ಬಂದಿಗಳು ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link