ಚಿಕ್ಕಬಳ್ಳಾಪುರ: ಎಸ್ ಪಿ ಕಾರು ಅಪಘಾತ …!!!

ಚಿಕ್ಕಬಳ್ಳಾಪುರ:

         ದೇವಸ್ಥಾನದಿಂದ ವಾಪಾಸ್ಸಾಗುತ್ತಿದ್ದಾಗ ಎಸ್‍ಪಿ ರಾಧಿಕಾ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಬಳಿ ನಡೆದಿದೆ.

        ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆ ಹಿನ್ನೆಲೆ: 

        ಈ ಹಿಂದೆ ಮಂಡ್ಯ ಎಸ್‍ಪಿ ಆಗಿದ್ದ ರಾಧಿಕಾ ಸದ್ಯ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸ್‍ಪಿ ರಾಧಿಕಾ ಕುಟುಂಬಸ್ಥರ ಸಮೇತ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ದೇವಾಲಯಕ್ಕೆ ಆಗಮಿಸಿ, ದೇವಾಲಯದಲ್ಲಿ ನಾಗಪ್ರತಿಷ್ಟಪನಾ ಪೂಜೆ ಸಲ್ಲಿಸಿ ಬೆಂಗಳೂರಿಗೆ ಖಾಸಗಿ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

         ಈ ವೇಳೆ ಕಲ್ಲಿನಾಯಕನಹಳ್ಳಿ ಬೆಂಗಳೂರಿನಿಂದ ಪೆನುಗೊಂಡ ಕಡೆಗೆ ತೆರಳುತ್ತಿದ್ದ ಭಾರತಿ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ರಾಧಿಕಾ ಹಾಗೂ ಕುಟುಂಬಸ್ಥರು ಸೇರಿದಂತೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link